FacebookTwitter

ತಮಿಳುನಾಡು ಆಂಧ್ರದ ಗರ್ಭದಲ್ಲಿದೆ ಅಪಾರ ವಜ್ರ!

    User Rating:  / 0
    PoorBest 
ಸಾಂದರ್ಭಿಕ ಚಿತ್ರ (ಸುದ್ದಿಗೂ ಚಿತ್ರಕ್ಕೂ ನೇರ ಸಂಬಂಧವಿರುವುದಿಲ್ಲ)

ಕೊಲ್ಕತಾ: ತಮಿಳುನಾಡು ಮತ್ತು ಆಂಧ್ರಪ್ರದೇಶಕ್ಕೆ ಸೇರಿದ ಸುಮಾರು 2 ಲಕ್ಷ ಚದರ ಕಿ.ಮೀ ಪ್ರದೇಶದಲ್ಲಿ ವಜ್ರದ ನಿಕ್ಷೇಪ ಹೊಂದಿರ ಬಹುದಾದ ಕಲ್ಲಿನ ಸೆಲೆಗಳು ಹುದುಗಿರುವುದಾಗಿ ಸಂಶೋದನಾ ವರದಿಯೊಂದು ಬಹಿರಂಗಪಡಿಸಿದೆ.

ಹೈದರಾಬಾದಿನಲ್ಲಿರುವ ರಾಷ್ಟ್ರೀಯ ಭೂಗರ್ಭ ಸಂಶೋಧನ ಸಂಸ್ಥೆಯಡಿಯಲ್ಲಿ ಪ್ರಸಿದ್ಧ ಭೂಗರ್ಭಶಾಸ್ತ್ರಜ್ಞ ಸುಬ್ರತ್ ದಾಸ್ ಶರ್ಮಾ ಮತ್ತು ದುರ್ಬಾ ಸಾಯಿ ರಮೇಶ್ ಎಂಬವರ ನೇತೃತ್ವದಲ್ಲಿ ನಡೆದ ಸಂಶೋಧನೆಯಿಂದ ಈ ವಿಷಯ ಬೆಳಕಿಗೆ ಬಂದಿದೆ.

ಬಹುಬೇಡಿಕೆಯ ವಜ್ರಕ್ಕಾಗಿ ಆಸ್ತ್ರೇಲಿಯಾ, ಕೆನಡಾ, ರಷ್ಯಾ, ದಕ್ಷಿಣ ಆಫ್ರಿಕಾ, ನಮೀಬಿಯಾ, ಬೋಟ್ಸವನಾ ರಾಷ್ಟ್ರಗಳನ್ನೇ ಹೆಚ್ಚಾಗಿ ಅವಲಂಬಿಸಿರುವ ಪ್ರಸಕ್ತ ಮಾರುಕಟ್ಟೆ ಸ್ಥಿತಿಗತಿಯಲ್ಲಿ, ಇದೀಗ ಹೊರಬಂದಿರುವ ವರದಿಯಿಂದಾಗಿ ದಕ್ಷಿಣ ಭಾರತದಲ್ಲಿ ವಜ್ರ ಗಣಿಗಾರಿಕೆಗೆ ಮತ್ತಷ್ಟು ಬೇಡಿಕೆ ಬರಲಿರುವುದಾಗಿ ಅಂದಾಜಿಸಲಾಗಿದೆ.

ದಕ್ಷಿಣ ಭಾರತದ ಪ್ರಮುಖ ಪ್ರದೇಶಗಳಲ್ಲಿ ವಜ್ರದ ನಿಕ್ಷೇಪಗಳಿರುವುದಕ್ಕೆ ಐತಿಹಾಸಿಕ ದಾಖಲೆಗಳೂ ಸ್ಪಷ್ಟ ಪುರಾವೆ ಒದಗಿಸಿದ್ದು, ಅದರಂತೆ, ಕ್ರಿಸ್ತ ಶಕ 4 ನೇ ಇಸವಿಯಿಂದಲೂ ಕೃಷ್ಣಾ ನದಿ ಪ್ರದೇಶದಲ್ಲಿ ವಜ್ರ ಗಣಿಗಾರಿಕೆ ನಡೆಯುತ್ತಿತ್ತು.

ಅಲ್ಲದೆ, ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಲ್ಲೇ ವಿಶ್ವದ ಅತೀ ದೊಡ್ಡ ವಜ್ರ ಕೊಹಿನೂರ್ ಪತ್ತೆಯಾಗಿದ್ದಾಗಿ ಸಾಕ್ಷಾಧಾರಗಳಿಂದ ತಿಳಿದುಬಂದಿದ್ದು, ಇದೀಗ ಆ ಪ್ರದೇಶಗಳಲ್ಲೆಲ್ಲಾ ವ್ಯಾಪಕ ಗಣಿಗಾರಿಕೆ ನಡೆಯುತ್ತಿದೆಯಾದರೂ, ಅದು ಪ್ರತ್ಯೇಕವಾಗಿ ವಜ್ರದ ಗಣಿಗಾರಿಕೆಯಲ್ಲ ಎಂಬುದು ಸ್ಪಷ್ಟ ಎಂದು ತಿಳಿದುಬಂದಿದೆ.

ಸಂಶೋದಕರು ಏನಂತಾರೆ: ಈ ನಮ್ಮ ವಿಸ್ಕೃತ ವರದಿಯಿಂದಾಗಿ ಭಾರತದಲ್ಲಿ ವಜ್ರ ಗಣಿಗಾರಿಕೆ ಮತ್ತಷ್ಟು ವ್ಯಾಪಿಸುವ ಸಾಧ್ಯತೆಯಿದೆಯಾದರೂ, ಈ ಕುರಿತು ಅಂತಾರಾಷ್ಟ್ರೀಯ ಕಂಪನಿಗಳು ಉತ್ಸಾಹ ತೋರಿದರೆ ಮಾತ್ರ ನಮ್ಮ ಮಾರುಕಟ್ಟೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರಲಿರುವುದಾಗಿ ದಾಸ್ ಶರ್ಮಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ದಕ್ಷಿಣ ಭಾರತದ ಭೂಮಿಯ ಮೇಲ್ಪದರದಿಂದ ಸರಿಸುಮಾರು 150 ಕಿ.ಮೀ ಆಳದಲ್ಲಿ ಈ ವಜ್ರದ ನಿಕ್ಷೇಪಗಳಿರುವ ಸಾಧ್ಯತೆಯನ್ನು ಬಹಿರಂಗಪಡಿಸಿರುವ ಭೂಗರ್ಭಶಾಸ್ತ್ರಜ್ಞ ದಾಸ್ ಶರ್ಮಾ, ಕರ್ನಾಟಕದ ಧಾರವಾಡ ಮತ್ತು ಚತ್ತೀಸ್’ಗಡದ ನಕ್ಷಲ್ ಪೀಡಿತ ಬಸ್ತಾರ್ ಪ್ರದೇಶಗಳಲ್ಲಿ ಇಂತಹಾ ಗಣಿ ನಿಕ್ಷೇಪಗಳಿರುವ ಕುರುಹು ಈ ಹಿಂದೆಯೇ ಪತ್ತೆಯಾಗಿತ್ತು ಎಂದಿದ್ದಾರೆ.

ವಿಭೇಧೀಕರಣ ಪ್ರಕ್ರಿಯೆಯಲ್ಲಿ ರೂಪುಗೊಂಡ ಇಂಗಾಲದ ಕಠಿಣ ಘನರೂಪವೇ ವಜ್ರ!

ಮಾಹಿತಿ ಕೃಪೆ: ದಿ ಎಕನಾಮಿಕ್ ಟೈಮ್ಸ್

 .....ಇಳಯರಾಜ.ಕೆ.ಸುಬ್ಬಯ್ಯ

 

 

 

Add comment