FacebookTwitter

ಕ್ರಿಕೆಟಿಗ ರೈಡರ್ ಮೇಲೆ ಮಾರಣಾಂತಿಕ ಹಲ್ಲೆ

    User Rating:  / 0

ಕ್ರೈಸ್ಟ್ ಚರ್ಚ್(ಮಾ.28): ನ್ಯೂಜಿಲೆಂಡ್ ಕ್ರಿಕೆಟ್ ಆಟಗಾರ ಜೆಸ್ಸಿ ರೈಡರ್ ಗಂಭೀರವಾಗಿ ಗಾಯಗೊಂಡು ಕೋಮಾದಲ್ಲಿರುವ ಘಟನೆ ವರದಿಯಾಗಿದೆ. ಗುರುವಾರ ಬೆಳಗ್ಗೆಯೇ ಬಾರ್ ವೊಂದರ ಆಚೆ ನಡೆದ ಗಲಾಟೆಯಲ್ಲಿ ರೈಡರ್ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ ಎಂದು ನ್ಯೂಜೆಲೆಂಡ್ ಪೊಲೀಸರು ತಿಳಿಸಿದ್ದಾರೆ.

ಜೆಸ್ಸಿ ರೈಡರ್ ಅವರ ತಲೆಗೆ ಗಂಭೀರ ಗಾಯವಾಗಿದೆ. ತಲೆಬುರುಡೆಗೆ ಭಾರೀ ಪೆಟ್ಟು ಬಿದ್ದಿದೆ. ಶ್ವಾಸಕೋಶಕ್ಕೂ ಹಾನಿಯಾಗಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ ಎನ್ನಲಾಗಿದೆ. ರೈಡರ್ ಕೋಮಾ ಸ್ಥಿತಿಯಲ್ಲಿದ್ದು ಸದ್ಯಕ್ಕೆ ಅವರನ್ನು ಕ್ರೈಸ್ಟ್ ಚರ್ಚ್ ಆಸ್ಪತ್ರೆಯ ತುರ್ತುನಿಗಾ ಘಟಕದಲ್ಲಿರಿಸಲಾಗಿದೆ.

ರೈಡರ್ ಅವರ ಮೇಲೆ ಹಲ್ಲೆ ನಡೆಸಿದವರು ಯಾರು ಎಂಬುದು ಇನ್ನೂ ಗೊತ್ತಾಗಿಲ್ಲ. ಬಾರ್ ಬಳಿ ಇದ್ದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸುತ್ತಿರುವ ಪೊಲೀಸರು, ಶೀಘ್ರವೇ ಪ್ರಕರಣದ ಮರ್ಮವನ್ನು ಭೇದಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ...

ಈ ಹಿಂದೆಯೂ ಕುಡಿತ ಕಾರಣದಿಂದ ಜೆಸ್ಸಿ ರೈಡರ್ ಅವರು ಅನೇಕ ಬಾರಿ ವಿವಾದಕ್ಕೊಳಗಾಗಿದ್ದರು. ಬೀದಿಕಾಳಗ ಮಾಡಿದ ಘಟನೆಗಳಿವೆ. ಒಂದೆರಡು ವರ್ಷಗಳಿಂದ ಕುಡಿತದಿಂದ ದೂರ ಉಳಿದಿದ್ದ ಜೆಸ್ಸಿ ರೈಡರ್ ಈಗ್ಗೆ ಕೆಲ ವಾರಗಳಿಂದ ಮತ್ತೆ ಮದ್ಯಪಾನಕ್ಕೆ ವಾಲಿದ್ದರೆನ್ನಲಾಗಿದೆ. ಇತ್ತೀಚೆಗೆ ಅಂತಾರಾಷ್ಟ್ರೀಯ ಕ್ರಿಕೆಟಿಂದ ತಾನಾಗೇ ದೂರ ಉಳಿದಿರುವ ರೈಡರ್ ಅವರು ಕೇವಲ ಲೋಕಲ್ ಕ್ರಿಕೆಟ್ ಟೂರ್ನಿಗಳಲ್ಲಿ ಭಾಗವಹಿಸುತ್ತಿದ್ದಾರೆ.

ವೆಲಿಂಗ್ಟನ್ ಪರ ಆಡುತ್ತಿರುವ ರೈಡರ್ ಅವರು ಕ್ಯಾಂಟರ್ಬರಿ ವಿರುದ್ಧದ ಪಂದ್ಯಕ್ಕಾಗಿ ಕ್ರೈಸ್ಟ್ ಚರ್ಚಿಗೆ ಬಂದಿದ್ದರು. ವೆಲಿಂಗ್ಟನ್ ತಂಡದ ಕೆಲ ಸದಸ್ಯರೊಂದಿಗೆ ಬಾರಿನಲ್ಲಿ ಕುಡಿದು ಹೊರಬಂದ ರೈಡರ್ ನಂತರ ಅಲ್ಲಿ ಮೂರು ಜನರೊಂದಿಗೆ ಏನೋ ಮಾತಿನ ಚಕಮಕಿಯಲ್ಲಿ ತೊಡಗಿದ್ದು ಕಂಡುಬಂತಂತೆ. ನಂತರ, ಆ ಮೂವರಲ್ಲಿ ಒಬ್ಬಾತ ಹೋಟೆಲೊಂದರ ಬಳಿ ರೈಡರ್ ಅವರ ಮೇಲೆ ಹಲ್ಲೆ ನಡೆಸಿದ ಎನ್ನಲಾಗಿದೆ.

 

 

 

Add comment
 

More items in this section

ARCHIVED ARTICLES