FacebookTwitter

ಯುವತಿ ಮೇಲೆ ಎರಡು ತಿಂಗಳು ಒಂಬತ್ತು ಮಂದಿ ಅತ್ಯಾಚಾರ

    User Rating:  / 0
    PoorBest 

ಮುದ್ದೇಬಿಹಾಳ(ಜೂ.05): ಪಟ್ಟಣದ 9 ಯುವಕರು 23 ವರ್ಷದ ಯುವತಿಯನ್ನು 2 ತಿಂಗಳ ಕಾಲ ಬೇರೆ ಬೇರೆ ಸ್ಥಳಗಳಿಗೆ ಕರೆದೊಯ್ದು ಸಾಮೂಹಿಕ ಅತ್ಯಾಚಾರವೆಸಗಿ ನಂತರ ಅವಳನ್ನು ವೇಶ್ಯಾವಾಟಿಕೆಗೆ ತಳ್ಳಿದ್ದರು. ಯುವತಿ ನಿನ್ನೆ, ಮಂಗಳವಾರ ಅಲ್ಲಿಂದ ತಪ್ಪಿಸಿಕೊಂಡು ಬಂದ ನಂತರ ಈ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ.

ಮೂಲತಃ ಸಿಂದಗಿ ತಾಲೂಕಿನ ಅಲಮೇಲದವಳಾದ ಈ ನತದೃಷ್ಟ ಯುವತಿ ಕಳೆದ ಕೆಲವು ವರ್ಷಗಳಿಂದ ಪಟ್ಟಣದ ಆಶ್ರಯ ಕಾಲೋನಿಯಲ್ಲಿ ವಾಸವಾಗಿದ್ದಳು. ಅದೇ ಕಾಲೋನಿಯ ಮತ್ತೊಬ್ಬ ಯುವತಿ ಈಕೆಯನ್ನು ಪುಸಲಾಯಿಸಿ ಕೆಲವು ಯುವಕರೊಂದಿಗೆ ಮುದ್ದೇಬಿಹಾಳ ತಾಲೂಕು ಗಡಿಭಾಗದಲ್ಲಿರುವ ಕೃಷ್ಣಾ ನದಿ ತೀರದ ಧನ್ನೂರ ಗ್ರಾಮಕ್ಕೆ ಕರೆದೊಯ್ದಿದ್ದಳು. ಅಲ್ಲಿ ಮತ್ತು ಬರುವ ಆಹಾರ ನೀಡಿ ಆಕೆಯನ್ನು ಕಾಮುಕರ ಕೈಗೊಪ್ಪಿಸಲಾಗಿತ್ತು.

ಕಾಮುಕ ಯುವಕರು ಆಕೆಯನ್ನು ಮಂಗಳೂರು, ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ಮುಂತಾದ ಊರುಗಳಿಗೆ ಕರೆದೊಯ್ದು ಅತ್ಯಾಚಾರ ನಡೆಸಿ ಬಳಿಕ ಹೂವಿನಹಡಗಲಿಯಲ್ಲಿ ವೇಶ್ಯಾವಾಟಿಕೆ ಗೃಹದಲ್ಲಿ ಬಿಟ್ಟಿದ್ದರು.

ಕಾಮುಕರಿಂದ ತಪ್ಪಿಸಿಕೊಂಡು ಬಂದ ಯುವತಿ ಮಂಗಳವಾರ ಪೊಲೀಸರ ಮುಂದೆ ತನಗಾಗಿರುವ ಅನ್ಯಾಯವನ್ನು ಬಹಿರಂಗಪಡಿಸಿದ್ದಾಳೆ. ಕೂಡಲೇ ಸಿಪಿಐ ಸುದರ್ಶನ ಪೆಟ್ಟಂಕುಡೆ ಮಾರ್ಗದರ್ಶನದಲ್ಲಿ ಪಿಎಸೈಗಳಾದ ಅಂಬಿಗೇರ ಮತ್ತು ನ್ಯಾಮಣ್ಣವರ ಪ್ರಕರಣ ದಾಖಲಿಸಿಕೊಂಡು ಯುವತಿಯನ್ನು ಪರೀಕ್ಷೆಗಾಗಿ ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ಕಳಿಸಿದರು. ಈ ಮಧ್ಯೆ ಪೊಲೀಸರು ಜಾಲ ಬೀಸಿ ಸಾಮೂಹಿಕ ಅತ್ಯಾಚಾರವೆಸಗಿದ ಆರೋಪಿಗಳ ಪೈಕಿ ಮಂಜುನಾಥ್ ಎನ್ನುವ ಸ್ಥಳೀಯ ಯುವಕನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಯುವತಿ ದೂರಿನಲ್ಲಿ ತಿಳಿಸಿರುವ ಸವಿತಾ, ರವಿ, ರಾಮಚಂದ್ರ, ಯಮನಪ್ಪ, ಭೀವಣ್ಣ, ಅರುಣ, ಶಶಿಕಾಂತ, ಮಹಾನಂದಪ್ಪ ಅವರ ಬಂಧನಕ್ಕೆ ಜಾಲ ಬೀಸಿದ್ದಾರೆ.

(ಸುದ್ದಿಕೃಪೆ: ಕನ್ನಡಪ್ರಭ)

 

 

 

Add comment