FacebookTwitter

ಮೈಮಾರಿಕೊಳ್ಳೋರು ರೇಪ್ ಬಗ್ಗೆ ಮಾತಾಡ್ತಾರೆ

    User Rating:  / 0
    PoorBest 

ಕೋಲ್ಕತಾ(ಜೂ.21): ಬ್ಲೂಫಿಲಂ ದಂಧೆಯಲ್ಲಿರುವ ವ್ಯಕ್ತಿಗಳು ಟಿವಿ ವಾಹಿನಿಗಳಲ್ಲಿ ಕೂತು ಅತ್ಯಾಚಾರಗಳ ಬಗ್ಗೆ ನಿರರ್ಗಳವಾಗಿ ಮಾತಾಡುತ್ತಾರೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕಿಡಿಕಾರಿ ಹೊಸ ವಿವಾದ ಸೃಷ್ಟಿಸಿದ್ದಾರೆ...

ನಿನ್ನೆ ಸಂಜೆ ಬುರ್ದವಾನ್ ಜಿಲ್ಲೆಯ ಗಾಳಸಿಯಲ್ಲಿ ನಡೆದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ಮಮತಾ ಬ್ಯಾನರ್ಜಿ, ಸ್ಥಳೀಯ ಸುದ್ದಿವಾಹಿನಿಗಳ ಸಾಚಾತನವನ್ನ ಪ್ರಶ್ನಿಸಿದ್ದಾರೆ.. ಈ ಸುದ್ದಿವಾಹಿನಿಗಳಲ್ಲಿ ಅತ್ಯಾಚಾರದ ಬಗೆಗಿನ ಚರ್ಚಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿರುವ ಅತಿಥಿಗಳ ಹಿನ್ನೆಲೆಯ ಬಗ್ಗೆ ಮಮತಾ ಶಂಕೆ ವ್ಯಕ್ತಪಡಿಸಿದ್ದಾರೆ... ಸಿಎಂ ಕಾರ್ಯವೈಫಲ್ಯದಿಂದಾಗಿ ಪಶ್ಚಿಮ ಬಂಗಾಳ ಜಿಲ್ಲೆಯಲ್ಲಿ ರೇಪ್ ಪ್ರಸಂಗಗಳು ಹೆಚ್ಚುತ್ತಿವೆ ಎಂದು ಸ್ಥಳೀಯ ಮಾಧ್ಯಮಗಳು ಆರೋಪಿಸುತ್ತಿರುವುದು ಮಮತಾ ಬ್ಯಾನರ್ಜಿಯವರ ಆಕ್ರೋಶಕ್ಕೆ ಕಾರಣವಾಗಿದೆ...

"ಸಂಜೆ ಆಗುತ್ತಿದ್ದಂತೆ ಈ ಜನರು ಒಂದೆರಡು ಅತ್ಯಾಚಾರ ಪ್ರಕರಣಗಳ ಬಗ್ಗೆ ರೋಚಕ ರೀತಿಯಲ್ಲಿ ಚರ್ಚೆ ನಡೆಸುತ್ತಾರೆ. ಬಂಗಾಳದ ತಾಯಂದಿರು ಮತ್ತು ಹೆಣ್ಮಕ್ಕಳನ್ನ ದಿನನಿತ್ಯ ಅವಮಾನ ಮಾಡುತ್ತಾರೆ... ಬಂಗಾಳದ ಗೌರವಕ್ಕೆ ಚ್ಯುತಿ ತರುತ್ತಾರೆ..." ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ವಿಷಾದಿಸಿದ್ದಾರೆ...

ಮಕ್ಕಳಿಗೆ ಗೊತ್ತಾಗುವಂತೆ ಮಾಡುತ್ತಾರೆ...
ಮಾಧ್ಯಮಗಳಲ್ಲಿ ರೇಪ್ ಪ್ರಕರಣಗಳನ್ನ ಅನಗತ್ಯವಾಗಿ ವೈಭವೀಕರಿಸಲಾಗುತ್ತಿರುವ ಬಗ್ಗೆ ಮಮತಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. "ಮಕ್ಕಳಿಗೆ ಏನು ಗೊತ್ತಾಗಬಾರದೋ ಅದನ್ನ ಈ ರೀತಿಯ ಕಾರ್ಯಕ್ರಮಗಳ ಮೂಲಕ ತಿಳಿಸಲಾಗುತ್ತಿದೆ. ಈ ಚಾನೆಲುಗಳಲ್ಲಿ ಮಾತನಾಡಲು ಕರೆಸುತ್ತಿರುವುದಾದರೂ ಯಾರನ್ನ ಹೇಳಿ? ಸಾಮಾಜಿಕ ಕಾರ್ಯಕರ್ತರೆಂದು ಹೇಳಿಕೊಳ್ಳುವ ಅವರಲ್ಲಿ ಬಹುತೇಕ ಮಂದಿ ನಿಜಕ್ಕೂ ದುಡ್ಡಿನ ಕಾರ್ಯಕರ್ತರು... ದುಡ್ಡಿಗಾಗಿ ದಂಧೆ ಮಾಡುವವರು... ಬ್ಲೂಫಿಲಂ ದಂಧೆ ಮಾಡುವವರು... ಇಂಥವರನ್ನ ಕರೆಸಿಕೊಂಡು ಟಿವಿ ವಾಹಿನಿಯವರು ರಸಗವಳದಂತೆ ಕಾರ್ಯಕ್ರಮ ನೀಡುತ್ತಾರೆ" ಎಂದು ಮಮತಾ ಮಾರ್ಮಿಕವಾಗಿ ಝಾಡಿಸಿದ್ದಾರೆ...

 

 

 

Add comment