FacebookTwitter

ಎಸ್ಎಫ್ಐ ನಾಯಕ ಸಾವು ದುರದೃಷ್ಟಕರ ಮಮತಾ ಬ್ಯಾನರ್ಜಿ ಎಸ್ಕೇಪ್ ವಾದ (2)

    User Rating:  / 0
    PoorBest 
ಮಮತಾ ಬ್ಯಾನರ್ಜಿ

ಕೊಲ್ಕತಾ: ವಿದ್ಯಾರ್ಥಿ ಸಂಘಟನೆ ಎಸ್ಎಫ್ಐನ ನಾಯಕ ಸುದಿಪ್ತಾ ಗುಪ್ತಾ ಅವರ ಸಾವು ದುರದೃಷ್ಟಕರ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಎಲ್ಲಾ ಸಾವು ಕೂಡ ದುರದೃಷ್ಟಕರವಾದುದು. ಅದೇ ರೀತಿ ಈ ವಿದ್ಯಾರ್ಥಿಯ ಸಾವು ಕೂಡ ದುರದೃಷ್ಟಕರ ಸಂಗತಿ ಎಂದಷ್ಟೇ ಹೇಳಿದ ಮಮತಾ, ಹೆಚ್ಚಿಗೆ ಮಾತನಾಡಲು ಬಯಸುವುದಿಲ್ಲ ಎಂದು ನಿರಾಕರಿಸಿದ್ದಾರೆ.

ವಿದ್ಯಾರ್ಥಿ ನಾಯಕ ಸುದಿಪ್ತಾ ಗುಪ್ತಾ ಕಂಬವೊಂದಕ್ಕೆ ಗುದ್ದಿ ಸಾವನ್ನಪ್ಪಿರುವುದಾಗಿ ಪುನರುಚ್ಚರಿಸಿದ ಮಮತಾ, ತಮ್ಮದೇ ಪಕ್ಷದ ಹಲವಾರು ಕಾರ್ಯಕರ್ತರೂ ಇಂತದ್ದೇ ದುರ್ಘಟನೆಯಲ್ಲಿ ಸಾವನ್ನಪ್ಪಿರುವುದಾಗಿ ಹೇಳುವ ಮೂಲಕ ವಿದ್ಯಾರ್ಥಿ ಸಾವನ್ನು ಕಡೆಗಣಿಸಿದ್ದಾರೆ.

ಆಸ್ಪತ್ರೆಗೆ ಭೇಟಿ ನೀಡಿ ಮೃತ ವಿದ್ಯಾರ್ಥಿಯನ್ನು ನೋಡಿ ಬಂದಿರುವುದಾಗಿ ತಿಳಿಸಿದ ಮಮತಾ, ಆತನ ಸಾವಿಗೆ ಸಂತಾಪ ವ್ಯಕ್ತಪಡಿಸಿ, ಮೃತನ ಕುಟುಂಬಕ್ಕೆ ನೆರವು ನೀಡುವ ಭರವಸೆ ನೀಡಿರುವುದಾಗಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಘಟನೆಗೆ ಪ್ರತಿರೋಧ ವ್ಯಕ್ತಪಡಿಸಿರುವ ಮೃತ ವಿದ್ಯಾರ್ಥಿ ನಾಯಕನ ತಂದೆ ಪ್ರೊನೊಬ್ ಕುಮಾರ್ ಗುಪ್ತಾ,  ರಾಜ್ಯ ಸರ್ಕಾರದಿಂದ ಸಿಗುವ ಯಾವುದೇ ನೆರವು ತನಗೆ ಬೇಕಾಗಿಲ್ಲ ಎಂದು ತಿರಸ್ಕರಿಸಿ, ತನ್ನ ಮಗನನ್ನು ಪೊಲೀಸರೇ ಸಾಯಿಸಿರುವುದಾಗಿ ಆರೋಪಿಸಿದ್ದಾರಲ್ಲದೆ, ತಾವು ನ್ಯಾಯಕ್ಕಾಗಿ ಹೋರಾಟ ಮಾಡುವುದಾಗಿ ಗುಡುಗಿದ್ದಾರೆ.

ಈ ನಡುವೆ ಎಸ್ಎಫ್ಐ ವಿದ್ಯಾರ್ಥಿ ಸಂಘಟನೆಯ ಬೆಂಬಲಿತ ವಿದ್ಯಾರ್ಥಿಗಳು ಪ್ರತಿಭಟನೆಗೆ ಆಗಮಿಸಿದ್ದ ಖಾಸಗಿ ಬಸ್ ವೊಂದರ ಚಾಲಕನ ಮೇಲೆ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವ ಪಶ್ಚಿಮ ಬಂಗಾಳ ಪೊಲೀಸರ ನಾಟಕೀಯ ವರ್ತನೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ ಎಂದು ವರದಿಯಾಗಿದೆ.

 

 

 

Add comment