FacebookTwitter

ಮೈನಸ್ 93.2 ಡಿಗ್ರೀಯಷ್ಟು ಚಳಿ; ಇದು ಹೊಸ ದಾಖಲೆ

    User Rating:  / 0
    PoorBest 

ವಾಷಿಂಗ್ಟನ್(ಡಿ.12): ಬೆಂಗಳೂರಿನಲ್ಲಿ ನಾವು 15 ಡಿಗ್ರೀ ಸೆಲ್ಷಿಯಸ್ ಚಳಿ ಬಂದ್ರೆ ಕಂಬಳಿ ಹೊದ್ದು ಮಲಗುತ್ತೇವೆ. ಶೂನ್ಯ ಡಿಗ್ರೀ ಇರುವ ಕಾಶ್ಮೀರಲ್ಲಿ ನಾಲ್ಕೈದು ಸ್ವೆಟರ್ ಹೊದ್ದು ಓಡಾಡುತ್ತಾರೆ. ಹೀಗಿರುವಾಗ ಅಂಟಾರ್ಟಿಕಾದ ಪ್ರದೇಶವೊಂದರಲ್ಲಿ ಮೈನಸ್ 93.2 ಡಿಗ್ರಿ ಸೆಲ್ಷಿಯಸ್(-93.2) ಶೀತ ದಾಖಲಾಗಿದೆ. ಇದು ನಾವು ಈ ಭೂಮಿಯಲ್ಲಿ ಇದೂವರೆಗೂ ಕಂಡ ಅತೀ ಶೀತ ವಾತಾವರಣ.

ಮೂರು ವರ್ಷಗಳ ಹಿಂದೆ ರಷ್ಯಾಕ್ಕೆ ಸೇರಿದ ವೋಸ್ಟೋಕ್ ರೀಸರ್ಚ್ ಸ್ಟೇಷನ್'ನಲ್ಲಿ ಮೈನಸ್ 89 ಡಿಗ್ರಿಯಷ್ಟು (-89.22) ಉಷ್ಣತೆ ದಾಖಲಾಗಿದ್ದೇ ಇದುವರೆಗಿನ ಸಾರ್ವಕಾಲಿಕ ದಾಖಲೆಯಾಗಿತ್ತು. ಗಮನಾರ್ಹ ಅಂಶವೆಂದರೆ ಇದೂ ಕೂಡ ಅಂಟಾರ್ಟಿಕಾದ ಪೂರ್ವ ಭಾಗದ ಪ್ರದೇಶವೇ ಆಗಿದೆ. ಈ ಅಂಟಾರ್ಟಿಕಾ ವಿಪರೀತ ಶೀತ ಪ್ರದೇಶವಾಗಿದ್ದು ಇಲ್ಲಿಯ ಬಹುತೇಕ ಭಾಗವು ವಾಸಯೋಗ್ಯವಲ್ಲ...

ಜನ ವಸತಿ ಇರುವ ಪ್ರದೇಶಗಳ ಪೈಕಿ ಅತೀ ಕಡಿಮೆ ಉಷ್ಣಾಂಶ ದಾಖಲಾಗಿರುವುದು ಸೈಬೀರಿಯಾದಲ್ಲಿ. ಇಲ್ಲಿ ಮೈನಸ್ 67 ಡಿಗ್ರೀವರೆಗೆ ಉಷ್ಣತೆ ದಾಖಲಾಗಿತ್ತು. ಇಲ್ಲಿ ಜನರು ಹೇಗೆ ವಾಸ ಮಾಡುತ್ತಾರೆ ಎಂಬುದೇ ಸೋಜಿಗದ ವಿಷಯ....

 

 

 

Add comment
 

More items in this section