FacebookTwitter

ಸಿದ್ದರಾಮಯ್ಯ ಹೆಸರು ದುರ್ಬಳಕೆ ಆರೋಪ

    User Rating:  / 0
    PoorBest 
ಸಿದ್ದರಾಮಯ್ಯ

ಬಳ್ಳಾರಿ: ಮುಖ್ಯಮಂತ್ರಿಗಳ ಹೆಸರನ್ನು ದುರ್ಬಳಕೆ ಮಾಡಿಕೊಂಡು ಕುರುಬ ಸಮಾಜ ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ಜನಾಂಗದವರು ದಲಿತರ ವಿರುದ್ಧ ನಿರಂತರ ದೌರ್ಜನ್ಯ ನಡೆಸುತ್ತಿದ್ದಾರೆಂದು ಮಾದಿಗ ಮೀಸಲಾತಿ ಹೋರಾಟ ಸಮಿತಿರಾಜ್ಯಾಧ್ಯಕ್ಷ ಹನುಮಂತಪ್ಪ ಆರೋಪಿಸಿದ್ದಾರೆ. ಮಂತ್ರಿಗಳ ಹೆಸರನ್ನು ದುರ್ಬಳಕೆ ಮಾಡಿಕೊಂಡು ಅವರವರ ಸಮುದಾಯದವರು ದಬ್ಬಾಳಿಕೆ ಪ್ರವೃತ್ತಿ ಬೆಳೆಸಿಕೊಂಡಿರುವುದರಿಂದಾಗಿ ದಲಿತರಿಗೆ ರಕ್ಷಣೆ ಇಲ್ಲದಂತಾಗಿದೆ ಎಂದಿದ್ದಾರೆ.

ಯಾದಗಿರಿ ಜಿಲ್ಲೆಯಲ್ಲಿ ದಲಿತರ ಮೇಲೆ ನಿರಂತರವಾಗಿ ದಾಳಿ ನಡೆಯುತ್ತಿದ್ದು ಕೊಲೆ, ಅತ್ಯಾಚಾರದಂತಹಾ ಪ್ರಕರಣಗಳು ಪದೆ ಪದೆ ಮರುಕಳಿಸುತ್ತಿದೆಯಲ್ಲದೆ ದಲಿತರ ಮೇಲೆ ದೌರ್ಜನ್ಯ ತಡೆಯುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿರುವ ಅವರು, ದಲಿತ ದೌರ್ಜನ್ಯಗಳ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳದೆ ಸತಾಯಿಸುತ್ತಿರುವ ಯಾದಗಿರಿ ಎಸ್ಪಿಯನ್ನು ಸರ್ಕಾರ ಕೂಡಲೆ ವರ್ಗಾವಣೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.

ಅಹಿಂದದ ಬಗ್ಗೆ ಮಾತನಾಡುವ ಮುಖ್ಯಮಂತ್ರಿಗಳು ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಕಂಡೂ ಕಾಣದಂತೆ ವರ್ತಿಸುತ್ತಿದ್ದು, ಹಲ್ಲೆ ಪ್ರಕರಣಗಳನ್ನ ತಡೆಯುವಲ್ಲಿ ವಿಫಲವಾಗಿದ್ದಾರೆ ಎಂದು ಆರೋಪಿಸಿರುವ ಅವರು, ಇತ್ತೀಚೆಗೆ ಯಾದಗಿರಿ ಬೆಳಚೇಡು ಗ್ರಾಮದಲ್ಲಿ ದಲಿತ ಯುವತಿ ಮೇಲೆ ಅತ್ಯಾಚಾರ, ಕಡೆಚೂರು ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ಸವರ್ಣಿಯರಿಂದ ದಲಿತರ ಮೇಲೆ ಹಲ್ಲೆ ನಡೆದಿದ್ದರೂ ಆರೋಪಿಗಳ ವಿರುದ್ಧ ಶಿಸ್ತಿನ ಕ್ರಮ ಕೈಗೊಂಡಿಲ್ಲ ಎಂದಿದ್ದಾರೆ.

ನಿನ್ನೆ ಕನ್ನೆ ಕೂಳೂರು ಗ್ರಾಮದಲ್ಲಿ ದಲಿತನ ಕೊಲೆ ಹೀಗೆ ಸರಣಿ ದೌರ್ಜನ್ಯಗಳು ನಡೆಯುತ್ತಿದ್ದರೂ ಸರ್ಕಾರ ಕ್ರಮಕ್ಕೆ ಮುಂದಾಗುತ್ತಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕ್ಯಾಮರಮನ್ ಶ್ರೀನಿವಾಸ್ ಜೊತೆ ಗುರುರಾಜ ಹೂಗಾರ್/ಸುವರ್ಣ ನ್ಯೂಸ್. ಬಳ್ಳಾರಿ

 

 

 

 

Add comment
 

More items in this section