FacebookTwitter

ಆರು ಹುಡುಗರ ಜೀವಕ್ಕೆ ಕುತ್ತುತಂದ ಹೋಳಿ

    User Rating:  / 0

ಹೈದರಾಬಾದ್(ಮಾ.28): ಹೋಳಿ ಸಂಭ್ರಮದಲ್ಲಿದ್ದ ಆರು ಹದಿಹರೆಯದ ಹುಡುಗರು ನೀರುಪಾಲಾದ ಎರಡು ದುರಂತ ಘಟನೆಗಳು ವರದಿಯಾಗಿವೆ. ನಿಜಾಮಾಬಾದ್ ಜಿಲ್ಲೆಯ ಸಿರಿಕೊಂಡ ಗ್ರಾಮದಲ್ಲಿ ಕೊಳದಲ್ಲಿ ಸ್ನಾನ ಮಾಡುವಾಗ ಐವರು ಜಲಸಮಾಧಿಯಾಗಿದ್ದಾರೆ. ಕುಕ್ಕಟಪಲ್ಲಿ ಬಳಿಯ ಬಾವಿಯೊಂದರಲ್ಲಿ 15 ವರ್ಷದ ಬಾಲಕ ಮುಳುಗಿಹೋದ ಘಟನೆ ಸಂಭವಿಸಿದೆ...

ಬಣ್ಣದೋಕುಳಿ ಎರಚಿಕೊಂಡು ದಿನವಿಡೀ ಹೋಳಿ ಹಬ್ಬದ ಖುಷಿಯಲ್ಲಿದ್ದ 15 ಹುಡುಗರ ಗುಂಪು ಸಿರಿಕೊಂಡ ಗ್ರಾಮದ ಹೊರಗಿನ ಕೊಳದಲ್ಲಿ ಸ್ನಾನ ಮಾಡುವಾಗ ನೀರುಪಾಲಾಗಿದ್ದಾರೆ... ಸತ್ತವರನ್ನು ಇಮ್ರಾನ್, ಅಫ್ರೋಜ್, ಅಬ್ರಾಜ್, ತೌಷಿಕ್ ಮತ್ತು ಮಧು ಎಂದು ಗುರುತಿಸಲಾಗಿದೆ. 16-17 ವರ್ಷ ವಯಸ್ಸಿನ ಇವರೆಲ್ಲರೂ ಪ್ಲಸ್ ಒನ್ ಮತ್ತು ಟು ಓದುತ್ತಿದ್ದ ವಿದ್ಯಾರ್ಥಿಗಳೆನ್ನಲಾಗಿದೆ. ಈ ಘಟನೆಯಲ್ಲಿ ಬೇರಿಬ್ಬರು ಹುಡುಗರನ್ನು ರಕ್ಷಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಆರ್ಮೂರ್ ಹೇಳಿದ್ದಾರೆ. ಸತ್ತ ಐವರಿಗೂ ಈಜಾಡಲು ಬರುತ್ತಿರಲಿಲ್ಲವೆನ್ನಲಾಗಿದೆ. ಈ ಕೊಳದಲ್ಲಿ ನೀರಿನ ಆಳದ ಅರಿವಿಲ್ಲದೆ ಕಾಲಿಟ್ಟಿದ್ದ ಹುಡುಗರು ಕೆಸರಲ್ಲಿ ಜಾರಿ ಬಿದ್ದು ಮುಳುಗಿರಬಹುದೆಂದು ಅಂದಾಜಿಸಲಾಗಿದೆ.

ಮತ್ತೊಂದು ಘಟನೆಯಲ್ಲಿ 15 ವರ್ಷದ ಬಾಲಕ ಶೇಖ್ ಅಮೀರ್ ಬಾವಿಯಲ್ಲಿ ಸ್ನಾನ ಮಾಡಲು ಹೋಗಿ ಮುಳುಗಿ ಸತ್ತಿದ್ದಾನೆ. ಹೋಳಿ ಆಚರಿಸಿ ನಂತರ ಮೈತೊಳೆದುಕೊಳ್ಳಲೆಂದು ಶೇಖ್ ಮತ್ತವನ ನಾಲ್ಕು ಸ್ನೇಹಿತರು ಬಾವಿಗೆ ಧುಮುಕಿದ್ದಾರೆ. ಈಜಲು ಸಾಧ್ಯವಾಗದೇ ಶೇಖ್ ಮುಳುಗಿಹೋದರೆ, ಉಳಿದ ನಾಲ್ವರು ಸ್ನೇಹಿತರು ದಡ ಸೇರಿಕೊಳ್ಳುವಲ್ಲಿ ಯಶಸ್ವಿಯಾದರೆನ್ನಲಾಗಿದೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಎರಡೂ ಘಟನೆಗಳ ಬಗ್ಗೆ ತನಿಖೆ ನಡೆಸುತ್ತಿದ್ದಾರೆ....

 

 

 

Add comment




 

More items in this section

ARCHIVED ARTICLES