FacebookTwitter

ದೆಹಲಿಯಲ್ಲಿ ಕೇಜ್ರಿವಾಲ್ ಧರಣಿ:ಪೊಲೀಸರು-ಆಮ್ ಆದ್ಮಿ ಕಾರ್ಯಕರ್ತರ ಘರ್ಷಣೆ

    User Rating:  / 0
    PoorBest 

 

ನವದೆಹಲಿ(ಜ.21): ಸಚಿವರ ಮಾತು ಕೇಳದ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡುವಂತೆ ಆಗ್ರಹಿಸಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ನಡೆಸುತ್ತಿರುವ ಧರಣಿ 2ನೇ ದಿನ ಮತ್ತಷ್ಟು ತೀವ್ರತೆ ಪಡೆದಿದೆ. ರೈಲ್ ಭವನದ ಮುಂದೆ ಕಾರ್ಯಕರ್ತರ ಜೊತೆ ಧರಣಿ ನಡೆಸುತ್ತಿರುವ ಕೇಜ್ರಿವಾಲ್, ಕರ್ತವ್ಯ ಲೋಪ ಎಸಗಿದ ಪೊಲೀಸರನ್ನ ಅಮಾನತು ಮಾಡದ ಹೊರತು ಪ್ರತಿಭಟನೆ ಕೈಬಿಡುವುದಿಲ್ಲ. 10 ದಿನವಲ್ಲ, ಅನಿರ್ದಿಷ್ಟಾವಧಿ ಧರಣಿ ನಡೆಸುತ್ತೇವೆ ಎಂದು ಘೋಷಿಸಿದ್ದಾರೆ. ಜನವರಿ 26ರವರಗೆ ನಮ್ಮ ಬೇಡಿಕೆ ಈಡೇರಿಸದಿದ್ದರೆ ರಾಜ್`ಪಥ್`ನಲ್ಲಿ ಪ್ರತಿಭಟನೆ ನಡೆಸುವುದಾಗಿ ಕೇಂದ್ರ ಗೃಹ ಸಚಿವ ಶಿಂಧೆಗೆ ಎಚ್ಚರಿಕೆ ನೀಡಿದ್ದಾರೆ. ಕೇಂದ್ರ ಗೃಹ ಇಲಾಖೆ ಹಿಡಿತದಲ್ಲಿರುವ ಪೊಲೀಸ್ ಇಲಾಖೆಯನ್ನ ದೆಹಲಿ ಸರ್ಕಾರಕ್ಕೆ ವರ್ಗಾಯಿಸಬೇಕು ಮತ್ತು ಕರ್ತವ್ಯಲೋಪ ಎಸಗಿದ ಐವರು ಪೊಲೀಸ್ ಅಧಿಕಾರಿಗಳನ್ನ ಅಮಾನತು ಮಾಡಬೇಕೆಂದು ಒತ್ತಾಯಿಸಿದ್ದಾರೆ.

ಪೊಲೀಸರು-ಆಮ್ ಆದ್ಮಿ ಕಾರ್ಯಕರ್ತರ ಘರ್ಷಣೆ: ಈ ಮಧ್ಯೆ ಕೇಜ್ರಿವಾಲ್ ಪ್ರತಿಭಟನೆಗೆ ಬೆಂಬಲ ಹೆಚ್ಚಾಗುತ್ತಿದ್ದು, ಕಾರ್ಯಕರ್ತರ ದಂಡೇ ಹರಿದುಬರುತ್ತಿದೆ. ಆದರೆ, ಧರಣಿ ನಡೆಸುತ್ತಿರುವ ರೈಲ್ ಭವನದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿದ್ದು, ಧರಣಿ ನಿರತ ಸ್ಥಳಕ್ಕೆ ಹೆಚ್ಚಿನ ಕಾರ್ಯಕರ್ತರು ತೆರಳಲಾಗದಂತೆ ಬ್ಯಾರಿಕೇಡ್`ಗಳನ್ನ ಹಾಕಲಾಗಿದೆ. ಹೀಗಾಗಿ, ಪ್ರತಿಭಟನಾ ಸ್ಥಳಕ್ಕೆ ಆಗಮಿಸುತ್ತಿರುವ ಆಮ್ ಆದ್ಮಿ ಕಾರ್ಯಕರ್ತರು ಬ್ಯಾರಿಕೇಡ್ ಹತ್ತಿ ಪೊಲೀಸರ ಜೊತೆ ಘರ್ಷಣೆಗೆ ಇಳಿದ ಪ್ರಸಂಗವೂ ನಡೆದಿದೆ.

ಅಗತ್ಯಬಿದ್ದರೆ ರಸ್ತೆಯಲ್ಲೇ ಸಚಿವ ಸಂಪುಟ ಸಭೆ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಜೊತೆ 6 ಸಂಪುಟ ಸಚಿವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ. ಧರಣಿ ನಿರತ ಸ್ಥಳದಲ್ಲೇ ಸರ್ಕಾರಿ ಕಡತಗಳಿಗೆ ಕೇಜ್ರಿವಾಲ್ ಸಹಿ ಹಾಕುತ್ತಿದ್ದಾರೆ. ಆಡಳಿತ ಯಂತ್ರಕ್ಕೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುತ್ತಿದ್ದು, ಅಗತ್ಯಬಿದ್ದರೆ ಇಲ್ಲೇ ಸಚಿವ ಸಂಪುಟ ಸಭೆ ನಡೆಸುವುದಾಗಿ ಸಚಿವ ಯೋಗೇಂದ್ರ ಯಾದವ್ ಹೇಳಿದ್ದಾರೆ.

ಈ ಮಧ್ಯೆ, ಧರಣಿ ನಡೆಸುತ್ತಿರುವ ರೈಲ್ ಭವನದ ಸುತ್ತಮುತ್ತ ಕಟ್ಟಡದಲ್ಲಿರುವ ಎಲ್ಲ ಶೌಚಾಲಯಗಳನ್ನ ಬಂದ್ ಮಾಡಲಾಗಿರುವುದರ ವಿರುದ್ಧ ಕೇಜ್ರಿವಾಲ್ ಕಿಡಿ ಕಾರಿದ್ದಾರೆ. ಧರಣಿ ನಿರತರಿಗೆ ಕನಿಷ್ಠ ಸೌಲಭ್ಯವನ್ನ ಒದಗಿಸಿಲ್ಲ. ನಾವು ಭಾರತೀಯರು, ಪಾಕಿಸ್ತಾನಿಯರಲ್ಲ ಎಂದು ಕೇಜ್ರಿವಾಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

 

 

 

 

 

Add comment