FacebookTwitter

ಚಾಮರಾಜಪೇಟೆಯಲ್ಲಿ ಅಕ್ರಮ ನರ್ಸಿಂಗ್ ಹೋಂ

    User Rating:  / 0

ಬೆಂಗಳೂರು(ಮಾ.28): ಮನೆಗೆಂದು ಅನುಮತಿ ಪಡೆದು ಅಕ್ರಮವಾಗಿ ನರ್ಸಿಂಗ್ ಹೋಂವೊಂದು ನಿರ್ಮಾಣವಾಗುತ್ತಿದೆ. ಚಾಮರಾಜಪೇಟೆಯ ನಾಲ್ಕನೇ ಕ್ರಾಸ್ನಲ್ಲಿ ಈ ಅಕ್ರಮ ಕಟ್ಟಡ ನಿರ್ಮಾಣವಾಗುತ್ತಿದೆ. ನೆರೆಯವರು ಇದನ್ನು ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.

ವಿಕ್ಟೋರಿಯಾ ಆಸ್ಪತ್ರೆಯ ವೈದ್ಯ ಡಾ. ವಿನಯ್ ಮತ್ತು ಕಿಮ್ಸ್ ಆಸ್ಪತ್ರೆಯ ವೈದ್ಯೆ ಡಾ.ಭಾರ್ಗವಿ ದಂಪತಿ ಈ ಕಟ್ಟಡದ ಮಾಲೀಕರಾಗಿದ್ದಾರೆ. ಈ ದಂಪತಿ ತಮ್ಮ ನಿವೇಶನದಲ್ಲಿ ಖಾಲಿ ಇರುವ ಸ್ವಲ್ಪ ಜಾಗದಲ್ಲಿ ಮನೆ ಕಟ್ಟಿಕೊಳ್ಳುತ್ತೇನೆಂದು ಮಹಾನಗರಪಾಲಿಕೆಯ ಅನುಮತಿ ಪಡೆದುಕೊಂಡಿದ್ದಾರೆ. ಪಾಲಿಕೆ ಕೇವಲ 2 ಅಂತಸ್ತಿನ ಕಟ್ಟಡಕ್ಕೆ ಮಾತ್ರ ಅನುಮತಿ ನೀಡಿತ್ತು. ಆದರೂ, ಅದನ್ನು ಲೆಕ್ಕಿಸದೇ ಈ ವೈದ್ಯ ದಂಪತಿ ಐದು ಅಂತಸ್ತನ್ನು ಮೀರಿ ಕಟ್ಟಡ ನಿರ್ಮಾಣ ಮಾಡುತ್ತಿದ್ದಾರೆ.

ಅಕ್ಕಪಕ್ಕದ ಮನೆಯವರೂ ಕೂಡ ಈ ಅಕ್ರಮ ನಿರ್ಮಾಣವನ್ನು ವಿರೋಧಿಸಿದ್ದು, ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾರೆ....

ಈ ಬಗ್ಗೆ ಅರಿವಿಗೆ ಬಂದ ಬಿಬಿಎಂಪಿ, ಈ ಕಟ್ಟಡವನ್ನು ಕೆಡವಿ ಹಾಕುವುದಾಗಿ ನೋಟೀಸ್ ನೀಡಿದೆ. ನಿಯಮಗಳನ್ನು ಉಲ್ಲಂಘಿಸಿ ನಿರ್ಮಾಣವಾಗುತ್ತಿರುವ ಈ ನರ್ಸಿಂಗ್ ಹೋಂ ಅನ್ನು ಹಾಗೆಯೇ ಬಿಟ್ಟರೆ ಮುಂದೆ ಅಪಾರ ತೊಂದರೆಗಳಾಗಬಹುದೆಂಬುದು ಸಾರ್ವಜನಿಕರ ಆತಂಕ.....

- ರಜನಿ

 

 

 

Add comment




 

More items in this section

ARCHIVED ARTICLES