FacebookTwitter

ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಲಿ ಎಂದು ಕನ್ನಡಿಗರನ್ನ ಕೆಣಕಿದ ಎಂಇಎಸ್ ಶಾಸಕ ಸಂಭಾಜಿ ಪಾಟೀಲ್

    User Rating:  / 0
    PoorBest 

ಬೆಳಗಾವಿ(ಜ.17): ಎಂಇಎಸ್ ಶಾಸಕ ಸಂಭಾಜಿ ಪಾಟೀಲ್ ಮತ್ತೊಮ್ಮೆ ಪ್ರಚೋದನಾಕಾರಿ ಹೇಳಿಕೆ ನೀಡಿ ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಬೆಳಗಾವಿಯಲ್ಲಿ ನಡೆದ ಎಂಇಎಸ್ ಹುತಾತ್ಮ ದಿನಚಾರಣೆ ವೇಳೆ ಮಾತನಾಡಿದ ಅವರು ಉದ್ಧಟತನನದ ಹೇಳಿಕೆ ನೀಡಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ನಮ್ಮ ಮೇಲೆ ನಿರಂತರವಾಗಿ ಅನ್ಯಾಯ ನಡೆಯುತ್ತಿದೆ. ನಾನು ಮಹಾ ಮೇಳಾವದಲ್ಲಿ ಮಾಡಿದ ಭಾಷಣವನ್ನು ತಪ್ಪಾಗಿ ಅರ್ಥೈಸಲಾಗಿದೆ. ನಾವು ನಮ್ಮ ಹಕ್ಕನ್ನ ಕೇಳುತ್ತಿದ್ದೇವೆ. ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರುವವರೆಗೂ ನಮ್ಮ ಹೋರಾಟ ನಿಲ್ಲದು, ರಾಜ್ಯದಲ್ಲಿ ನನ್ನ ಮೇಲೆ ಹಲ್ಲೆ ನಡೆಯುತ್ತಿದೆ. ಅದಕ್ಕೆ ನಾನು ಬೆನ್ನು ತೋರಿಸಿ ಹೋಗುವವವನಲ್ಲ. ಒಂದು ವೇಳೆ ನನ್ನ ಮೇಲೆ ಹಲ್ಲೆ ನಡೆದು ಅದರಲ್ಲಿ ನಾನೇನಾದರೂ ಸತ್ತು ಹೋದರೆ ನನ್ನ ಜತೆಗೆ ನಾಲ್ಕೈದು ಜನರನ್ನ ತೆಗೆದುಕೊಂಡು ಹೋಗದೇ ಇರೆನು ಎಂದು ಪ್ರಚೋದನಾಕಾರಿ ಭಾಷಣ ಮಾಡಿದ್ದಾರೆ. ಈ ಮೂಲಕ ಸಂಭಾಜಿ ಪಾಟೀಲ್ ಮತ್ತೊಮ್ಮೆ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಈ ಸುದ್ದಿಯ ವಿಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ.... 

 

 

 

Add comment
 

More items in this section