FacebookTwitter

ಮಹಿಳೆಯ ಮೇಲೆ ಮೈದುನರಿಂದಲೇ ಗ್ಯಾಂಗ್ ರೇಪ್

    User Rating:  / 0
    PoorBest 

ನವದೆಹಲಿ(ಮೇ.02): ದೇಶದ ರಾಜಧಾನಿಯಲ್ಲಿ ಮತ್ತೊಂದು ಗ್ಯಾಂಗ್ ರೇಪ್ ಪ್ರಕರಣ ಬೆಳಕಿಗೆ ಬಂದಿದೆ. ಆರ್.ಕೆ.ಪುರಂ ಬಳಿ ಮಹಿಳೆಯ ಮೇಲೆ ಐವರು ಜನರು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಈ ಕೃತ್ಯದಲ್ಲಿ ಮಹಿಳೆಯ ಮೈದುನರಿಬ್ಬರು ಶಾಮೀಲಾಗಿದ್ದಾರೆ... ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಎಲ್ಲಾ ಐವರನ್ನೂ ಬಂಧಿಸಿದ್ದಾರೆ..

ಘಟನೆ ನಡೆದದ್ದು...
ಮಹಿಳೆ ನೀಡಿರುವ ದೂರಿನ ಪ್ರಕಾರ ಏಪ್ರಿಲ್ 30, ಮಂಗಳವಾರ ರಾತ್ರಿ ಆರ್.ಕೆ.ಪುರಂನಲ್ಲಿ ಮಹಿಳೆ ಇದ್ದ ಮನೆಗೆ ಐವರು ಕಂಠಪೂರ್ತಿ ಕುಡಿದು ಬಂದಿದ್ದಾರೆ. ಮನೆಯಲ್ಲಿ ಗಂಡ ಇಲ್ಲವೆಂದು ಹೇಳಿದರೂ ಹೊರಹೋಗದ ಆ ಐವರು ಆ ಮಹಿಳೆಯನ್ನು ಅಪರಿಚಿತ ಸ್ಥಳವೊಂದಕ್ಕೆ ಕರೆದೊಯ್ದಿದ್ದಾರೆ. ನಂತರ ಅವರು ಒಬ್ಬರಾದ ಮೇಲೊಬ್ಬರಂತೆ ಸರದಿಯಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ತನ್ನ ಗಂಡನ ಸಹೋದರರೂ ಅತ್ಯಾಚಾರದಲ್ಲಿ ಶಾಮೀಲಾಗಿದ್ದು ಮಹಿಳೆಗೆ ಶಾಕ್ ನೀಡಿದೆ. ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುವ ಮುನ್ನ ಆ ಮಹಿಳೆ ಅದು ಹೇಗೋ ಅಲ್ಲಿಂದ ತಪ್ಪಿಸಿಕೊಂಡು ದಾರಿಹೋಕರೊಬ್ಬರ ಸಹಾಯದಿಂದ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ.

ಮಹಿಳೆಯನ್ನು ಆಸ್ಪತ್ರೆಗೆ ದಾಖಸಿಲಾಗಿದ್ದು ಚಿಕಿತ್ಸೆ ನೀಡಲಾಗಿದೆ. ಆಕೆಯ ಮೇಲೆ ಅತ್ಯಾಚಾರ ಎಸಗಿರುವುದು ವೈದ್ಯಕೀಯ ತಪಾಸಣೆಯಿಂದ ದೃಢಪಟ್ಟಿದೆ.

ಪೊಲೀಸರು ಎಲ್ಲಾ ಐವರು ಆರೋಪಿಗಳನ್ನ ಬಂಧಿಸಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಧೀಶರು ಆ ಆರೋಪಿಗಳಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ...

 

 

 

Add comment