FacebookTwitter

ಜೆಜೆನಗರದಲ್ಲಿ ಮಕ್ಕಳ ಕಳ್ಳಿಯ ಬಂಧನ

    User Rating:  / 0

ಬೆಂಗಳೂರು(ಮಾ.28): ನೀರು ಕೇಳುವ ನೆಪದಲ್ಲಿ ಮನೆಗೆ ಬಂದು ಮಗುವನ್ನು ಅಪಹರಿಸಿದ್ದ ಕಿರಾತಕಿ ಕೊನೆಗೂ ಸಿಕ್ಕಿಬಿದ್ದಿದ್ದಾಳೆ. ಸಿಸಿಟಿವಿ ದೃಶ್ಯಗಳ ಸುಳಿವಿಟ್ಟುಕೊಂಡು ಪೊಲೀಸರು ಜೆಜೆನಗರದ ಫರ್ವಿನಾ ಎಂಬಾಕೆಯನ್ನು ಹಿಡಿದಿದ್ದಾರೆ...

ನಿನ್ನೆ, ಬುಧವಾರ ಸಂಜೆ ಐದು ಗಂಟೆ ಸುಮಾರಿಗೆ ಚಾಮರಾಜಪೇಟೆಯ ಟಿಪ್ಪುನಗರದ ಗೌಸಾಖಾನ್ ಎಂಬುವವರ ಮನೆಗೆ ತೆರಳಿದ್ದ ಫವರ್ಿನಾ ಅಲ್ಲಿ ನೀರು ಕೇಳಿದ್ದಾಳೆ. ನೀರು ತರಲು ಮನೆಯವರು ಒಳಗಡೆ ಹೋಗಿದ್ದಾರೆ. ಈ ವೇಳೆ ಮನೆಯಲ್ಲಿ ಆಟವಾಡುತ್ತಿದ್ದ ಮೂವರು ಮಕ್ಕಳಿಗೆ ಚಾಕೊಲೇಟ್ ಆಸೆ ತೋರಿಸಿ ಅಂಗಡಿಗೆ ಕರೆದೊಯ್ದಿದ್ದಾಳೆ. ಬಳಿಕ ಎರಡು ಮಗುವನ್ನು ಅಂಗಡಿ ಬಳಿ ಬಿಟ್ಟು, ಎರಡು ವರ್ಷದ ಅಜೀರಾ ಬಾನಂ ಎಂಬ ಮಗುವನ್ನ ಕರೆದುಕೊಂಡು ಜಾಗ ಖಾಲಿಮಾಡಿದ್ದಾಳೆ.

ಆತಂಕಗೊಂಡ ಅಜೀರಾಳ ಪೋಷಕರು ಚಾಮರಾಜಪೇಟೆ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಚಾಮರಾಜಪೇಟೆ ಪೊಲೀಸರು ಇನ್ಸಪೆಕ್ಟರ್ ಶಿವಮಲ್ಲಯ್ಯ ನೇತೃತ್ವದಲ್ಲಿ ಕೇವಲ ನಾಲ್ಕೇ ತಾಸಿನಲ್ಲಿ ಕಿರಾತಕಿಯನ್ನ ಹಿಡಿದಿದ್ದಾರೆ.... ಮಗುವಿನ ಅಪಹರಣದ ದೃಶ್ಯ ಹಾಲಿಡೇ ಕಟ್ಟಡದ ಮುಂಭಾಗ ಇರಿಸಲಾಗಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಈ ಸಿಸಿಟಿವಿ ದೃಶ್ಯದಿಂದ ಪೊಲೀಸರು ಅಪರಾಧಿಯನ್ನು ಹಿಡಿಯಲು ಸಾಧ್ಯವಾಯಿತು.... ಮಗು ಅಜೀರಾ ಬಾನಂ ಇದೀಗ ತನ್ನ ಪೋಷಕರ ಮಡಿಲಲ್ಲಿ ಸುರಕ್ಷಿತವಾಗಿದೆ.....

 

 

 

Add comment




 

More items in this section

ARCHIVED ARTICLES