FacebookTwitter

ಇಬ್ಬರು ಮಕ್ಕಳನ್ನ ಬಾವಿಗೆ ತಳ್ಳಿ ಆತ್ಮಹತ್ಯೆಗೆ ಯತ್ನಿಸಿದ ತಾಯಿ..!

    User Rating:  / 0
    PoorBest 

 

ರಾಯಚೂರು(ನ.21): ತನ್ನಿಬ್ಬರು ಮಕ್ಕಳನ್ನ ಬಾವಿಗೆ ತಳ್ಳಿ ತಾಯಿಯೊಬ್ಬಳು ತಾನೂ ಆತ್ಮಹತ್ಯೆಗೆ ಯತ್ನಿಸಿರುವ ಹೃದಯ ವಿದ್ರಾವಕ ಘಟನೆ ರಾಯಚೂರು ಜಿಲ್ಲೆಯ ಮುರ್ಕಿ ಗುಡ್ಡ ತಾಂಡಾದಲ್ಲಿ ನಡೆದಿದೆ. ಮಕ್ಕಳಾದ 3 ವರ್ಷದ ಅಂಜಲಿ, 1 ವರ್ಷದ ಪೂಜಾ ಸಾವನ್ನಪ್ಪಿದ್ದು, ತಾಯಿ ಅನುಸೂಯ ಮಾತ್ರ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಈಕೆಯನ್ನ ರಾಯಚೂರಿನ ಖಾಸಗಿ ಆಸ್ಪತ್ರಗೆ ದಾಖಲಿಸಲಾಗಿದೆ.

ಇನ್ನೂ ಘಟನೆಗೆ ವರದಕ್ಷಿಣೆ ಕಿರುಕುಳ ಕಾರಣ ಅಂತ ಹೇಳಲಾಗುತ್ತಿದ್ದು, ಈ ಸಂಬಂಧ ಸಿರವಾರ ಪೋಲೀಸ್ ಠಾಣೆಯಲ್ಲಿ ಅನುಸೂಯ ಅತ್ತೆ ಮಾವನ ಮೇಲೆ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಾಗಿದೆ. ಏನೂ ಅರಿಯದ ಮಕ್ಕಳನ್ನ ಬಾವಿಗೆ ತಳ್ಳಿ ಕೊಂದಿರುವ ಅನುಸೂಯ ವಿರುದ್ಧ ಕೊಲೆ ಕೇಸ್ ದಾಖಲಿಸಲಾಗಿದೆ.

 

 

 

Add comment
 

More items in this section