FacebookTwitter

ಪೊಲೀಸರಿಂದ ಲಂಚ ಪಡೆಯುತ್ತಿರುವ ಶಿಂಧೆ -ಕೇಜ್ರಿವಾಲ್ ವಾಗ್ದಾಳಿ

    User Rating:  / 0
    PoorBest 

ನವದೆಹಲಿ(ಜ.20): ದೆಹಲಿ ಸರ್ಕಾರದ ಆದೇಶ ಪಾಲಿಸದೆ ಕರ್ತವ್ಯ ಲೋಪ ಎಸಗಿರುವ ಐವರು ಪೊಲೀಸರ ಅಮಾನತಿಗೆ ಆಗ್ರಹಿಸಿ ದೆಹಲಿಯಲ್ಲಿ ಸಿಎಂ ಕೇಜ್ರಿವಾಲ್ ನೇತೃತ್ವದಲ್ಲಿ ಆಮ್ ಆದ್ಮಿಯ ಸಚಿವರು, ಶಾಶಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಗೃಹ ಕಚೇರಿ ಎದುರು ಪ್ರತಿಭಟನೆ ಪೊಲೀಸರು ಅವಕಾಶ ನೀಡಲಿಲ್ಲ. ರೈಲ್ ಭವನದ ಎದುರೇ ಕೇಜ್ರಿವಾಲ್`ಗೆ ತಡೆ ಒಡ್ಡಲಾಯ್ತು. ಹೀಗಾಗಿ ರೈಲ್ ಭವನದ ಎದುರೇ ಕೇಜ್ರಿವಾಲ್ ಪ್ರತಿಭಟನೆ ನಡೆಸುತ್ತಿದ್ದಾರೆ. ಕರ್ತವ್ಯ ಲೋಪ ಎಸಗಿರುವ ಪೊಲೀಸರನ್ನ ಅಮಾನತು ಮಾಡುವವರೆಗೂ ಪ್ರತಿಭಟನೆ ಕೈಬಿಡುವುದಿಲ್ಲವೆಂದು ಪಟ್ಟು ಹಿಡಿದಿರುವ ಕೇಜ್ರಿವಾಲ್, ಕೇಂದ್ರ ಗೃಹ ಸಚಿವರ ವರ್ತನೆಗೆ ಕಿಡಿ ಕಾರಿದ್ದಾರೆ. ದೆಹಲಿಯ ಎಲ್ಲ ಜನತೆಯೂ ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದ್ದಾರೆ.

ಪೊಲೀಸರಿಂದ ಲಂಚ ಪಡೆಯುತ್ತಿರುವ ಗೃಹ ಸಚಿವರು-ಕೇಜ್ರಿವಾಲ್ : ದೆಹಲಿಯ ಹೃದಯ ಭಾಗದಲ್ಲಿ ಮಾದಕ ವಸ್ತು ಮತ್ತು ವೇಶ್ಯಾವಾಟಿಕೆ ದಂಧೆ ತಡೆಯಲು ಪೊಲೀಸರು ಮುಂದಾಗಲಿಲ್ಲ. ಅಂತಹ ಪೊಲೀಸರ ಅಮಾನತು ಮಾಡಲು ಕೇಂದ್ರ ಗೃಹಸಚಿವರು ಹಿಂದೇಟು ಹಾಕುತ್ತಿದ್ದಾರೆ. ಪೊಲೀಸರು ಅಕ್ರಮ ದಂಧೆಕೋರರ ಜೊತೆ ಶಾಮಿಲಾಗಿದ್ದು, ಅವರಿಂದ ಹಣ ವಸೂಲಿ ಮಾಡಿ ಕೇಂದ್ರ ಗೃಹ ಸಚಿವರಿಗೆ ಲಂಚ ನೀಡುತ್ತಿದ್ದಾರೆ ಎಂದು ಅರವಿಂದ್ ಕೇಜ್ರಿವಾಲ್ ಗಂಭೀರ ಆರೋಪ ಮಾಡಿದ್ದಾರೆ.

 

 

 

Add comment