FacebookTwitter

2ನೇ ಪತ್ನಿ ರಾಧಿಕಾ ಬಗ್ಗೆ ಮಾಹಿತಿ ನೀಡದ ಆರೋಪ-ಕುಮಾರಸ್ವಾಮಿ ವಿರುದ್ಧ ದೂರು

    User Rating:  / 0
    PoorBest 

 

ಬೆಂಗಳೂರು(ಜ.20): ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಕೆಯಾಗಿದೆ. ಹೆಚ್ಡಿಕೆ ಎರಡನೇ ಮದುವೆಯಾಗಿದ್ದು, ಎರಡನೇ ಹೆಂಡತಿ ಬಗ್ಗೆ ಮಾಹಿತಿ ಗೌಪ್ಯವಾಗಿಡಲಾಗಿದೆ. ಹಾಗೇ ಚುನಾವಣೆ ವೇಳೆ ಚುನಾವಣಾ ಆಯೋಗಕ್ಕೂ ಮಾಹಿತಿ ನೀಡಿಲ್ಲ ಎಂದು ಪತ್ರಕರ್ತೆ ನಾಗಲಕ್ಷ್ಮೀ ಬಾಯಿ ಆರೋಪಿಸಿದ್ದಾರೆ. ಎರಡನೇ ಪತ್ನಿ ರಾಧಿಕಾ ಕುಮಾರಸ್ವಾಮಿ ಹೆಸರಿನಲ್ಲಿರುವ ವ್ಯವಹಾರದ ಬಗ್ಗೆ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಿಲ್ಲ. ಅವರ ಹಣಕಾಸು ವ್ಯವಹಾರದ ವಿವರ ನೀಡದೆ ಜನಪ್ರತಿನಿಧಿ ಕಾಯ್ದೆ 125(A) ಅನ್ವಯ ತಪ್ಪು ಎಸಗಿದ್ದಾರೆ. ಹಾಗಾಗಿ, ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಕ್ರಮ ಕೈಗೊಂಡು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕೆಂದು ಒತ್ತಾಯಿಸಿದ್ದಾರೆ.

 

 

 

Add comment




 

More items in this section