FacebookTwitter

ಕರವಸ್ತ್ರ ತೆಗೆಯುವಾಗ ಆಕಸ್ಮಿಕವಾಗಿ ಪಿಸ್ತೂಲಿನಿಂದ ಗುಂಡು ಹಾರಿ ನನ್ ಗಂಡ ಸತ್ರು?

    User Rating:  / 0
ಮೃತ ಸಂಜಯ್ ಬೆನರ್ಜಿ ಮತ್ತು ಪತ್ನಿ

 

ಮುಂಬಯಿ: ಮಹಾರಾಷ್ಟ್ರ ರಾಜ್ಯದ ಪೊಲೀಸ್ ಇಲಾಖೆಯ ಭಯೋತ್ಪಾದನಾ ನಿಗ್ರಹ ದಳದ ಉಪ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದ ಸಂಜಯ್ ಬೆನರ್ಜಿ ಅವರು ಮಾರ್ಚ್ 23 ರಂದು ಥಾಣೆಯ ಹೊಟೇಲಿನಲ್ಲಿ ಪತ್ನಿ, ಮಕ್ಕಳು ಹಾಗೂ ಸಾರ್ವಜನಿಕರೆದುರೇ ತನ್ನ ಸರ್ವಿಸ್ ಪಿಸ್ತೂಲಿನಿಂದ ತಲೆಗೆ ಗುಂಡು ಹಾರಿಸಿಕೊಂಡು ಆತ್ಮ ಹತ್ಯೆ ಮಾಡಿಕೊಂಡಿದ್ದರು.

ಇವರ ಸಾವಿಗೆ ಕುಟುಂಬ ಕಲಹ ಹಾಗೂ ಸಾಂಸಾರಿಕ ವೈಮನಸ್ಸುಗಳೇ ಪ್ರಮುಖ ಕಾರಣ ಎಂಬ ಮಾತುಗಳು ಕೇಳಿಬಂದಿತ್ತು.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪತ್ನಿ ಸುಶ್ಮಿತಾ ಅವರನ್ನು ವಿಚಾರಣೆ ನಡೆಸಿದ್ದಾರೆ. ಈ ವೇಳೆ ತೀರಾ ಮುಗ್ದರಂತೆ ಹೇಳಿಕೆ ನೀಡುವ ಮೂಲಕ ಸ್ವತಃ ಪತ್ನಿಯೇ ತನ್ನ ಗಂಡನ ಸಾವಿನ ಹಿಂದಿರುವ ರಹಸ್ಯವನ್ನು ಮುಚ್ಚಿಡಲು ಯತ್ನಿಸುತ್ತಿರುವ ಸಂಶಯ ವ್ಯಕ್ತವಾಗಿದೆ.

ವಿಚಾರಣಾ ನಿರತ ಪೊಲೀಸರಿಗೆ ಸಂಶಯಾಸ್ಪದವಾಗಿ ಹೇಳಿಕೆ ನೀಡಿರುವ ಮೃತ ಪೊಲೀಸ್ ಆಯುಕ್ತರ ಪತ್ನಿ ಸುಶ್ಮಿತಾ, ತಾನು ಮತ್ತು ಗಂಡ ಹಾಗೂ ತಮ್ಮಿಬ್ಬರು ಮಕ್ಕಳೊಂದಿಗೆ ಥಾಣೆಯಲ್ಲಿರುವ ಗೋವಾ ಪೋರ್ಚುಗೀಸ್ ರೆಸ್ಟೋರೆಂಟಿಗೆ ಅಪರಾಹ್ನ ಊಟಕ್ಕೆ ತೆರಳಿದ್ದೆವು.

ಹೀಗೆ ಊಟಕ್ಕೆ ಕುಳಿತಿದ್ದ ಸಂದರ್ಭ ತನ್ನ ಗಂಡ ಕರವಸ್ತ್ರಕ್ಕಾಗಿ ಜೇಬಿಗೆ ಕೈ ಹಾಕಿದ್ದರು. ಈ ವೇಳೆ ಚರ್ಮದ ಕವಚದೊಳಗಿದ್ದ ಪಿಸ್ತೂಲು ಅಚಾನಕ್ಕಾಗಿ ಹೊರಬಂದು ಕೆಳಕ್ಕೆ ಬಿತ್ತು.

ಹೀಗೆ ಕೆಳಕ್ಕೆ ಬಿದ್ದ ವೇಗಕ್ಕೆ ಒಮ್ಮಲೆ ಹೇಗೋ ಗುಂಡು ಹಾರಿ ಅದು ಅವರ ತಲೆಗೆ ತಾಗಿ ನನ್ನ ಗಂಡ ಆಕಸ್ಮಿಕವಾಗಿ ಸಾವನ್ನಪ್ಪಿದ್ದರೇ ಹೊರತು ಇದು ಆತ್ಮಹತ್ಯೆಯಲ್ಲ ಎಂದು ತೀರಾ ಪೆದ್ದಿಯಂತೆ ಪ್ರತಿಪಾಧಿಸಿದ್ದಾರೆ.

ಆತ್ಮಹತ್ಯೆಗೆ ಮೊದಲೇ ಸಿದ್ಧತೆ ನಡೆದಿತ್ತು...

ನಲ್ವತ್ಮೂರು ವರ್ಷದ ಸಂಜಯ್ ಬೆನರ್ಜಿ, ತಾವು ಆತ್ಮಹತ್ಯೆಯ ಪೂರ್ವ ಸಿದ್ಧತೆ ನಡೆಸಿಕೊಂಡೇ ಅಂದು ಸಂಸಾರ ಸಮೇತ ಊಟಕ್ಕೆ ತೆರಳಿದ್ದರು ಎಂಬ ವಾದಗಳು ಈ ನಡುವೆ ಕೇಳಿಬಂದಿತ್ತು. ಇದಕ್ಕೆ ಪುಷ್ಟಿ ನೀಡುವಂತೆ ಅವರು ಸರ್ಕಾರಿ ವಾಹನವನ್ನು ತೆಗೆದುಕೊಂಡು ಹೋಗದೆ ಬೇರೊಂದು ಬಾಡಿಗೆ ವಾಹನದಲ್ಲಿ ಊಟಕ್ಕೆ ತೆರಳಿದ್ದು ಕೂಡ ತನಿಖಾಧಿಕಾರಿಗಳಲ್ಲಿ ಸಂಶಯ ಮೂಡಿಸಿತ್ತು.

ಪ್ರತ್ಯಕ್ಷದರ್ಶಿಗಳೂ ಆತ್ಮಹತ್ಯೆ ಎಂದಿದ್ದರು..

ಅಲ್ಲದೆ, ಹೊಟೇಲಿನಲ್ಲಿ ಕುಳಿತಿದ್ದ ವೇಳೆ ಗನ್ ತೆಗೆದು ಪತ್ನಿ, ಮಕ್ಕಳೆದುರೇ ತನ್ನ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪ್ರತ್ಯಕ್ಷದರ್ಶಿಗಳು ಹೇಳಿಕೆ ನೀಡಿದ್ದಾಗಿಯೂ, ಘಟನೆ ನಡೆದ ಗಂಟೆಗಳಲ್ಲೇ ಮಾಧ್ಯಮಗಳಲ್ಲಿ ವರದಿಯಾಗಿತ್ತು.

ಸಾವಿಗೆ ಕಾರಣ ಸಂಸಾರಿಕ ಬಿಕ್ಕಟ್ಟಾ ಅಥವಾ...

ಈ ನಡುವೆ ಬೇರೆಯದೇ ತೆರನಾದ ಮಾತುಗಳು ಈ ಪ್ರಕರಣದಲ್ಲಿ ಸೇರಿಕೊಂಡಿದ್ದು, ಭಯೋತ್ಪಾದನಾ ನಿಗ್ರಹ ದಳದ ಉಪ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದ ಸಂಜಯ್ ಬೆನರ್ಜಿ ಆತ್ಮಹತ್ಯೆಗೆ ಬಹುಶಃ, ಭೂಗತ ಪಾತಕಿಗಳ ಬೆದರಿಕೆಯ ಸಂಚು ಕೂಡ ಪ್ರಮುಖ ಪಾತ್ರವಹಿಸಿರಬಹುದಾ ಎಂಬ ಪ್ರಶ್ನೆ ಮೂಡಿಬಂದಿತ್ತು.

ಅಲ್ಲದೆ, ಸಾಕಷ್ಟು ದೇಶದ್ರೋಹ ಕೃತ್ಯ ಹಾಗೂ ಭಯೋತ್ಪಾದನಾ ಕೃತ್ಯ ಸೇರಿದಂತೆ ಭೂಗತ ಚಟುವಟಿಕೆಗಳ ನೆಲೆಬೀಡಾಗಿರುವ ಮುಂಬಯಿಯ ಮಹಾನಗರದಲ್ಲಿ ಭಯೋತ್ಪಾದನಾ ನಿಗ್ರಹ ದಳದಲ್ಲಿ ಸೇವೆ ಸಲ್ಲಿಸುವ ಯಾವುದೇ ಅಧಿಕಾರಿಗೆ ಬೆದರಿಕೆ ಹೊಸದೇನಲ್ಲ ಎಂಬ ತರ್ಕ ವ್ಯಕ್ತವಾಗುತ್ತದಾದರೂ, ಇದೀಗ ಮೃತ ಪೊಲೀಸ್ ಅಧಿಕಾರಿಯ ಪತ್ನಿ ನೀಡಿರುವ ಗೊಂದಲಮಯ ಹೇಳಿಕೆ ಸಂಪೂರ್ಣ ಪ್ರಕರಣದ ತನಿಖೆಯ ದಿಕ್ಕನ್ನೇ ಬದಲಿಸಲಿದೆ ಎನ್ನಲಾಗುತ್ತಿದೆ.

ಇವರ ಪ್ರಮುಖ ಜವಾಬ್ದಾರಿ ಹೀಗಿತ್ತು!

13/7 ರ ಮುಂಬಯಿ ತ್ರಿವಳಿ ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತ ವ್ಯಕ್ತಿಗಳ ಮೊಬೈಲ್ ಪೋನ್ ಸಂವಹನದ ರೆಕಾರ್ಡಿಂಗ್ ಹಾಗೂ ಅವರು ಮಾತನಾಡುತ್ತಿದ್ದ ಪ್ರತೀ ಮಾತಿಗಿದ್ದ ಕಾರಣಗಳ ವಿಶ್ಲೇಷಣೆಯ ಹೊಣೆ ಹಾಗೂ ಈ ತಂಡದ ಪ್ರಮುಖ ಜವಾಬ್ದಾರಿ ಮೃತ ಸಂಜಯ್ ಬೆನರ್ಜಿ ಅವರ ಮೇಲಿತ್ತು.

 

 

 

Add comment
 

More items in this section

ARCHIVED ARTICLES