FacebookTwitter

ಖಿನ್ನತೆಗೆ ತುತ್ತಾದ ನಟಿ ರಿಷಿಕಾ ಆಸ್ಪತ್ರೆಗೆ ದಾಖಲು

    User Rating:  / 1

ಬೆಂಗಳೂರು(ಮಾ.28): ಮಾನಸಿಕ ಖಿನ್ನತೆಗೊಳಗಾಗಿರುವ ಕನ್ನಡ ನಟಿ ರಿಷಿಕಾ ಸಿಂಗ್ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮದುವೆ ಮುರಿದುಬಿದ್ದ ಹಿನ್ನೆಲೆಯಲ್ಲಿ ರಿಷಿಕಾ ಸಿಂಗ್ ಖಿನ್ನತೆಗೆ ತುತ್ತಾಗಿದ್ದರು.

ಖ್ಯಾತ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರ ಪುತ್ರಿಯಾದ ರಿಷಿಕಾ ಅವರು ಕೇರಳದ ಉದ್ಯಮಿ ಸಂದೀಪ್ ಅವರೊಂದಿಗೆ ವಿವಾಹ ನಡೆಯಬೇಕಿತ್ತು. ಏಪ್ರಿಲ್ 14ರಂದು ವಿವಾಹ ನಿಗದಿಯಾಗಿತ್ತಾದರೂ ಸಂದೀಪ್ ಅವರ ವ್ಯಕ್ತಿತ್ವ ಸರಿಯಿಲ್ಲವೆಂಬ ಕಾರಣಕ್ಕೆ ಮದುವೆ ಮುರಿದುಬಿದ್ದಿತ್ತು.

ರಿಷಿಕಾ ಮತ್ತು ಸಂದೀಪ್ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರೆನ್ನಲಾಗಿದೆ. ಎರಡೂ ಕುಟುಂಬಗಳು ಇದಕ್ಕೆ ವಿರೋಧ ವ್ಯಕ್ತಪಡಿಸದೆ ಮದುವೆಗೆ ಒಪ್ಪಿಕೊಂಡಿದ್ದರು. 2012ರ ಡಿಸೆಂಬರಿನಲ್ಲಿ ನಿಶ್ಚಿತಾರ್ಥ ಕೂಡ ನಡೆದಿತ್ತು. ಮುಂದಿನ ತಿಂಗಳು ಮದುವೆ ಕೂಡ ಫಿಕ್ಸ್ ಆಗಿತ್ತು. ಆದರೆ, ದಿಢೀರನೇ, ಸಂದೀಪ್ ವ್ಯಕ್ತಿತ್ವದ ಬಗ್ಗೆ ಸಂಶಯಗಳೆದ್ದು ಮದುವೆಯೇ ಮುರಿದುಬಿದ್ದಿತ್ತು. ಈ ಘಟನೆಯಿಂದ ರಿಷಿಕಾ ಸಿಂಗ್ ತೀರಾ ವ್ಯಾಕುಲರಾಗಿದ್ದರು. ಅದೇ ನೋವು ಅತಿರೇಕವಾಗಿ ಆಕೆಯನ್ನು ಇಂದು ಆಸ್ಪತ್ರೆಗೆ ಸೇರಿಸಬೇಕಾದ ಸ್ಥಿತಿ ಬಂದಿದೆ ಎಂದು ಬಾಬು ಕುಟುಂಬ ಮೂಲಗಳು ತಿಳಿಸಿವೆ....

 

 

 

Add comment




 

More items in this section

ARCHIVED ARTICLES