FacebookTwitter

ಬ್ರಿಕ್ಸ್ ಸಭೆಯಲ್ಲಿ ಭಾರತ ಚೀನಾ ಮಾತುಕತೆ; ಬಗೆಹರಿಯುತ್ತಾ ಬ್ರಹ್ಮಪುತ್ರಾ ವಿವಾದ ?

    User Rating:  / 0
ಭಾರತ ಚೀನಾ ಮಾತುಕತೆ

 

ದರ್ಬನ್: ಚೀನಾದಲ್ಲಿ ಹರಿಯುತ್ತಿರುವ ಬ್ರಹ್ಮಪುತ್ರಾ ನದಿಗೆ ಅಡ್ಡಲಾಗಿ ಒಂದರ ಹಿಂದೆ ಒಂದರಂತೆ ಸರದಿಯಾಗಿ ಮೂರು ಅಣೆಕಟ್ಟುಗಳನ್ನು ಕಟ್ಟುವ ಚೀನಾದ ಮಹತ್ವದ ಯೋಜನೆಯಿಂದ ಭಾರತಕ್ಕೆ ಬರುವ ನೀರನ್ನು ತಡೆದು ನಿಲ್ಲಿಸಿದಂತಾಗುತ್ತದೆ ಎಂಬ ಕಾರಣದಿಂದ ಎದ್ದಿದ್ದ ಉಭಯ ರಾಷ್ಟ್ರಗಳ ವಿವಾದ ಸಂಬಂಧ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಚೀನಾದ ನೂತನ ಅಧ್ಯಕ್ಷ ಗ್ಝೀ ಜಿನ್ ಪಿಂಗ್ ಅವರು ಪರಸ್ಪರ ಮಾತುಕತೆ ನಡೆಸಿದ್ದಾರೆ.

ದಕ್ಷಿಣ ಆಫ್ರಿಕಾದ ದರ್ಬನ್ ನಲ್ಲಿ ನಡೆಯುತ್ತಿರುವ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಿರುವ ಸಿಂಗ್ ಮತ್ತು ಪಿಂಗ್, ಇಪ್ಪತ್ತೈದು ನಿಮಿಷಗಳ ಕಾಲ ಮಾತುಕತೆಯಲ್ಲಿ ಬ್ರಹ್ಮಪುತ್ರಾ ವಿವಾದ ಕುರಿತು ಮಾತುಕತೆ ನಡೆಸಿದ್ದಾಗಿ ವರದಿಯಾಗಿದೆ.

ಚೀನಾದ ಜಾಗದಲ್ಲೇ ಮೂರು ಅಣೆಕಟ್ಟೆ ಕಟ್ಟುತ್ತಿರುವುದರಿಂದಾಗಿ ಭಾರತಕ್ಕೆ ಹರಿಯುತ್ತಿರುವ ಬ್ರಹ್ಮಪುತ್ರಾ ನದಿಯಲ್ಲಿ ನೀರು ಕುಂಠಿತಗೊಂಡು ಭಾರೀ ಸಮಸ್ಯೆ ಎದುರಾಗುವ ಭೀತಿಯಿದೆ ಎಂದು ಪ್ರಧಾನಿ ಮನಮೋಹನ್ ಸಿಂಗ್ ಸಮಸ್ಯೆಯ ಆಳವನ್ನು ಬಿಚ್ಚಿಟ್ಟರು.

ಇದಕ್ಕೆ ಪ್ರತಿಕ್ರಿಯಿಸಿದ ಚೀನಾ ಅಧ್ಯಕ್ಷ ಗ್ಝೀ ಜಿನ್ ಪಿಂಗ್, ತಮ್ಮಲ್ಲಿ ಕಟ್ಟುತ್ತಿರುವ ಅಣೆಕಟ್ಟೆಯಿಂದಾಗಿ ಭಾರತಕ್ಕೆ ನೀರಿಗೆ ಯಾವುದೇ ರೀತಿಯ ತೊಡಕುಂಟಾಗುವುದಿಲ್ಲ ಎಂದು ಭರವಸೆ ನೀಡಿದ್ದಾರೆ.

ಅಲ್ಲದೆ, ನಾವು ಅಣೆಕಟ್ಟೆ ನಿರ್ಮಿಸುತ್ತಿರುವುದು ಮಿಲ್ ಯೋಜನೆಗೆ ಸಮರ್ಪಕ ಜಲ ವಿದ್ಯುತ್ ಪೂರೈಕೆಗಾಗಿ. ಹಾಗಾಗಿ ಇಲ್ಲಿ ನೀರನ್ನು ತಡೆದು ನಿಲ್ಲಿಸಿ ಹರಿಯುವ ನದಿ ನೀರಿನ ಪ್ರಮಾಣವನ್ನು ಕಡಿಮೆಗೊಳಿಸುವ ಪ್ರಮೇಯ ಬರುವುದೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

 

 

 

 

Add comment
 

More items in this section

ARCHIVED ARTICLES