FacebookTwitter

ಜೈಲು ಸೇರಲು ಸಂಜಯ್ ದತ್ ಸಿದ್ಧ

    User Rating:  / 0

ಮುಂಬೈ(ಮಾ.28): ಮುಂಬೈ ಸ್ಫೋಟ ಪ್ರಕರಣ ಸಂಬಂಧ ಜೈಲು ಶಿಕ್ಷೆಗೆ ಒಳಪಟ್ಟಿರುವ ಬಾಲಿವುಡ್ ನಟ ಸಂಜಯ್ ದತ್ ತಾನು ಶಿಕ್ಷೆ ಅನುಭವಿಸಲು ಸಿದ್ಧನಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ. ತಮ್ಮ ನಿವಾಸದ ಬಳಿ ಸುದ್ದಿಗಾರರರೊಂದಿಗೆ ಮಾತನಾಡಿದ ಸಂಜಯ್ ದತ್, ಕೆಲ ಹೊತ್ತು ಗದ್ಗದಿತರಾಗಿಬಿಟ್ಟರು...

ತಾನು ಶಿಕ್ಷೆಯಿಂದ ವಿನಾಯಿತಿ ಪಡೆಯಲು ಇಷ್ಟಪಡುವುದಿಲ್ಲ, ಕ್ಷಮೆ ಕೋರಿ ಅರ್ಜಿ ಸಲ್ಲಿಸುವುದಿಲ್ಲ. ತಾನೊಬ್ಬ ಈ ದೇಶದ ಕಾನೂನುಬದ್ಧ ನಾಗರೀಕನಾಗಿ ತನಗೆ ನೀಡಿರುವ ಶಿಕ್ಷೆಯನ್ನು ಅನುಭವಿಸುತ್ತೇನೆ ಎಂದು ಮಾಧ್ಯಮದೆದುರು ಸಂಜಯ್ ಸ್ಪಷ್ಟವಾಗಿ ಹೇಳಿದ್ದಾರೆ. ತಾನೀಗ ಮಾನಸಿಕವಾಗಿ ಜರ್ಝರಿತನಾಗಿದ್ದೇನೆ. ಸಕಾಲದಲ್ಲಿ ಶರಣಾಗಿ ಶಿಕ್ಷೆ ಅನುಭವಿಸುತ್ತೇನೆಂದೂ ಅವರು ಹೇಳಿದ್ದಾರೆ....

1993ರ ಮುಂಬೈ ಸರಣಿ ಸ್ಫೋಟ ಪ್ರಕರಣದಲ್ಲಿ ಸಂಜಯ್ ತಪ್ಪಿತಸ್ಥನೆಂದು ನ್ಯಾಯಾಲಯ ಪರಿಗಣಿಸಿದೆ. ಅಕ್ರಮ ಎ.ಕೆ.56 ಮೊದಲಾದ ಶಸ್ತ್ರಾಸ್ತ್ರಗಳು ಸಂಜಯ್ ದತ್ ಮನೆಯಲ್ಲಿ ಪೊಲೀಸರಿಗೆ ಸಿಕ್ಕಿದ್ದವು. ಇವೆಲ್ಲವನ್ನೂ ದಾವೂದ್ ಗ್ಯಾಂಗ್ ಪೂರೈಸಿತ್ತು... ಈ ಸಂಬಂಧ ಸುಪ್ರೀಂಕೋರ್ಟ್ ಐದು ವರ್ಷ ಜೈಲುಶಿಕ್ಷೆಯನ್ನು ಸಂಜಯ್ ದತ್ಗೆ ವಿಧಿಸಿತ್ತು... ವಿಚಾರಣೆ ವೇಳೆ ಒಂದೂವರೆ ವರ್ಷ ಜೈಲಿನಲ್ಲಿದ್ದ ದತ್ ಅವರು ಇನ್ನೂ ಮೂರೂವರೆ ವರ್ಷ ಕಾರಾಗೃಹದಲ್ಲಿ ಸಜೆ ಅನುಭವಿಸಬೇಕಾಗಿದೆ.

ಬಾಲಿವುಡ್ಡಿನ ಬೇಡಿಕೆ ನಟರಲ್ಲೊಬ್ಬರಾದ ಸಂಜಯ್ ದತ್ ಅವರ ಕೈಯಲ್ಲಿ ಸದ್ಯಕ್ಕೆ ಅನೇಕ ಚಿತ್ರಗಳಿವೆ. ಅವುಗಳ ಚಿತ್ರೀಕರಣ ಮುಗಿಸುವ ದೊಡ್ಡ ಜವಾಬ್ದಾರಿ ದತ್ ಅವರ ಮೇಲಿದೆ. "ಪೊಲೀಸ್ ಗಿರಿ", "ಜಂಝೀರ್", "ಉಂಗ್ಲಿ", "ಪಿಕೆ" ಚಿತ್ರಗಳಲ್ಲಿ ಸಂಜಯ್ ದತ್ ಅಭಿನಯಿಸುತ್ತಿದ್ದಾರೆ. ಇವುಗಳಲ್ಲಿ ರಾಜಕುಮಾರ್ ಹಿರಾನಿ ಅವರ "ಪಿಕೆ" ಚಿತ್ರ ಬಹುತೇಕ ಪೂರ್ಣಗೊಂಡಿದೆ. ಪ್ರಿಯಾಂಕ ಚೋಪ್ರಾ ಮತ್ತು ರಾಮಚರಣ್ ತೇಜಾ ಅಭಿನಯದ "ಜಂಝೀರ್" ಚಿತ್ರದಲ್ಲಿ ಸಂಜಯ್ ಪಾತ್ರದ ಚಿತ್ರೀಕರಣ ಮುಗಿದಿದೆ. ಆ ಚಿತ್ರಕ್ಕೆ ಅವರ ಡಬ್ಬಿಂಗ್ ಕಾರ್ಯವಷ್ಟೇ ಬಾಕಿ ಇದೆ...

ಆದರೆ, ಸಂಜಯ್ ಅವರಿಗೆ ಹೊರೆಯಾಗಿರುವುದು ಟಿ.ಪಿ.ಅಗರವಾಲ್ ಅವರ "ಪೊಲೀಸ್ ಗಿರಿ" ಮತ್ತು "ಉಂಗ್ಲಿ" ಚಿತ್ರಗಳು. ಇವುಗಳ ಶೂಟಿಂಗ್ ಕಾರ್ಯ ಈಗಷ್ಟೇ ಆರಂಭಗೊಂಡಿದೆ. ಹೀಗಾಗಿ, ಸಂಜಯ್ ಜೈಲು ಸೇರುವ ಮುನ್ನ ಇವೆಲ್ಲವುಗಳ ಚಿತ್ರೀಕರಣವನ್ನು ಮುಗಿಸಲೇಬೇಕಾದ ಒತ್ತಡವಿದೆ....

 

 

 

Add comment
 

More items in this section

ARCHIVED ARTICLES