FacebookTwitter

ವಿಂದೂ ಹೇಳಿದ ಸಿ.ಎಸ್.ಕೆ.ಯ ಆ ಮೂವರು ಯಾರು?

    User Rating:  / 0
    PoorBest 

ನವದೆಹಲಿ(ಮೇ 24): ಫಿಕ್ಸಿಂಗ್ ಮಧ್ಯವರ್ತಿ ವಿಂದೂ ದಾರಾಸಿಂಗ್ ಅವರನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತಿದೆ. ವಿಂದೂ ಮೂಲಕ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಇನ್ನೂ ಹಲವು ಆಘಾತಕಾರಿ ಮಾಹಿತಿಗಳು ಹೊರಬಿದ್ದಿವೆಯಂತೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮೂವರು ಹಿರಿಯ ಆಟಗಾರರೂ ಕೂಡ ಈ ಮೋಸದಾಟದ ಜಾಲದಲ್ಲಿ ಭಾಗಿಯಾಗಿದ್ದಾರೆಂಬ ವಿಷಯವನ್ನ ವಿಂದೂ ಹೇಳಿರುವುದು ವರದಿಯಾಗಿದೆ.

ಸ್ಪಾಟ್ ಫಿಕ್ಸಿಂಗ್ನಲ್ಲಿ ಭಾಗಿಯಾದ ಸಿ.ಎಸ್.ಕೆ.ಯ ಆ ಹಿರಿಯ ಆಟಗಾರರ ಹೆಸರನ್ನ ಇನ್ನೂ ಬಹಿರಂಗಗೊಳಿಸಲಾಗಿಲ್ಲ. ಐಪಿಎಲ್ ಟೂರ್ನಿ ಮುಗಿದ ಬಳಿಕ ಒಂದೊಂದೇ ವಿಷಯಗಳು ಹೊರಬೀಳುವ ಸಾಧ್ಯತೆಗಳಿವೆ... ನ್ಯಾಯಾಲಯದಲ್ಲಿ ಇಂದು ವಿಚಾರಣೆ ನಡೆಯಲಿದ್ದು, ಪೊಲೀಸರು ವಿಂದೂವನ್ನ ಇನ್ನಷ್ಟು ಕಾಲ ತಮ್ಮ ಕಸ್ಟಡಿಗೆ ಒಪ್ಪಿಸುವಂತೆ ಕೇಳಿಕೊಂಡಿದ್ದಾರೆ...

ದಿವಂಗತ ದಾರಾ ಸಿಂಗ್ ಅವರ ಪುತ್ರರಾದ ವಿಂದೂ ರಂಧಾವಾ ಅವರನ್ನೊಳಗೊಂಡಂತೆ ಅನೇಕ ಮಂದಿಯನ್ನ ಪೊಲೀಸರು ಬಂಧಿಸಿದ್ದಾರೆ. ರಾಜಸ್ಥಾನ್ ರಾಯಲ್ಸ್ ತಂಡದ ಮೂವರು ಹಾಲಿ ಆಟಗಾರರನ್ನ, ಇಪ್ಪತ್ತಕ್ಕೂ ಹೆಚ್ಚು ಬುಕ್ಕಿಗಳನ್ನ ಬಂಧಿಸಲಾಗಿದೆ. ಕೆಲ ಮಾಜಿ ಆಟಗಾರರೂ ಬುಕ್ಕಿಗಳಾಗಿ ಕೆಲಸ ಮಾಡುತ್ತಿರುವ ಸಂಗತಿಯೂ ಬಹಿರಂಗವಾಗಿದೆ...

ಸಾಕ್ಷಿ ಧೋನಿಯ ಕತೆ?
ವಿಂದೂ ದಾರಾ ಸಿಂಗ್ ತಾನು ಚೆನ್ನೈನ ಮೂವರು ಹಿರಿಯ ಆಟಗಾರರೊಂದಿಗೆ ಸಂಪರ್ಕದಲ್ಲಿದ್ದಾಗಿ ಮಾಹಿತಿಯೇನೋ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ, ಎಲ್ಲರ ಗಮನವು ಟೀಮ್ ಇಂಡಿಯಾ ನಾಯಕ ಧೋನಿಯ ಪತ್ನಿ ಸಾಕ್ಷಿಯ ಮೇಲೆ ನೆಟ್ಟಿದೆ. ಐಪಿಎಲ್ ಟೂರ್ನಿ ವೇಳೆ ಸಾಕ್ಷಿ ಧೋನಿಯ ಪಕ್ಕದಲ್ಲೇ ಕೂತು ವಿಂದೂ ಧಾರಾ ಸಿಂಗ್ ಪಂದ್ಯಗಳನ್ನ ವೀಕ್ಷಿಸುತ್ತಿದ್ದರು. ಸಾಕ್ಷಿ ಧೋನಿಗೂ ವಿಂದೂ ಧಾರಾ ಸಿಂಗ್ ಅವರಿಗೂ ಕೇವಲ ಪರಿಚಯವಷ್ಟೇ ಇತ್ತಾ ಅಥವಾ ಸ್ಪಾಟ್ ಫಿಕ್ಸಿಂಗ್ ಕೃತ್ಯದಲ್ಲಿ ಇಬ್ಬರೂ ಪಾಲುದಾರರಾಗಿದ್ದಾರಾ ಎಂಬ ಪ್ರಶ್ನೆ ಸಹಜವಾಗೇ ಎದ್ದಿದೆ....

ಸ್ಪಾಟ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಹಲವರ ಬಣ್ಣ ಬಯಲಾಗುವ ಸಾಧ್ಯತೆಯಿದೆ.. ವಿಂದೂ ದಾರಾ ಸಿಂಗ್ ಇಂದು ಕೋಟರ್್ಗೆ ಹಾಜರು ಪಡಿಸಲಿದ್ದಾರೆ. ಚೆನ್ನೈನ ಮೂವರು ಹಿರಿಯ ಆಟಗಾರರೊಂದಿಗೆ ವಿಂದೂ ಸಂಪರ್ಕದಲ್ಲಿದ್ದಿದ್ದಾಗಿ ಹೇಳಿಕೊಂಡಿದ್ದಾರೆ.. ಚೆನ್ನೈ ತಂಡದ ಮೂವರು ಆಟಗಾರರಲ್ಲಿ ಒಬ್ಬ ಹಿರಿಯ ಆಟಗಾರ ಸಹ ತಮ್ಮೊಂದಿಗೆ ಸಂಪರ್ಕದಲ್ಲಿದರು ಎಂದು ದೆಹಲಿ ಪೊಲೀಸರ ಮುಂದೆ ಬಾಯ್ಬಿಟ್ಟಿರುವ ಅವರು ಸ್ಫೋಟಕ ಮಾಹಿತಿ ಹೊರ ಹಾಕಿದ್ದಾರೆ.. ಇಂದು ಸಂಜೆ ಐದು ಗಂಟೆಯೊಳಗೆ ಚೆನ್ನೈ ತಂಡದ ಸಿಇಓ ಗುರುನಾಥ್ ಮೇಯಪ್ಪನ್ ಎಲ್ಲಿದ್ದರೂ ಪೊಲೀಸರಿಗೆ ಬಂದು ಕಾಣುವಂತೆ ಸಮನ್ಸ್ ಜಾರಿ ಮಾಡಿದ್ದಾರೆ.. ಹಲವೆಡೆ ದಾಳಿ ನಡೆಸುತ್ತಿರುವ ಪೊಲೀಸರು ಮತ್ತಷ್ಟೂ ಮಾಹಿತಿ ಕಲೆಹಾಕಿದ್ದಾರೆ..

 

 

 

Add comment