FacebookTwitter

ಮೋದಿ ಎಐಸಿಸಿ ಸಭೆಯಲ್ಲಿ ಟೀ ಮಾರೋಕೆ ಒಪ್ಪಿದರೆ ಅವಕಾಶ ಮಾಡಿಕೊಡ್ತೀವಿ - ಮಣಿಶಂಕರ್ ಅಯ್ಯರ್

    User Rating:  / 0
    PoorBest 

ನವದೆಹಲಿ(ಜ.17): ಕಾಂಗ್ರೆಸ್`ನ ಹಿರಿಯ ಮುಖಂಡ ಮಣಿಶಂಕರ್ ಅಯ್ಯರ್ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ವಿರುದ್ಧ ಮತ್ತೊಂದು ವಿವಾದಿತ ಹೇಳಿಕೆ ನೀಡುವ ಮೂಲಕ ಕಮಲ ಪಾಳಯದ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಎಐಸಿಸಿ ಸಭೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಮಣಿಶಂಕರ್ ಅಯ್ಯರ್, ಪ್ರಧಾನಿ ಕನಸು ಕಾಣುತ್ತಿರುವ ನರೇಂದ್ರಮೋದಿಯನ್ನ ಟೀಕಿಸುವ ಭರದಲ್ಲಿ ಸೌಜನ್ಯದ ಎಲ್ಲೆ ಮೀರಿ ಅಯ್ಯರ್ ಪ್ರತಿಕ್ರಿಯೆ ನೀಡಿದ್ದಾರೆ. ಎಐಸಿಸಿ ಸಭೆಯಲ್ಲಿ ನರೇಂದ್ರಮೋದಿ ಟೀ ಮಾರೋಕೆ ಒಪ್ಪಿದರೆ ಅದಕ್ಕೆ ಅವಕಾಶ ಮಾಡಿಕೊಡುತ್ತೇವೆ ಎನ್ನುವ ಮೂಲಕ ಮತ್ತೊಂದು ವಿವಾದಕ್ಕೆ ನಾಂದಿಹಾಡಿದ್ದಾರೆ.

ಅಯ್ಯರ್ ಹೇಳಿದ್ದೇನು..?: 21ನೇ ಶತಮಾನದಲ್ಲಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಪ್ರಧಾನಿ ಆಗುವುದಿಲ್ಲ.
`ನನ್ನ ಮಾತನ್ನ ನೆನಪಿಟ್ಟುಕೊಳ್ಳಿ, 21ನೇ ಶತಮಾನದಲ್ಲಿ ಯಾವುದೇ ಕಾರಣಕ್ಕೂ ಮೋದಿ ಪ್ರಧಾನಿ ಆಗುವುದಿಲ್ಲ, ಒಂದು ಪಕ್ಷ ಎಐಸಿಸಿ ಸಭೆಯಲ್ಲಿ ಟೀ ಮಾರಲು ಮೋದಿ ಒಪ್ಪಿದರೆ, ಅದಕ್ಕೆ ಅವಕಾಶ ಮಾಡಿಕೊಡುತ್ತೇವೆ' ಎಂದು ಸಾರ್ವಜನಿಕವಾಗಿ ಮಣಿಶಂಕರ್ ಅಯ್ಯರ್ ಉದ್ಧಟತನದ ಹೇಳಿಕೆ ನೀಡಿದ್ಧಾರೆ.

ರಾಜಕೀಯಕ್ಕೆ ಬರುವುದಕ್ಕೂ ಮುನ್ನ ಟೀ ಮಾರಿಕೊಂಡು ಜೀವನ ಸಾಗಿಸುತ್ತಿದ್ದ ನರೇಂದ್ರ ಮೋದಿಯ ಹಳೆಯ ವೃತ್ತಾಂತವನ್ನು ಕೆದಕುವ ಮೂಲಕ ಮಣಿಶಂಕರ್ ಅಯ್ಯರ್ ವ್ಯಂಗ್ಯವಾಡಿದ್ದಾರೆ.

ಹಾಗಂತ, ಮಣಿಶಂಕರ್ ಅಯ್ಯರ್ ಹೀಗೆ ಸಾರ್ವಜನಿಕವಾಗಿ ನರೇಂದ್ರಮೋದಿಯನ್ನ ಟೀಕಿಸುತ್ತಿರುವುದು ಇದೇ ಮೊದಲ ಬಾರಿಯೇನಲ್ಲ. ಕಳೆದ ಡಿಸೆಂಬರ್`ನಲ್ಲಿ ಮೋದಿಯನ್ನ ಒಬ್ಬ ಜೋಕರ್ ಮತ್ತು ಇತಿಹಾಸ, ಆರ್ಥಿಕತೆ ಬಗ್ಗೆ ಜ್ಞಾನವಿಲ್ಲ ಎಂದು ಟೀಕಿಸಿದ್ದರು.

ಮಾಹಿತಿ ಕೃಪೆ(ಜೀ ನ್ಯೂಸ್)

 

 

 

Add comment