FacebookTwitter

ಬೇಲೇಕೇರಿ ಅದಿರು ನಾಪತ್ತೆ ಪ್ರಕರಣ: ಜನಾರ್ದನ ರೆಡ್ಡಿ ಸೇರಿ ಹಲವರ ವಿರುದ್ಧ ಚಾರ್ಜ್`ಶೀಟ್

    User Rating:  / 0
    PoorBest 

ಬೆಂಗಳೂರು(ಜ.20): ಬೇಲೇಕೇರಿ ಅದಿರು ನಾಪತ್ತೆ ಪ್ರಕಣದ ತನಿಖೆ ಮುಂದುವರೆದಿದೆ. ಇದೀಗ ಬೇಲೇಕೇರಿ ಬಂದರಿನಿಂದ ಅಕ್ರಮವಾಗಿ ವಿದೇಶಗಳಿಗೆ ಅದಿರು ರಪ್ತು ಮಾಡಿದ ಆರೋಪದಡಿ ಎಸ್ ಬಿ ಲಾಜಿಸ್ಟಿಕ್ ವಿರುದ್ದ ಸಿಬಿಐ ಮತ್ತೆರಡು ಪೂರಕ ಚಾರ್ಜ್`ಶೀಟ್ ಗಳನ್ನು ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದೆ.

ಚಾರ್ಟ್`ಶೀಟ್`ನಲ್ಲಿ ಏನಿದೆ..?: ಎಸ್ ಬಿ ಲಾಜಿಸ್ಟಿಕ್ ಕಂಪನಿ ಬೇಲೇಕೇರೆ ಬಂದರಿನಿಂದ 1.53 ಲಕ್ಷ ಮೆಟ್ರಿಕ್ ಟನ್ ಅದಿರನ್ನು ಅಕ್ರಮವಾಗಿ 18 ಬೇನಾಮಿ ಕಂಪನಿಗಳ ಹೆಸರಲ್ಲಿ ಸಾಗಾಟ ಮಾಡಲಾಗಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ 43.54ಕೋಟಿ ರೂಪಾಯಿ ನಷ್ಟವುಂಟಾಗಿದೆ. ಅಲ್ಲದೇ ಸೆಪ್ಟಂಬರ್ 2009ರಿಂದ ಮೇ 2010ವರೆಗೆ ಒಟ್ಟು 7.74 ಲಕ್ಷ ಮೆಟ್ರಿಕ್ ಟನ್ ಅದಿರನ್ನು ವಿದೇಶಕ್ಕೆ ಕಳುಹಿಸಲಾಗಿದೆ. ಅಕ್ರಮವಾಗಿ ಅದಿರನ್ನು ವಿದೇಶಕ್ಕ ರಪ್ತು ಮಾಡಿ 198 ಕೋಟಿ ರೂಪಾಯಿ ಹಣ ಪಡೆಯಲಾಗಿದೆ ಎಂದು ಸಿಬಿಐ ಚಾರ್ಜ್ ಶೀಟ್ ನಲ್ಲಿ ತಿಳಿಸಲಾಗಿದೆ. ಈ ಸಂಬಂಧ ಗಾಲಿ ಜನಾರ್ದನ ರೆಡ್ಡಿ, ಆಲಿಖಾನ್, ಶಾಸಕ ಆನಂದ್ ಸಿಂಗ್, ನಾಗೇಂದ್ರ, ಖಾರದಪುಡಿ ಮಹೇಶ್ ವಿರುದ್ಧ ಚಾರ್ಜ್``ಶೀಟ್ ಸಲ್ಲಿಸಲಾಗಿದೆ..

 

ಒಟ್ಟಾರೆ, ಗಾಲಿ ಜನಾರ್ದನ ರೆಡ್ಡಿ ಸೇರಿದಂತೆ ಹಲವರು ಅರಣ್ಯ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಕಾನೂನುಗಳನ್ನು ಗಾಳಿಗೆ ತೂರಿರುವ ಬಗ್ಗೆ ಚಾರ್ಜ್`ಶೀಟ್``ನಲ್ಲಿ ಹೇಳಲಾಗಿದೆ.

 

 

 

Add comment
 

More items in this section