FacebookTwitter

ರಘುಪತಿಗೆ ಮೆತ್ತಿಕೊಂಡ ಬ್ಲೂಫಿಲಂ ಮಸಿ

    User Rating:  / 0

ಬೆಂಗಳೂರು(ಮಾ.28): ಬಿಜೆಪಿಯಲ್ಲಿ ಮತ್ತೊಂದು ಲೈಂಗಿಕ ಹಗರಣ ಹೊಗೆಯಾಡುತ್ತಿದೆ. ಯುವತಿಯೊಬ್ಬಳೊಂದಿಗೆ ಬಿಜೆಪಿ ಶಾಸಕ ರಘುಪತಿ ಭಟ್ ರಾಸಲೀಲೆಯಾಡುತ್ತಿರುವ ದೃಶ್ಯಗಳು ಮಾಧ್ಯಮಕ್ಕೆ ಸಿಕ್ಕಿವೆ. ಈ ದೃಶ್ಯದಲ್ಲಿರುವುದು ತಾವಲ್ಲವೆಂದು ಉಡುಪಿ ಶಾಸಕರು ಒತ್ತಿಹೇಳಿದ್ದಾರೆ. ಸಾಮಾಜಿಕ ಕಾಳಜಿ ದೃಷ್ಟಿಯಿಂದ ಸುವರ್ಣನ್ಯೂಸ್ ವಾಹಿನಿ ಕೂಡ ಈ ದೃಶ್ಯಗಳನ್ನ ಬಿತ್ತರಿಸದಿರಲು ನಿರ್ಧರಿಸಿದೆ.

ಚುನಾವಣೆ ವೇಳೆ ಇಂಥ ಅಶ್ಲೀಲ ಸಿಡಿಯನ್ನು ಬಹಿರಂಗ ಮಾಡಿ ತಮ್ಮನ್ನು ತೇಜೋವಧೆ ಮಾಡುವ ಪ್ರಯತ್ನ ನಡೆದಿದೆ ಎಂದು ರಘುಪತಿ ಭಟ್ ಖೇದ ವ್ಯಕ್ತಪಡಿಸಿದ್ದಾರೆ. ಪಕ್ಷಕ್ಕೆ ಮುಜುಗರ ಉಂಟಾಗಬಾರದೆಂದು ಅವರು ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸದಿರಲು ನಿರ್ಧರಿಸಿದ್ದಾರೆ. ಸುವರ್ಣನ್ಯೂಸ್ ವೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ರಘುಪತಿ ಅವರು, ಅಶ್ಲೀಲ ಸಿಡಿಯ ದೃಶ್ಯಗಳನ್ನ ವಾಹಿನಿಯಲ್ಲಿ ಪ್ರಸಾರ ಮಾಡದ್ದಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ...

ಈ ರಾಸಲೀಲೆಯ ಸಿಡಿ ಒಂದೆರಡು ವಾರದಿಂದ ಉಡುಪಿ ಸುತ್ತಮುತ್ತ ಜೋರಾಗಿ ಹರಿದಾಡುತ್ತಿತ್ತೆನ್ನಲಾಗಿದೆ. ರಘುಪತಿ ಭಟ್ ಅವರು ಇಂದು ಬೆಳಗ್ಗೆ ಈ ಸಿಡಿಯನ್ನು ನೋಡಿರುವುದಾಗಿ ಹೇಳಿಕೊಂಡಿದ್ದಾರೆ, ಈ ಅಶ್ಲೀಲ ಸಿಡಿ ನಕಲಿ ಎಂದು ಆರೋಪಿಸಿದ ರಘುಪತಿಯವರು, ಈ ಕೃತ್ಯದಲ್ಲಿ ತಮ್ಮ ವಿರೋಧಿಗಳ ಷಡ್ಯಂತ್ರವಿದೆ ಎಂದು ಕಿಡಿಕಾರಿದ್ದಾರೆ....

ಕಟ್ಟಾ ಬಿಜೆಪಿ ಮುಖಂಡ ರಘುಪತಿ ಭಟ್ ಕೆಲ ವರ್ಷಗಳ ಹಿಂದೆಯೂ ಸುದ್ದಿಯಲ್ಲಿದ್ದರು. 2008ರ ಜೂನ್ 15ರಂದು ರಘುಪತಿಯವರ ಪತ್ನಿ ಪದ್ಮಪ್ರಿಯಾ ಭಟ್ ಸಂಶಯಾಸ್ಪದ ರೀತಿಯಲ್ಲಿ ನಿಧನ ಹೊಂದಿದ್ದರು. ಆಗ 35 ವರ್ಷದ ವಯಸ್ಸಿನ ಪದ್ಮಪ್ರಿಯಾ ಅವರು ನವದೆಹಲಿಯ ಅತಿಥಿಗೃಹವೊಂದರಲ್ಲಿ ನೇಣುಹಾಕಿಕೊಂಡು ಸಾವಿಗೀಡಾಗಿದ್ದರು. ಆ ಸಾವಿನ ಹಿಂದೆ ರಾಜಕೀಯ ಷಡ್ಯಂತ್ರಗಳಿದ್ದಿರಬಹುದೆಂಬ ಅನುಮಾನಗಳು ಇದ್ದವು....

 

 

 

Add comment




 

More items in this section

ARCHIVED ARTICLES