FacebookTwitter

ಹೆಂಡತಿ ಸಾವಿನಿಂದ ಆಘಾತ - ಎದೆನೋವಿನಿಂದ ಆಸ್ಪತ್ರೆಗೆ ದಾಖಲಾದ ಶಶಿ ತರೂರ್

    User Rating:  / 0
    PoorBest 

 

ನವದೆಹಲಿ(ಜ.18): ಪತ್ನಿ ಸುನಂದಾ ಪುಷ್ಕರ್ ಸಾವಿನಿಂದ ತೀವ್ರ ಆಘಾತಕ್ಕೀಡಾಗಿರುವ ಕೇಂದ್ರ ಸಚಿವ ಶಶಿ ತರೂರ್ ಬೆಳಗಿನ ಜಾವ ಹೃದಯ ಸಂಬಂಧಿ ಸಮಸ್ಯೆಯಿಂದ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

57 ವರ್ಷದ ಶಶಿ ತರೂರ್ ಬೆಳಗಿನ ಜಾವ 3 ಗಂಟೆ ಸುಮಾರಿಗೆ ತೀವ್ರ ಎದೆನೋವು, ಖಿನ್ನತೆಯಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಏಮ್ಸ್ ಆಸ್ಪತ್ರೆಯ ಮೂಲಗಳು ತಿಳಿಸಿವೆ. ಕೇಂದ್ರ ಸಚಿವರಿಗೆ ಇಸಿಜಿ ಸೇರಿದಂತೆ ಹಲವು ಪರೀಕ್ಷೆಗಳನ್ನ ಮಾಡಲಾಗಿದ್ದು, ತರೂರ್ ಆರೋಗ್ಯ ಪರಿಸ್ಥಿತಿ ಈಗ ಸ್ಥಿರವಾಗಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ನಿನ್ನೆ ರಾತ್ರಿ ಶಶಿ ತರೂರ್ ಪತ್ನಿ ಸುನಂದಾ ಪುಷ್ಕರ್ ದೆಹಲಿಯ ಪಂಚತಾರಾ ಹೋಟೆಲ್`ನಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದರು. ಇದರಿಂದ ಶಶಿ ತರೂರ್ ತೀವ್ರ ಆಘಾತಕ್ಕೀಡಾಗಿದ್ದರು.

 

 

 

Add comment