FacebookTwitter

ಮುಂಬೈನಲ್ಲಿ ಕಾಲ್ತುಳಿತ-18 ಮಂದಿ ದುರ್ಮರಣ

    User Rating:  / 0
    PoorBest 

 

ಮುಂಬೈ(ಜ.18): ಧಾರ್ಮಿಕ ಮುಖಂಡನ ಅಂತಿಮ ದರ್ಶನದ ವೇಳೆ ಉಂಟಾದ ಕಾಲ್ತುಳಿತದಿಂದಾಗಿ 18 ಮಂದಿ ಸಾವನ್ನಪ್ಪಿರುವ ದಾರುಣ ಘಟನೆ ಮುಂಬೈನಲ್ಲಿ ನಡೆದಿದೆ. ಮಲಬಾರ್ ಹಿಲ್ಸ್`ನ ದಾವುದಿ ಬೊಹ್ರಾ ಸಮುದಾಯದ ಧಾರ್ಮಿಕ ಮುಖಂಡ 102 ವರ್ಷದ ಸೈಯಾದಿ ಮೊಹ್ಮದ್ ಬುಹ್ರಾನುದ್ದೀನ್ ಹೃದಯಾಘಾತದಿಂದ ನಿನ್ನೆ ನಿಧನರಾಗಿದ್ದರು. ಸೈಫಿ ಮಹಲ್`ನಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಬೆಳಗಿನ ಜಾವ 1.30ರ ಸುಮಾರಿಗೆ ಲಕ್ಷಾಂತರ ಮಂದಿ ಅಂತಿಮ ದರ್ಶನಕ್ಕೆ ಆಗಮಿಸಿದ್ದರು. ಈ ಸಂದರ್ಭ ಸಂಭವಿಸಿದ ಕಾಲ್ತುಳಿತದಲ್ಲಿ 18 ಮಂದಿ ಅಸುನೀಗಿದ್ದಾರೆ ಎಂದು ಬಿಎಂಸಿಯ ವಪತ್ತು ನಿರ್ವಹಣಾ ಪಡೆ ತಿಳಿಸಿದೆ.

 

 

 

Add comment