FacebookTwitter

ಸೋನಿಯಾ ಅಳಿಯನ ಡೀಲ್ ಕೆಣಕಿದ್ದ ಅಶೋಕ್ ಖೇಮ್ಕಾ ವಿರುದ್ಧ ಸಿಬಿಐ ತನಿಖೆ..!

    User Rating:  / 0
    PoorBest 

ನವದೆಹಲಿ(ಜ.18): ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾ ಅವರ ಆಸ್ತಿ ಕುರಿತು ತನಿಖೆ ನಡೆಸಿದ್ದೇ ನಡೆಸಿದ್ದು ಐಎಎಸ್ ಅಧಿಕಾರಿ ಅಶೋಕ್ ಖೇಮ್ಕಾ ಕೈ ಪಾಳಯದ ಕೆಂಗಣ್ಣಿಗೆ ಗುರಿಯಾಗುತ್ತಿದ್ದಾರೆ. ಖೇಮ್ಕಾ ವಿರುದ್ಧ ಹರ್ಯಾಣದ ಭೂಪಿಂದರ್ ಹೂಡಾ ನೇತೃತ್ವದ ಕಾಂಗ್ರೆಸ್ ಸರ್ಕಾರ ಈಗಾಗಲೇ ಹಲವು ತನಿಖೆಗಳನ್ನ ನಡೆಸುತ್ತಿದೆ. ಇದರ ಬೆನ್ನಲ್ಲೇ ಅಶೋಕ್ ಖೇಮ್ಕಾ ವಿರುದ್ಧ ಸಿಬಿಐ ತನಿಖೆಗೂ ಆದೇಶಿಸಲಾಗಿದೆ.

2009ರಲ್ಲಿ ಹರ್ಯಾಣದ ಉಗ್ರಾಣ ನಿಗಮದ ನಿರ್ವಾಹಕರಾಗಿದ್ದ ಸಂದರ್ಭದಲ್ಲಿ 8 ಕೋಟಿ ರೂಪಾಯಿಯ ಶೀಟ್ ಖರೀದಿ ಕಂಟ್ರಾಕ್ಟ್ ಒಂದನ್ನು ಗುಜರಾತ್`ನ ಕಂಪನಿಯೊಂದಕ್ಕೆ ನೀಡಿದ ವ್ಯವಹಾರದಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿರುವ ಹರ್ಯಾಣ ಸರ್ಕಾರ ಸಿಬಿಐ ತನಿಖೆಗೆ ಆದೇಶಿಸಿದೆ. ಈ ಒಪ್ಪಂದದಲ್ಲಿ ಸರ್ಕಾರದಿಂದ ಅನುಮತಿ ಪಡೆಯದೇ ಅಶೋಕ್ ಖೇಮ್ಕಾ ನಿಯಮಾವಳಿಗಳನ್ನ ಬದಲಿಸಿದ್ದಾರೆ ಎಂದು ಕೆಲ ದೂರುಗಳು ದಾಖಲಾಗಿದ್ದವು. ಇದರನ್ವಯ ಸರ್ಕಾರ ತನಿಖೆಗೆ ಆದೇಶಿಸಿದೆ.

ಇಷ್ಟೇ ಅಲ್ಲ, ಸೋನಿಯಾ ಗಾಂಧಿಯ ಅಳಿಯ ರಾಬರ್ಟ್ ವಾದ್ರಾರ ಕಂಪನಿ ಮತ್ತು ಡಿಎಲ್ಎಫ್ ಸಂಸ್ಥೆ ನಡುವಿನ ಒಪ್ಪಂದವನ್ನು ಅಕ್ರಮವಾಗಿ ರದ್ದುಮಾಡಿದ ಪ್ರಕರಣ ಸಹ ಅಶೋಕ್ ಖೇಮ್ಕಾ ವಿರುದ್ಧ ದಾಖಲಿಸಲಾಗಿದೆ.

2012ರಲ್ಲಿ ಹರ್ಯಾಣ ಕಂದಾಯ ಇಲಾಖೆಯ ಹಿರಿಯ ಅಧಿಕಾರಿಯಾಗಿದ್ದ ಅಶೋಕ್ ಖೇಮ್ಕಾ, ಮೂಲಭೂತ ನಿಯಮಗಳನ್ನು ಗಾಳಿಗೆ ತೂರಿ ಉದ್ಯಮಿಗೆ ಅಪಾರ ಪ್ರಮಾಣದ ಲಾಭ ಮಾಡಿಕೊಡಲಾಗಿದೆ ಎಂಬ ಕಾರಣವೊಡ್ಡಿ ರಾಬರ್ಟ್ ವಾದ್ರಾ ಕಂಪನಿ ಮತ್ತು ಡಿಎಲ್ಎಫ್ ನಡುವಿನ 57 ಕೋಟಿಯ ಒಪ್ಪಂದವನ್ನ ರದ್ದು ಮಾಡಿದ್ದರು.

ಆ ಬಳಿಕ ಅಶೋಕ್ ಖೇಮ್ಕಾರನ್ನು ಹಲವು ಬಾರಿ ಎತ್ತಂಗಡಿ ಮಾಡಿದ್ದ ಹರ್ಯಾಣ ಸರ್ಕಾರ ಅವರ ಮೇಲೆ ವಿವಿಧ ತನಿಖಾಸ್ತ್ರಗಳನ್ನ ಪ್ರಯೋಗಿಸುತ್ತಿದೆ ಎನ್ನಲಾಗಿದೆ.

 

 

 

Add comment