FacebookTwitter

ದಾವೂದ್ ಇಬ್ರಾಹಿಂನಿಂದ ಹೊಸ ಟಿವಿ ಚಾನೆಲ್ !

    User Rating:  / 0
    PoorBest 

ನವದೆಹಲಿ(ಸೆ.30): ಭೂಗತ ಪಾತಕಿ ದಾವೂದ್ ಇಬ್ರಾಹಿಂ ಬಗ್ಗೆ ಸುದ್ದಿಯನ್ನ ನೀವು ಇಷ್ಟುದಿನ ಟಿವಿಗಳಲ್ಲಿ ನೋಡುತ್ತಿದ್ದಿರಿ, ಪೇಪರ್'ನಲ್ಲಿ ಓದುತ್ತಿದ್ದಿರಿ. ಆದರೆ, ಇದೀಗ ದಾವೂದ್ ಸ್ವತಃ ತಾನೇ ನ್ಯೂಸ್ ಚಾನಲ್, ನ್ಯೂಸ್ ಪೇಪರ್ ತೆರೆಯಲು ಮುಂದಾಗಿದ್ದಾನೆ. ಪಾಕಿಸ್ತಾನ ಮಾಧ್ಯಮಲೋಕಕ್ಕೆ 'ಬಿಒಎಲ್' ಎಂಬ ಹೊಸ ಚಾನೆಲ್ ಅಪ್ಪಳಿಸಿದೆ....

ಭಾರೀ ಸಂಬಳ !?
ದಾವೂದ್ ತನ್ನ ಈ ಹೊಸ ಟಿವಿ ಚಾನೆಲ್'ಗೆ ಕತ್ತಲ ಸಾಮ್ರಾಜ್ಯದ ದೊರೆ ಹೊಸ ಟಿವಿ ಚಾನೆಲ್ಗೆ ಬಂಡವಾಳದ ಹೊಳೆಯನ್ನ ಹರಿಸಿದ್ದಾನೆ. ಇದೇ ವರ್ಷಾಂತ್ಯಕ್ಕೆ ಆರಂಭವಾಗುವ ಟಿವಿ ಚಾನೆಲ್ಗೆ ಸಿಬ್ಬಂದಿ ನೇಮಕಾತಿ ಪ್ರಕ್ರಿಯೆ ಈಗಾಗಲೇ ಶುರುವಾಗಿದೆ. ಬಿಒಎಲ್ ಮಾರ್ಕೆಟಿಂಗ್ ವ್ಯವಸ್ಥೆ ಹೇಗಿದೆ ಅಂದ್ರೆ, ಹಳೆಯ ಚಾನೆಲುಗಳ ಮಾಲೀಕರಲ್ಲಿ ನಡುಕ ಹುಟ್ಟಿಸಿದೆ. ಪಾಕ್ ಮಾಧ್ಯಮ ವಲಯದಲ್ಲಿ ಹಣಕಾಸು ಮುಗ್ಗಟ್ಟು ತಲೆದೋರಿರುವ ಹಿನ್ನೆಲೆಯಲ್ಲಿ ದಾವೂದ್'ನ ಹೊಸ ಚಾನೆಲ್ ಇತರ ಪ್ರತಿಸ್ಪರ್ಧಿಗಳಿಗೆ ದೊಡ್ಡ ತಲೆನೋವಾಗಿದೆ. ಅಲ್ಲಿಯ ಮೂರು ಚಾನೆಲ್'ಗಳು ಮುಚ್ಚುವ ಸ್ಥಿತಿಯಲ್ಲಿವೆ... ಈ ಸಮಯವನ್ನೇ ಸಾಧಿಸಿ ದಾವೂದ್ ತನ್ನಲ್ಲಿರುವ ಕಳ್ಳ ದುಡ್ಡನ್ನ ಬಂಡವಾಳವಾಗಿಟ್ಟುಕೊಂಡ ದೊಡ್ಡ ಸಂಬಳದ ಆಸೆಯೊಡ್ಡಿ ನುರಿತ ಪತ್ರಕರ್ತರನ್ನ ತನ್ನ ವಾಹಿನಿಗೆ ಸೇರಿಸಿಕೊಳ್ಳುವ ಕುಟಿಲ ಯೋಜನೆ ಹೊಂದಿದ್ದಾನೆ.

* ಬಿಒಎಲ್ ವಾಹಿನಿಯ ಪ್ರಮುಖ ಸಿಬ್ಬಂದಿಗೆ ಭಾರಿ ಆಫರ್
* ವೇತನದ ಜತೆಗ ವಾಸಕ್ಕೆ ಮನೆ, ಐಷಾರಾಮಿ ಕಾರು
* ಅಗತ್ಯಕ್ಕೆ ತಕ್ಕಷ್ಟು ಅಂಗರಕ್ಷಕರು..!
* ಜಿಯೋ ಚಾನೆಲ್'ನ ಕಮ್ರಾನ್ ಖಾನ್'ಗೆ ಮಾಸಿಕ ವೇತನ 60 ಲಕ್ಷ
* ಚಾನೆಲ್ ವೆಚ್ಚದ ಹೊಣೆ ಛೋಟಾ ಶಕೀಲ್ ಹೆಗಲಿಗೆ
* ಚಾನೆಲ್ ಬಳಿಕ ಮುದ್ರಣ ಮಾಧ್ಯಮಕ್ಕೂ ದಾವೂದ್ ದಾಪುಗಾಲು
* ದಾವೂದ್ ಬೆನ್ನಿಗೆ ಪಾಕ್ ಗುಪ್ತಚರ ಐಎಸ್ಐ

ಛೋಟಾ ಶಕೀಲ್'ಗೆ ಉಸ್ತುವಾರಿ
ದಾವೂದ್ ಇಬ್ರಾಹಿಂ ತನ್ನ ಬಲಗೈ ಬಂಟ ಛೋಟ ಶಕೀಲ್'ಗೆ ಈ ಹೊಸ ಚಾನೆಲ್'ನ ಜವಾಬ್ದಾರಿ ಹೊರಿಸಿದ್ದಾನೆ. ಶಕೀಲ್ ಈಗಾಗಲೇ ತುಂಬು ಉತ್ಸಾಹದಿಂದಲೇ ಚಾನೆಲ್'ನಲ್ಲಿ ತೊಡಗಿಸಿಕೊಂಡಿದ್ದಾನೆ. ಪಾಕಿಸ್ತಾನದ ಕೆಲ ಹೆಸರಾಂತ ಪತ್ರಕರ್ತರನ್ನ ವೈಯಕ್ತಿಕವಾಗಿ ಭೇಟಿಯಾಗಿ ಭಾರೀ ಭತ್ಯೆಯ ಆಫರ್ ಒಡ್ಡಿ ತನ್ನ ಚಾನೆಲ್'ಗೆ ಸೆಳೆದುಕೊಳ್ಳುವ ಪ್ರಯತ್ನದಲ್ಲಿದ್ದಾನೆ.

ಜಿಯೋ ಚಾನೆಲ್'ವೊಂದಿಗೆ ಜಂಟಿಯಾಗಿ ದಾವೂದ್ ಹೊಸ ಚಾನೆಲ್ ಆರಂಭವಾಗಲಿದೆ. ಇದಕ್ಕಾಗಿ ಜಿಯೋ ಚಾನೆಲ್'ನ ಮುಖ್ಯಸ್ಥ ಕಮ್ರಾನ್ ಖಾನ್ ಅವರಿಗೆ ಮಾಸಿಕ 60 ಲಕ್ಷ ರುಪಾಯಿ ಸಂಬಳದ ಆಫರ್ ನೀಡಲಾಗಿದೆ.

ಪೋರ್ನ್ ವೆಬ್'ಸೈಟ್ ಮಾಡಿದ್ದವರಿದ್ದಾರೆ..!
ಬಿಒಎಲ್ ಚಾನೆಲ್'ವೊಂದಿಗೆ ಕರಾಚಿ ಮೂಲದ ಆಕ್ಸಾತ್(Axact) ಕಂಪೆನಿ ಕೈಜೋಡಿಸಿದೆ. ಈ ಕಂಪನಿಯಲ್ಲಿ 5 ಸಾವಿರ ಜನರು ಕೆಲಸ ಮಾಡುತ್ತಾರೆ. ಆದರೆ, ಇದರೊಟ್ಟಿಗೆ ಅಶ್ಲೀಲ ಪೋರ್ನ್ ವೆಬ್'ಸೈಟ್'ವೊಂದನ್ನ ನಡೆಸುತ್ತಿರುವ ಹಾಗೂ ಕಳ್ಳ ಡಿಗ್ರೀ ಸರ್ಟಿಫಿಕೇಟ್'ಗಳ ದಂಧೆ ನಡೆಸುತ್ತಿರುವ ಆರೋಪ ಎದುರಿಸುತ್ತಿದೆ. ಇಂಥ ಲಜ್ಜೆಗೆಟ್ಟ ಕಂಪನಿಯಿಂದ ದಾವೂದ್ ಶಾಮೀಲಾಗಿರುವುದು ಸಹಜವೇ... ಅಷ್ಟೇ ಅಲ್ಲ, ಪಾಕ್ ಷೇರುಮಾರುಕಟ್ಟೆಯ ಪ್ರಮುಖ ಉದ್ಯಮಿ ಅಕೀಲ್ ಕರೀಂ ಧೇಡಿ ಎಂಬುವವರು ದಾವೂದ್'ಗೆ ಹಣ ಒದಗಿಸಲು ಮುಂದಾಗಿದ್ದಾರೆಂಬ ಸುದ್ದಿಯಿದೆ. ಪಾಕಿಸ್ತಾನ ಗುಪ್ತಚರ ಸಂಸ್ಥೆ ಐಎಸ್ಐ ಕೃಪಾಕಟಾಕ್ಷ ದಾವೂದ್'ಗಂತೂ ಇದ್ದೇ ಇದೆ. ದಾವೂದ್ ಚಾನೆಲ್'ಗೆ ನಾಮಕಾವಸ್ತೆಯಾಗಿ ಒಂದಿಷ್ಟು ಪ್ರಾಯೋಜಕರ ಹೆಸರುಗಳಿವೆ. ಆದರೆ, ನಿಜವಾಗಿಯೂ ಭೂಗತ ಲೋಕದ ದುಡ್ಡು ಈ ಚಾನೆಲ್'ಗೆ ದಂಡಿಯಾಗಿ ಹರಿದು ಬರಲಿದೆ....

ಏನೇನು ಇರಲಿದೆ ಚಾನೆಲ್'ನಲ್ಲಿ...?
ದಾವೂದ್'ನ "ಬಿಒಎಲ್" ವಾಹಿನಿಯು ಸುದ್ದಿ ಹಾಗೂ ಮನರಂಜನೆಯ ವಿಭಾಗದ್ದಾಗಿರುತ್ತದೆ. ಕೆಲ ಸುದ್ದಿಗಳ ಪ್ರಕಾರ, ದಾವೂದ್ ಒಂದು ಸ್ಪೋರ್ಟ್ಸ್ ಚಾನೆಲ್ ಅನ್ನೂ ಆರಂಭಿಸಲಿದ್ದಾರೆ. ಅದಾದ ನಂತರ ಇಂಗ್ಲೀಷ್ ಹಾಗೂ ಉರ್ದು ದಿನಪತ್ರಿಕೆಗಳನ್ನ ಆರಂಭಿಸಲಿದ್ದಾರೆ... ಒಟ್ಟಿನಲ್ಲಿ ಮೀಡಿಯಾ ಮಾಫಿಯಾ ಸೃಷ್ಟಿಯಾಗುವ ಎಲ್ಲಾ ಸಾಧ್ಯತೆಯೂ ತೋರುತ್ತಿದೆ...

 

 

 

Add comment
 

More items in this section