FacebookTwitter

ಬಿಜೆಪಿಯಿಂದ ಹೊರಗಾದ ರೇಣುಕಾಚಾರ್ಯ ಎಲ್ಲರನ್ನೂ ಕೆಜೆಪಿಗೆ ಆಹ್ವಾನಿಸಿ ಮೆರವಣಿಗೆ

    User Rating:  / 1
ರೇಣುಕಾಚಾರ್ಯ, ಯಡಿಯೂರಪ್ಪ

ಬೆಂಗಳೂರು: ಪಕ್ಷದ ಶಿಸ್ತು ಉಲ್ಲಂಘನೆ ಆರೋಪದಲ್ಲಿ ಭಾರತೀಯ ಜನತಾ ಪಕ್ಷದಿಂದ ಉಚ್ಚಾಟನೆಗೊಂಡಿದ್ದ ಮಾಜಿ ಅಬಕಾರಿ ಸಚಿವ ರೇಣುಕಾಚಾರ್ಯ, ನಿರೀಕ್ಷೆಯಂತೆ ಯಡಿಯೂರಪ್ಪ ಅವರ ಬೆಂಬಲಕ್ಕೆ ನಿಂತಿದ್ದು ಈ ನಿಮಿತ್ತ ಶುಕ್ರವಾರ ತನ್ನದೇ ಕ್ಷೇತ್ರ ಹೊನ್ನಾಳಿಯಲ್ಲಿ ಸಮಾವೇಶಕ್ಕೆ ಸಿದ್ಧತೆ ನಡೆಸಿದ್ದಾರೆ.

ತಮ್ಮ ಬಹು ನಿರೀಕ್ಷೆಯ ಸಮಾವೇಶಕ್ಕೆ ರಾಜಕೀಯ ಗೇಮ್ ಪ್ಲಾನ್ ಮಾಸ್ಟರ್ ಬಿ.ಎಸ್. ಯಡಿಯೂರಪ್ಪ ಅವರನ್ನು ಆಹ್ವಾನಿಸುವ ಇರಾದೆ ವ್ಯಕ್ತಪಡಿಸಿದ್ದಾರೆ. ಈ ಸಮಾವೇಶದಲ್ಲಿ ಯುವ ಸಮುದಾಯವನ್ನು ಪಕ್ಷಕ್ಕೆ ಸೆಳೆಯುವ ಪ್ರಚಾರ ತಂತ್ರಗಾರಿಕೆ ಅನುಸರಿಸುವ ಸಾಧ್ಯತೆ ಬಲವಾಗಿರುವುದಾಗಿ ಬಲ್ಲ ಮೂಲಗಳಿಂದ ಕೇಳಿಬಂದಿದೆ.

ಪಕ್ಷ ತ್ಯಜಿಸಿ ಹೊರಬಂದು ಪ್ರತ್ಯೇಕ ಪಕ್ಷ ಸ್ಥಾಪಿಸಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಬೆಂಬಲಿತ ಭಾರತೀಯ ಜನತಾ ಪಕ್ಷದ ಸಚಿವರು ಶಾಸಕರಿಗೆ ಅಲ್ಲಿ ಕವಡೆ ಕಿಮ್ಮತ್ತನ್ನೂ ನೀಡದೆ, ತೇಜೋವಧೆ ಮಾಡಲಾಗುತ್ತಿದೆ.

ಈ ನಿಟ್ಟಿನಲ್ಲಿ ತನ್ನ ಮೇಲಿನ ತೇಜೋವಧೆ ತಡೆಯಲಾರದೆ ಬಿಜೆಪಿ ಪಕ್ಷ ತ್ಯಜಿಸಬೇಕಾಯಿತು. ಮಾತ್ರವಲ್ಲದೆ, ತನ್ನ ಮೇಲೆ ಅಪಾರ ಅಭಿಮಾನ ಇಟ್ಟಿರುವ ತನ್ನ ಹೊನ್ನಾಳಿ ಕ್ಷೇತ್ರದ ಜನತೆಗೂ ತಾನು ಕೆಜೆಪಿ ಪಕ್ಷ ಸೇರಬೇಕೆಂಬ ಅಭಿಲಾಷೆ ಇತ್ತು. ಹೀಗಾಗಿ ನಾಲ್ಕೂ ದಿಕ್ಕಿನಿಂದ ಸಮಾಲೋಚನೆ ನಡೆಸಿ ದೃಢ ನಿರ್ಧಾರದಿಂದ ಕೆಜೆಪಿಗೆ ಸೇರುತ್ತಿದ್ದೇನೆ ಎಂದಿದ್ದಾರೆ.

 

 

 

Add comment




 

More items in this section

ARCHIVED ARTICLES