FacebookTwitter

ದಾವೂದ್ ಬೇಟೆಗೆ ಅಮೆರಿಕದ ಜೊತೆ ಜಂಟಿ ಕಾರ್ಯಾಚರಣೆ - ಶಿಂಧೆ

    User Rating:  / 0
    PoorBest 

ನವದೆಹಲಿ(ಜ.10): 1993ರ ಮುಂಬೈ ಬಾಂಬ್ ಸ್ಫೋಟ ಪ್ರಕರಣ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾರತಕ್ಕೆ ಬೇಕಾಗಿರುವ ಮೋಸ್ಟ್ ವಾಂಟೆಡ್ ಭಯೋತ್ಪಾದಕ ದಾವೂದ್ ಇಬ್ರಾಹಿಂ ಬೇಟೆಗೆ ಅಮೆರಿಕದ ಜೊತೆ ಜಂಟಿ ಕಾರ್ಯಾಚರಣೆ ನಡೆಸುತ್ತಿರುವುದಾಗಿ ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಹೇಳಿದ್ದಾರೆ. ನಮಗೆ ಸಿಕ್ಕಿರುವ ಮಾಹಿತಿ ಪ್ರಕಾರ, ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲೇ ಇದ್ದಾನೆ. ಕಳೆದ ವರ್ಷ ಅಮೆರಿಕಕ್ಕೆ ತೆರಳಿದ್ದಾಗ ಈ ಕುರಿತು ಅಮೆರಿಕದ ಅಟಾರ್ನಿ ಜನರಲ್ ಜೊತೆ ಮಾತುಕತೆ ನಡೆಸಿದ್ದೇನೆ. ಎರಡೂ ದೇಶಗಳಲ್ಲಿ ದಾವೂದ್ ಬಗ್ಗೆ ಕಲೆ ಹಾಕಿರುವ ಮಾಹಿತಿಯ ಪರಸ್ಪರ ವಿನಿಮಯಕ್ಕೆ ಒಪ್ಪಿಗೆ ಸೂಚಿಸಿದ್ದೇವೆ ಎಂದು ಶಿಂಧೆ ತಿಳಿಸಿದ್ದಾರೆ.

ನವದೆಹಲಿಯಲ್ಲಿ ಮಾಸಿಕ ಸುದ್ದಿಗೋಷ್ಠಿಯನ್ನ ಉದ್ದೇಶಿಸಿ ಮಾತನಾಡಿದ ಶಿಂಧೆ, ದಾವೂದ್ ಹಲವು ಪ್ರಕರಣಗಳಲ್ಲಿ ಭಾರತಕ್ಕೆ ಬೇಕಾಗಿರುವ ಭಯೋತ್ಪಾದಕ, ಭಾರೀ ಪ್ರಮಾಣದ ಅಕ್ರಮ ವ್ಯವಹಾರಗಳನ್ನ ನಡೆಸುತ್ತಿದ್ದಾನೆ. ಅಲ್ಲದೇ, ಭಯೋತ್ಪಾದಕ ಸಂಘಟನೆ ಅಲ್ ಖೈದಾ ಜೊತೆಗೂ ಸಂಪರ್ಕ ಹೊಂದಿದ್ದಾನೆ. ಹೀಗಾಗಿಯೇ ಅಮೆರಿಕ ದಾವೂದ್`ನನ್ನ `ಜಾಗತಿಕ ಭಯೋತ್ಪಾದಕ' ಎಂದು ಘೋಷಿಸಿದೆ. ವಿಶ್ವಾದ್ಯಂತ ದಾವೂದ್`ನ ವ್ಯವಹಾರವನ್ನು ಸ್ಥಗಿತಗೊಳಿಸಿ ಆತನ ಹೆಡೆಮುರಿ ಕಟ್ಟುವ ಪ್ರಸ್ತಾಪ ವಿಶ್ವಸಂಸ್ಥೆ ಮುಂದೆ ಚರ್ಚೆಯಲ್ಲಿದೆ ಎಂದು ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಹೇಳಿದ್ದಾರೆ.

 

 

 

Add comment