FacebookTwitter

ಟೀ ವಾಲಾ ವಿರುದ್ಧ ಸ್ಪರ್ಧೆಗೆ ರಾಜವಂಶ ಹಿಂದೇಟು

    User Rating:  / 0
    PoorBest 
ನರೇಂದ್ರ ಮೋದಿ

ನವದೆಹಲಿ: ಅಮೆರಿಕಾದಂತಹಾ ಅಧ್ಯಕ್ಷೀಯ ಪ್ರಜಾಪ್ರಭುತ್ವ ವ್ಯವಸ್ಥೆಯಿರುವ ರಾಷ್ಟ್ರಗಳಲ್ಲಿ ಮಾತ್ರ ಅಧ್ಯಕ್ಷರ ಹೆಸರನ್ನು ಮೊದಲೇ ಘೋಷಿಸುವ ವ್ಯವಸ್ಥೆಯಿದ್ದು, ನಮ್ಮದು ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯಾದ್ದರಿಂದ ಪ್ರಧಾನಿ ಅಭ್ಯರ್ಥಿಯ ಹೆಸರನ್ನು ಮೊದಲೇ ಘೋಷಿಸಿ ಚುನಾವಣೆ ಎದುರಿಸುವ ಪ್ರಕ್ರಿಯೆಯಿಲ್ಲವಾದ್ದರಿಂದಾಗಿ ನಾವು ಪ್ರಧಾನಿ ಅಭ್ಯರ್ಥಿಯ ಹೆಸರನ್ನು ಚುನಾವಣೆಗೆ ಮುಂಚಿತವಾಗಿಯೇ ಘೋಷಿಸುವುದಿಲ್ಲಾ ಹಾಗೂ ಆ ರೀತಿ ಘೋಷಣೆ ಮಾಡುವುದು ಕಾಂಗ್ರೆಸ್ ಸಂಸ್ಕೃತಿಗೆ ವಿರುದ್ಧವಾದದ್ದು ಎಂಬ ಸ್ಪಷ್ಟಣೆ ನೀಡಿ ಹಿಂದೇಟು ಹಾಕಿದ ಕಾಂಗ್ರೆಸ್ ನಿರ್ಧಾರದ ವಿರುದ್ಧ ಭಾನುವಾರ ರಾಮಲೀಲಾ ಮೈದಾನದಲ್ಲಿ ವಾಗ್ದಾಳಿ ನಡೆಸಿರುವ ಭಾರತೀಯ ಜನತಾ ಪಕ್ಷದ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ, ಓಹೋ ನೀವು ಪ್ರಜಾಪ್ರಭುತ್ವ ವ್ಯವಸ್ಥೆಯ ಆಧಾರದಲ್ಲಿ ಪ್ರಧಾನಿ ಅಭ್ಯರ್ಥಿಯನ್ನು ಘೋಷಿಸುತ್ತೀರೋ ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರಲ್ಲದೆ, ಸ್ವತಃ ತನ್ನನ್ನು ಟೀ ಮಾರಾಟ ಮಾಡುವ ವ್ಯಕ್ತಿಗೆ ಹೋಲಿಸಿಕೊಂಡು ಅರೆ ಛೀ ಒಬ್ಬ ಟೀ ಮಾರಾಟ ಮಾಡುವ ವ್ಯಕ್ತಿಗೆ ವಿರುದ್ಧವಾಗಿ ಯಾರನ್ನು ನಿಲ್ಲಿಸುತ್ತೀರೆಂದು ಬಹಿರಂಗವಾಗಿ ಘೋಷಿಸಲು ಮೀಟರು ಇಲ್ಲದಷ್ಟು ದುರ್ಬಲವಾಯಿತೇ ತಲೆತಲಾಂತರಗಳಿಂದ ಅಧಿಕಾರ ನಡೆಸುತ್ತಾ ಬರುತ್ತಿರುವ ರಾಜವಂಶ [ನೆಹರೂ-ರಾಹುಲ್ ಗಾಂಧಿ] ಕ್ಕೆ ಎಂದು ಲೇವಡಿಯಾಡಿದ್ದಾರೆ.

ಅಯ್ಯರ್ ಮಾತಿಗೆ ತಿರುಗೇಟು: ಈ ಹಿಂದೆ ನರೇಂದ್ರ ಮೋದಿ ಅವರು ಬಡತನ ಎದುರಿಸುತ್ತಿದ್ದ ದಿನಗಳಲ್ಲಿ ಚಹಾ ಮಾರಾಟ ಮಾಡಿ ಬದುಕು ಸವೆಸುತ್ತಿದ್ದ ದಿನಗಳನ್ನು ಉಲ್ಲೇಖಿಸಿ ನೀಚಮಟ್ಟದಲ್ಲಿ ಹಿಯಾಳಿಸಿದ್ದ ಮಣಿಶಂಕರ್ ಅಯ್ಯರ್ ಅವರ ಮಾತಿಗೆ ಅವರು ಮೇಲಿನಂತೆ ತಿರುಗೇಟು ನೀಡಿದ್ದಾರೆ. ತಮ್ಮ ಬಿರುಸಿನ ಮಾತಿನ ಧಾಟಿಯಲ್ಲಿ ಅವರು ಸೋನಿಯಾಗಾಂಧಿ ಮತ್ತು ರಾಹುಲ್ ಗಾಂಧಿಯ ಹೆಸರು ಉಲ್ಲೇಖಿಸದೆ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವನ್ನು ಬೆಂಬಲಿಸಿ ಗೆಲ್ಲಿಸಿ ಎಂದು ಕರೆನೀಡಿದ ಮೋದಿ, ನಮ್ಮ ದೇಶ ಇವತ್ತು ಎದುರಿಸುತ್ತಿರುವ ನಿರುದ್ಯೋಗ ಸಮಸ್ಯೆ, ಮುಗಿಲು ಮುಟ್ಟಿದ ಭ್ರಷ್ಟಾಚಾರ ಸಮಸ್ಯೆ, ಸುರಕ್ಷತೆಯಿಲ್ಲದೆ ಭಯಭೀತಿಯಿಂದ ತಿರುಗಾಡುವ ಮಹಿಳೆಯರ ದುಸ್ಥಿತಿಯನ್ನ ವಿವರಿಸಿದರಲ್ಲದೆ, ಸ್ವಾತಂತ್ರಾನಂತರ ಅಧಿಕಾರಕ್ಕೆ ಬಂದಾಗಲೆಲ್ಲಾ ತನ್ನ ಕುಟುಂಬದ ಸದಸ್ಯರಿಗೇ ದೇಶದ ಉನ್ನತ [ಪ್ರಧಾನಿ] ಹುದ್ಧೆ ಲಭ್ಯವಾಗುವಂತೆ ನೋಡಿಕೊಂಡು ಬರುತ್ತಿರುವ ಇದೇ ಕಾಂಗ್ರೆಸ್ ಇದೀಗ ನಾವು ಪ್ರಧಾನಿ ಅಭ್ಯರ್ಥಿಯನ್ನು ಪ್ರಜಾಪ್ರಭುತ್ವದ ಆಧಾರದಲ್ಲಿ ಘೋಷಿಸುತ್ತೇವೆ ಎನ್ನುತ್ತಾ ನಮ್ಮ ಕಿವಿಗೆ ಹೋವಿಡಲು ಯತ್ನಿಸುತ್ತಿದೆ ಎಂಬರ್ಥದಲ್ಲಿ ಕುಟುಕಿ, ಈ ರೀತಿಯೆಲ್ಲಾ ಪ್ರಜಾಪ್ರಭುತ್ವವನ್ನು ಪ್ರತಿಪಾಧಿಸಿಕೊಳ್ಳಲು ನಿಮಗೆ ನೈತಿಕ ಹಕ್ಕಿಲ್ಲ ಎಂದು ಆರ್ಭಟಿಸಿದ್ದಾರೆ.

ರಾಹುಲ್ ಗಾಂಧಿಯವರನ್ನು ಪಕ್ಷದ ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಿಸಲು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಿಂದೇಟು ಹಾಕುತ್ತಿರುವ ನಿಲುವಿನ ಕುರಿತು ಯಾರೊಬ್ಬರ ಹೆಸರನ್ನೂ ಉಲ್ಲೇಖಿಸದೆ ಕುಹಕವಾಡಿದ ಮೋದಿ, ತನ್ನ ಪ್ರೀತಿಯ ಮಗ ಸೋಲಿನ ಸುಳಿಯಿಂದ ಬಚಾವ್ ಆಗಲು ಸಾಧ್ಯವೇ ಇಲ್ಲವೆಂದರಿತ ಯಾವ ತಾಯಿ ತಾನೆ ಸುಮ್ಮನೆ ಹೆಸರು ಘೋಷಿಸಿ ಹೀನಾಯವಾಗಿ ಅವನನ್ನು ಬಲಿಪಶು ಮಾಡಲು ಬಯಸುತ್ತಾರೆಂದು ಸೆಂಟಿಮೆಂಟ್ ಟಚ್ ಕೊಟ್ಟು ಮೂದಲಿಸಿದ್ದಾರೆ.

ಕಾಂಗ್ರೆಸಿನ ಇತ್ತೀಚಿನ ಬೃಹತ್ ಸಮಾವೇಶ ಕುರಿತು ಮಾತನಾಡಿದ ನರೇಂದ್ರ ಮೋದಿ, ಇತ್ತ ಭಾರತೀಯ ಜನತಾ ಪಕ್ಷ ಈ ದೇಶವನ್ನು ಹೇಗೆ ರಕ್ಷಿಸುವುದು ಎಂದು ಶತಪ್ರಯತ್ನ ನಡೆಸುತ್ತಿದ್ದರೆ ಮತ್ತೊಂದೆಡೆ ಕಾಂಗ್ರೆಸ್ ಪಕ್ಷ ತನ್ನ ಅಸ್ಥಿತ್ವದ ಉಳಿವಿಗಾಗಿ ಪ್ರಯತ್ನದ ಮೇಲೆ ಪ್ರಯತ್ನ ನಡೆಸುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

 

 

 

Add comment