FacebookTwitter

ಲೋಕಸಭೆಗೆ ಜೆಡಿಎಸ್ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ

    User Rating:  / 1
    PoorBest 

ಬೆಂಗಳೂರು(ಜ.17): ಜೆಡಿಎಸ್ ಪಕ್ಷದ ಜಾಯಮಾನವೇ ಹಾಗಿರ್ಬೇಕು. ಅಲ್ಲಿ ಯಾವುದೂ ಸುಸೂತ್ರವಾಗಿ ನಡಿಯೋದಿಲ್ಲ. ಅಭ್ಯರ್ಥಿಗಳ ಆಯ್ಕೆ ವಿಷಯದಲ್ಲಂತೂ ಸದಾ ಕಗ್ಗಂಟು. ರಾಷ್ಟ್ರೀಯ ಪಕ್ಷಗಳು ಅಭ್ಯರ್ಥಿಗಳ ಹೆಸರು ಪ್ರಕಟಿಸುವವರೆಗೆ ಕಾಯಬೇಕೋ, ಬೇಡವೋ? ದಿಢೀರನೇ ಪಕ್ಷಕ್ಕೆ ಬರುವವರಿಗೆ ಟಿಕೆಟ್ ಕೊಡಬೇಕೋ ಬೇಡ್ವೋ? ಮೊದಲೇ ಕೊಟ್ಟರೆ ಇತರೆ ಆಕಾಂಕ್ಷಿಗಳು ಪಕ್ಷದಲ್ಲಿ ಉಳಿಯುತ್ತಾರೋ, ಇಲ್ವೋ? ಎಂಬ ಜಿಜ್ಞಾಸೆಗಳು ಜೆಡಿಎಸ್ ಪಕ್ಷವನ್ನ ಇಕ್ಕಟ್ಟಿಗೆ ಸಿಲುಕಿಸಿವೆ.

ಈ ಎಲ್ಲಾ ಅಡ್ಡಿ ಆತಂಕಗಳ ನಡುವೆ ಮೊದಲ ಹಂತದಲ್ಲಿ ಕೆಲವು ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗಿದೆ. ಕೆಲ ಕ್ಷೇತ್ರಗಳಲ್ಲಿ ಒಬ್ಬ ಅಭ್ಯರ್ಥಿಯ ಹೆಸರನ್ನ ಅಂತಿಮಗೊಳಿಸಿದರೆ, ಮತ್ತೆ ಕೆಲವು ಕ್ಷೇತ್ರಗಳಲ್ಲಿ ಇಬ್ಬರು ಅಭ್ಯರ್ಥಿಗಳ ಹೆಸರನ್ನ ಸೂಚಿಸಲಾಗಿದೆ.

ಜೆಡಿಎಸ್ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ...
ಹಾಸನ: ಎಚ್.ಡಿ. ದೇವೇಗೌಡ
ಬೆಂಗಳೂರು ಗ್ರಾಮಾಂತರ: ಅನಿತಾ ಕುಮಾರಸ್ವಾಮಿ
ಮಂಡ್ಯ: ಸಿ.ಎಸ್. ಪುಟ್ಟರಾಜು
ರಾಯಚೂರು: ರಾಜೂಗೌಡ
ಬೀದರ್: ಬಂಡೆಪ್ಪ ಕಾಶಂಪುರ್
ತಮಕೂರು: ಎ. ಕೃಷ್ಣಪ್ಪ
ಬೆಂಗಳೂರು ಸೆಂಟ್ರಲ್: ಅಬ್ದುಲ್ ಅಜೀಂ
ಶಿವಮೊಗ್ಗ: ಶಕುಂತಳಾ ಬಂಗಾರಪ್ಪ/ಗೀತಾ ಶಿವರಾಜ್ಕುಮಾರ್
ಬೆಂಗಳೂರು ಉತ್ತರ: ಎ. ಕೃಷ್ಣಪ್ಪ/ ಜೈಪಾಲ್ರೆಡ್ಡಿ
ಬೆಂಗಳೂರು ದಕ್ಷಿಣ: ಬಾಗೇಗೌಡ/ ಕುಪ್ಪೇಂದ್ರರೆಡ್ಡಿ
ಮೈಸೂರು: ಪ್ರಮೋದಾದೇವಿ/ ಸಾ.ರಾ. ಮಹೇಶ್
ಕೋಲಾರ: ಮೈಲಾರಪ್ಪ/ಸಿದ್ದಯ್ಯ
ಚಿಕ್ಕಬಳ್ಳಾಪುರ: ಶ್ರೀನಿವಾಸಮೂರ್ತಿ/ ಕೆ.ಪಿ. ಬಚ್ಚೇಗೌಡ
ಚಿತ್ರದುರ್ಗ: ಗೂಳಿಹಟ್ಟಿ ಶೇಖರ್/ಜನಾರ್ಧನಸ್ವಾಮಿ
ಉತ್ತರ ಕನ್ನಡ: ಶಶಿಕಾಂಗ್ ಭೂಷಣ್/ಸುನಿಲ್ ಹೆಗಡೆ

ಉಳಿದ ಕ್ಷೇತ್ರಗಳ ಬಗ್ಗೆ ಮುಂದಿನ ತಿಂಗಳು ಚರ್ಚೆ!
ಇನ್ನು, 13 ಕ್ಷೇತ್ರಗಳ ಬಗ್ಗೆ ಸದ್ಯಕ್ಕೆ ಚರ್ಚೆ ನಡೆದಿಲ್ಲ. ಪಂಚಾಯತ್ ಪ್ರತಿನಿಧಿಗಳ ಸಭೆ, ಮಹಿಳಾ ಸಮಾವೇಶ ಮತ್ತು ರೈತ ಸಮಾವೇಶಗಳೆಲ್ಲಾ ಆದಮೇಲೆ ಮುಂದಿನ ತಿಂಗಳು ಚರ್ಚೆ ಆಗಲಿದೆ. ಕೆಲವು ಕಡೆ ಅಭ್ಯರ್ಥಿಗಳನ್ನು ಹುಡುಕಬೇಕಾಗಿದೆ. ಇನ್ನು ಕೆಲವು ಕ್ಷೇತ್ರಗಳಲ್ಲಿ ಬೇರೆ ಪಕ್ಷಗಳಿಂದ ಬರುವವರಿಗಾಗಿ ಕಡೆ ಗಳಿಗೆವರೆಗೂ ಕಾದು ಆಮೇಲೆ ತೀರ್ಮಾನ ಕೈಗೊಳ್ಳಲಾಗುತ್ತೆ.

- ಧರಣೀಶ್ ಬೂಕನಕೆರೆ, ಸುವರ್ಣ ನ್ಯೂಸ್

 

 

 

Add comment




 

More items in this section