FacebookTwitter

ವಿಠ್ಠಲ್ ಅರಬಾವಿ ಆತ್ಮಹತ್ಯೆ ಪ್ರಕರಣ ಫೆ.5ಕ್ಕೆ ಸರ್ಕಾರಕ್ಕೆ ಅಂತಿಮ ವರದಿ

    User Rating:  / 0
    PoorBest 
ಒಳಚಿತ್ರದಲ್ಲಿರುವವರು ಮೃತ ರೈತ ವಿಠಲ್ ಅರಬಾವಿ/  ಸಾಂದರ್ಭಿಕ ಚಿತ್ರ_ungu

ಬೆಳಗಾವಿ: ಬೆಳಗಾವಿಯ ಚಳಿಗಾಲದ ಅಧಿವೇಶನ ಸಂದರ್ಭದಲ್ಲಿ ರೈತ ವಿಠಲ್ ಅರಬಾವಿ ಆತ್ಮಹತ್ಯೆ ಪ್ರಕರಣದ ವಿಚಾರಣೆ ಇದೀಗ ಅಂತಿಮ ಹಂತ ತಲುಪಿದ್ದು, ಇಲ್ಲಿನ ಹಳೇ ಜಿಪಂ ಕಚೇರಿಯಲ್ಲಿ ಧಾರವಾಡ ಜಿಲ್ಲಾಧಿಕಾರಿ ಸಮೀರ ಶುಕ್ಲಾ ಅವರು ಸಾಕ್ಷಿಗಳ ವಿಚಾರಣೆ ನಡೆಸಿದ್ದಾರೆ.

ಪ್ರಕರಣ ಕುರಿತು ರೈತ ಮುಖಂಡರು, ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ರೈತರು ಮಾಹಿತಿ ನೀಡಿದ್ದಾರೆ. ಒಟ್ಟು 49 ಜನ ಈ ಕುರಿತು ಹೇಳಿಕೆಗಳನ್ನು ನೀಡಿದ್ದಾರೆ.

ಸಂಕ್ಷಿಪ್ತ ಫ್ಲಾಶ್ ಬ್ಯಾಕ್: ಬೆಳಗಾವಿಯಲ್ಲಿ ನಡೆದ ಅಧಿವೇಶನ ಆರಂಭದ ದಿನದಿಂದ ಕಬ್ಬು ಬೆಳೆಗೆ ಬೆಂಬಲ ಬೆಲೆ ಘೋಷಣೆ ಮಾಡಬೇಕೆಂದು ರೈತರು ಪ್ರತಿಭಟನೆ ನಡೆಸುತ್ತಿದ್ದರು.

ಮೂರು ದಿನ ಹಗಲು-ರಾತ್ರಿ ಧರಣಿ ನಡೆಸಿದ್ದರೂ ಸರ್ಕಾರ ರೈತರ ಸಂಕಷ್ಟಕ್ಕೆ ಸ್ಪಂದಿಸಿರಲಿಲ್ಲ. ಇದರಿಂದ ರೈತರು ನೊಂದಿದ್ದರು. ನ.27ರಂದು ಮದ್ಯಾಹ್ನ ರಾಯಬಾಗ ತಾಲೂಕಿನ ಕಂಕಣವಾಡಿ ಗ್ರಾಮದ ರೈತ ವಿಠಲ ಅರಬಾರ ಪ್ರತಿಭಟನಾ ಸ್ಥಳದಲ್ಲಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದರು.

ಈ ಪ್ರಕರಣ ತೀವ್ರ ಕೋಲಾಹಲ ಸೃಷ್ಠಿಸಿತ್ತು. ಸರ್ಕಾರ ಪ್ರಕರಣದ ಕುರಿತು ನ್ಯಾಯಾಂಗ ತನಿಖೆಗೆ ಧಾರವಾಡ ಜಿಲ್ಲಾಧಿಕಾರಿಯವರನ್ನು ನೇಮಿಸಿದೆ.

ಇನ್ನೂ ಅನೇಕ ರೈತರು ತಮ್ಮ ಹೇಳಿಕೆ ದಾಖಲಿಸಿದ್ದು, ಇದರಲ್ಲಿ ಪ್ರಮುಖವಾಗಿ ರಾಯಬಾಗ ವಕೀಲ ಶಂಕರ ಶೀರಗಾಂವೆ ಅವರು ರೈತನ ಸಾವಿಗೆ ಶಾಸಕ ಪಿ.ರಾಜು ಕಾರಣ ಎಂದು ಹೇಳಿದ್ದಾರೆ.

ಮುಗ್ಧ ರೈತನ ತಲೆಯಲ್ಲಿ ಇಲ್ಲಸಲ್ಲದ ವಿಷಯ ತುಂಬಿ ಅವರ ತಲೆ ಕೆಡಸಿದ್ದಾರೆ ಎಂಬ ಆರೋಪ ಮಾಡಿದ್ದಾರೆ. ಇನ್ನೂ ಸಿಎಂ ಸಿದ್ದರಾಮಯ್ಯ ವಿರುದ್ಧ ಕೆಲವರು ದೂರು ನೀಡಿದ್ದಾರೆ. ರೈತರ ಹೋರಾಟಕ್ಕೆ ತಕ್ಷಣ ಸ್ಪಂಧಿಸಿದ್ದರೆ ಈ ಘಟನೆ ಸಂಭವಿಸುತ್ತಿರಲಿಲ್ಲ ಇದಕ್ಕೆ ಸಿದ್ದರಾಮಯ್ಯ ನೇರ ಹೊಣೆ ಎಂದಿದ್ದಾರೆ.

ಚಂದ್ರಕಾಂತ ಸುಗಂಧಿ

 


ಇವನ್ನೂ ಓದಿ...

 

ಕಬ್ಬಿಗೆ ಬೆಂಬಲ ಬೆಲೆಗೆ ಆಗ್ರಹ-ರೈತ ಆತ್ಮಹತ್ಯೆ

ರೈತ ಆತ್ಮಹತ್ಯೆ: CM ರಾಜಿನಾಮೆಗೆ BSY,HDK,DVS ಪಟ್ಟು


 

 

 

Add comment
 

More items in this section