FacebookTwitter

ಆಸ್ತಿ ಬಗ್ಗೆ ಸುಳ್ಳು ಅಫಿಡವಿಟ್ ಆರೋಪ-ಸಚಿವ ದೇಶಪಾಂಡೆ ವಿರುದ್ಧ ದೂರು

    User Rating:  / 0
    PoorBest 

 

ಕಾರವಾರ(ಜ.20): ತಮ್ಮ ಆಸ್ತಿ ಬಗ್ಗೆ ಚುನಾವಣಾ ಆಯೋಗಕ್ಕೆ ಸುಳ್ಳು ಅಫಿಡವಿಟ್ ಸಲ್ಲಿಸಿದ ಆರೋಪದಡಿ ಉನ್ನತ ಶಿಕ್ಷಣ ಸಚಿವ ಆರ್.ವಿ. ದೇಶಪಾಂಡೆ ವಿರುದ್ಧ ಕೇಸ್ ದಾಖಲಾಗಿದೆ. ಹಳಿಯಾಳದ ಜೆಎಂಎಫ್`ಸಿ ಕೋರ್ಟ್`ನಲ್ಲಿ ಸಾಮಾಜಿಕ ಕಾರ್ಯಕರ್ತ ಜಯಂತ್ ತಿನೇಕರ್ ಕೇಸ್ ದಾಖಲಿಸಿದ್ದಾರೆ. ಆರ್.ವಿ. ದೇಶಪಾಂಡೆ ಶಾಸಕತ್ವ ಅನರ್ಹಗೊಳಿಸುವಂತೆ ಅರ್ಜಿಯಲ್ಲಿ ಕೋರಲಾಗಿದೆ. ಐಪಿಸಿ ಸೆಕ್ಷನ್ 171(ಜಿ), 177, 181 ಸೇರಿ 9 ಸೆಕ್ಷನ್`ಗಳ ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ.

ದೇಶಪಾಂಡೆ ಅಕ್ರಮ ಆಸ್ತಿ ಹೊಂದಿದ್ದಾರೆ ಮತ್ತು ಕಡಿಮೆ ಆಸ್ತಿ ಬಗ್ಗೆ ಅಫಿಡವಿಟ್ ಸಲ್ಲಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

 

 

 

 

Add comment




 

More items in this section