FacebookTwitter

ಜಾರ್ಖಂಡಿನಲ್ಲಿ ಹತ್ತು ಮಾವೋವಾದಿಗಳ ಹತ್ಯೆ

    User Rating:  / 0

ರಾಂಚಿ(ಮಾ.28): ಮಾವೋವಾದಿಗಳ ಎರಡು ಗುಂಪುಗಳ ನಡುವಿನ ಗುಂಡಿನ ಚಕಮಕಿಯಲ್ಲಿ ಹತ್ತು ಮಂದಿ ಹತರಾದ ಘಟನೆ ವರದಿಯಾಗಿದೆ. ಛಾತ್ರಾ ಜಿಲ್ಲೆಯಲ್ಲಿ ಈ ದುರಂತ ಸಂಭವಿಸಿದೆ...

ಮಾವೋವಾದಿ ಕಮ್ಯೂನಿಸ್ಟ್ ಪಕ್ಷ ಹಾಗೂ ತೃತೀಯ ಪ್ರಸ್ತುತಿ ಸಮಿತಿ(ಟಿಪಿಸಿ) ಕಾರ್ಯಕರ್ತರ ನಡುವೆ ನಿನ್ನೆ ರಾತ್ರಿ ಗುಂಡಿನ ಕಾಳಗ ನಡೆಯಿತಾದರೂ ಹತ್ಯೆಯಾಗಿರುವ ವಿಷಯ ಬೆಳಕಿಗೆ ಬಂದಿದ್ದು ಇಂದು ಬೆಳಗ್ಗೆ. ಸತ್ತವ ಪೈಕಿ ಸಿಪಿಐ(ಎಂ) ಸಂಘಟನೆಯ ನಾಲ್ವರು ಸದಸ್ಯರು ಸೇರಿದ್ದಾರೆ ಎಂದು ಜಾರ್ಖಂಡ್ ರಾಜ್ಯದ ಡಿಜಿಪಿ ರಾಜೀವ್ ಕುಮಾರ್ ತಿಳಿಸಿದ್ದಾರೆ..

ರಾಂಚಿಯಿಂದ 100 ಕಿಲೋಮೀಟರ್ ದೂರದಲ್ಲಿರುವ ಕುಂದಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಕಾಡುಗಳಲ್ಲಿ ಮೃತದೇಹಗಳು ಸಿಕ್ಕಿದ್ದು, ಬಳಿಯಲ್ಲೇ ಒಂದು ಏಕೆ-47 ರೈಫಲ್, ಮೂರು .303 ರೈಫಲ್ ಹಾಗೂ ಇತರ ಮದ್ದುಗುಂಡುಗಳು ಪತ್ತೆಯಾಗಿವೆ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.

ತೃತೀಯ ಪ್ರಸ್ತುತಿ ಸಮಿತಿಯು ಸಿಪಿಐ(ಮಾವೋವಾದಿ) ಸಂಘಟನೆಯ ಬಂಡಾಯ ಗುಂಪಾಗಿದೆ. ಒಂದು ಮಾಹಿತಿಯ ಪ್ರಕಾರ ತೃತೀಯ ಪ್ರಸ್ತುತಿ ಸಮಿತಿಗೆ ಸ್ಥಳೀಯ ಆಡಳಿತ ಮತ್ತು ಪೊಲೀಸರ ಸಹಾಯವಿದೆ ಎನ್ನಲಾಗಿದೆ...

 

 

 

Add comment
 

More items in this section

ARCHIVED ARTICLES