FacebookTwitter

ಲೈಂಗಿಕ ಹಗರಣ; ಐಗೇಟ್ ಅಧ್ಯಕ್ಷ ಫಣೀಶ್ ವಜಾ

    User Rating:  / 0
    PoorBest 

ಬೆಂಗಳೂರು(ಮೇ 21): ಕಂಪನಿಯೊಳಗೆ ಅನೈತಿಕ ಲೈಂಗಿಕ ಸಂಬಂಧ ಹಾಗೂ ಲೈಂಗಿಕ ಕಿರುಕುಳದ ಆರೋಪಗಳ ಮೇಲೆ ಐಗೇಟ್ ಸಾಫ್ಟ್ ವೇರ್ ಕಂಪನಿಯ ಸಿಇಓ ಫಣೀಶ್ ಮೂರ್ತಿಯವರನ್ನ ವಜಾ ಮಾಡಲಾಗಿದೆ. ಫಣೀಶ್ ಮೂರ್ತಿಯವರು ಈ ಬಹುರಾಷ್ಟ್ರೀಯ ಕಂಪನಿಯ ಅಧ್ಯಕ್ಷರೂ ಹಾಗೂ ಸಿಇಓ ಆಗಿಯೂ ಕಳೆದ ಹಲವು ವರ್ಷಗಳಿಂದ ಕಾರ್ಯನಿರ್ವಹಿಸಿದ್ದರು... ಫಣೀಶ್ ಅವರನ್ನ ವಜಾ ಗೊಳಿಸಿರುವ ನಿರ್ಧಾರವನ್ನ ಐಗೇಟ್ ನಿರ್ದೇಶಕರ ಮಂಡಳಿ ಅಧಿಕೃತವಾಗಿ ಪ್ರಕಟಿಸಿದೆ.

ಫಣೀಶ್ ಮೂರ್ತಿಯವರು ತಮ್ಮ ಸಂಸ್ಥೆಯ ಕಿರಿಯ ಉದ್ಯೋಗಿಯೊಬ್ಬರೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾರೆಂಬ ಆರೋಪವಿದೆ. ಈ ವಿಚಾರದಲ್ಲಿ ಸಂಸ್ಥೆಯ ಆಡಳಿತ ಮಂಡಳಿಯು ಪ್ರತ್ಯೇಕ ತನಿಖೆ ನಡೆಸಿತ್ತು. ಫಣೀಶ್ ಅವರು ಸಂಸ್ಥೆಯೊಳಗೆ ಅನೈತಿಕ ಲೈಂಗಿಕ ಸಂಬಂಧ ಹೊಂದಿರುವುದು ತನಿಖೆಯಿಂದ ದೃಢಪಟ್ಟಿದೆ. ಅಲ್ಲದೇ, ಇದು ಐಗೇಟ್ ಕಂಪನಿಯ ನಿಯಮಗಳು ಹಾಗೂ ಉದ್ಯೋಗ ಒಪ್ಪಂದದ ನಿಯಮಗಳ ಉಲ್ಲಂಘನೆಯಾಗಿದೆ ಎಂದು ತನಿಖೆ ನಡೆಸಿದ ಸಮಿತಿ ತಿಳಿಸಿದೆ. ಹೀಗಾಗಿ, ಮೂರ್ತಿಯವರನ್ನ ಸೇವೆಯಿಂದ ವಜಾಗೊಳಿಸಲಾಯಿತು ಎಂದು ಸಂಸ್ಥೆ ಪ್ರಕಟಿಸಿದೆ...

ಹಿಂದೆಯೂ ಇತ್ತು ಲೈಂಗಿಕ ಕಳಂಕ
ಫಣೀಶ್ ಮೂರ್ತಿಯವರು 2002ರಲ್ಲಿ ಇನ್ಫೋಸಿಸ್ ಸಂಸ್ಥೆಯಲ್ಲಿದ್ದಾಗ ಲೈಂಗಿಕ ಪ್ರಕರಣವೊಂದು ದೊಡ್ಡು ಸುದ್ದಿ ಮಾಡಿತ್ತು. ಆಗ ಇವರು ಇನ್ಫೋಸಿಸ್್ನ ಗ್ಲೋಬಲ್ ಸೇಲ್ಸ್ ಹೆಡ್ ಆಗಿದ್ದರು. ಅವರಿಗೆ ಪರ್ಸನಲ್ ಸೆಕ್ರಟರಿಯಾಗಿದ್ದ ರೇಖಾ ಮ್ಯಾಕ್ಸಿಮೋವಿಚ್ ಎಂಬುವವರು ಫಣೀಶ್ ಮೂರ್ತಿ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಹೊರಿಸಿದ್ದರು. ಪ್ರಕರಣವನ್ನ ನ್ಯಾಯಾಲಯದಾಚೆ ಇತ್ಯರ್ಥಗೊಳಿಸಲಾಯಿತು. ಮೂರ್ತಿ 30 ಲಕ್ಷ ಡಾಲರ್ (ಆಗ ಸುಮಾರು 14 ಕೋಟಿ ರು.) ಹಣವನ್ನ ಪರಿಹಾರವಾಗಿ ನೀಡಿದ್ದರು.

ಅದಾದ ನಂತರ ಫಣೀಶ್ ಅವರು ಇನ್ಫೋಸಿಸ್ ಬಿಟ್ಟು ತಮ್ಮದೇ ಆದ ಕ್ವಿಂಟಾಂಟ್ ಎಂಬ ಹೊಸ ಸಂಸ್ಥೆ ಹುಟ್ಟುಹಾಕಿದರು. 2003ರಲ್ಲಿ ಅವರ ಕಂಪನಿಯನ್ನ ಐಗೇಟ್ ಸಂಸ್ಥೆ ಖರೀದಿ ಮಾಡಿತು.. ಆಗ ಅವರು ಐಗೇಟ್್ನ ಸಿಇಓ ಆಗಿ ನೇಮಕಗೊಂಡರು. 2006ರಲ್ಲಿ ಪ್ರಸಿಡೆಂಟ್ ಕೂಡ ಆಗಿ ಆಯ್ಕೆಗೊಂಡಿದ್ದರು...

ಮೂರ್ತಿಯವರ ಸೇವೆ
ಫಣೀಶ್ ಮೂರ್ತಿಯವರು ಕಳೆದ 10 ವರ್ಷಗಳಿಂದ ಐಗೇಟ್ ಸಂಸ್ಥೆಯ ಅಭಿವೃದ್ಧಿಗೆ ನೀಡಿರುವ ಸೇವೆಯನ್ನ ಮರೆಯಲು ಸಾಧ್ಯವಿಲ್ಲ. ಐಟಿ ಕ್ಷೇತ್ರದಲ್ಲಿ ಐಗೇಟ್್ಗೆ ಒಂದು ಪ್ರತಿಷ್ಠಿತ ಸ್ಥಾನ ಸಿಗಲು ಫಣೀಶ್ ಅವರ ಕೊಡುಗೆ ನಿಜಕ್ಕೂ ಗಮನಾರ್ಹವಾದುದು ಎಂದು ಸಂಸ್ಥೆಯ ಸಹ-ಸಂಸ್ಥಾಪಕ ಸುನೀಲ್ ವಾಧ್ವಾನಿ ಹೇಳಿದ್ದಾರೆ. ಫಣೀಶ್ ಅವರನ್ನ ಸೇವೆಯಿಂದ ವಜಾಗೊಳಿಸಿದ್ದರೂ ಅವರಿಗೆ 65 ವರ್ಷವಾಗುವ ತನಕ ಪ್ರತೀ ತಿಂಗಳು 6 ಸಾವಿರ ಡಾಲರ್ (3 ಲಕ್ಷ 30 ಸಾವಿರ ರುಪಾಯಿ) ಹಣ ನೀಡಲು ಕಂಪನಿ ನಿರ್ಧರಿಸಿದೆ...

ಹಂಗಾಮಿ ಅಧ್ಯಕ್ಷರ ನೇಮಕ
ಐಗೇಟ್ ಸಂಸ್ಥೆಯ ಮಾಜಿ ಉದ್ಯೋಗಿ ಗೆರಾರ್ಡ್ ವಾಜಿಂಗರ್ ಎಂಬುವವರನ್ನ ಮರಳಿ ಕಂಪನಿಗೆ ಕರೆ ತರಲಾಗಿದ್ದು, ಅವರನ್ನೇ ಹಂಗಾಮಿ ಅಧ್ಯಕ್ಷ ಹಾಗೂ ಸಿಇಓ ಆಗಿ ನೇಮಕ ಮಾಡಲಾಗಿದೆ. ಹೊಸ ಸಿಇಓ ನೇಮಕವಾಗುವವರೆಗೂ ಗೆರಾರ್ಡ್ ಅವರು ಆ ಸ್ಥಾನದಲ್ಲಿ ಮುಂದುವರಿಯಲಿದ್ದಾರೆ ಎಂದು ಐಗೇಟ್ ಪ್ರಕಟಣೆ ತಿಳಿಸಿದೆ....

ಇದೇ ವೇಳೆ, ಫಣೀಶ್ ಮೂರ್ತಿಯವರು ತಮ್ಮ ಮೇಲಿನ ಆರೋಪಗಳನ್ನ ಅಲ್ಲಗಳೆದಿದ್ದಾರೆ. ತಾನ್ಯಾವುದೇ ತಪ್ಪು ಮಾಡಿಲ್ಲವೆಂದೂ, ಇದೆಲ್ಲವೂ ಒಂದು ಷಡ್ಯಂತ್ರವೆಂದು ದೂರಿದ್ದಾರೆ...

 

 

 

Add comment