FacebookTwitter

ಉಸೇನ್ ಬೋಲ್ಟ್`ಗಿಂತಲೂ ವೇಗವಾಗಿ ಓಡುವ ಆಸ್ಟ್ರೇಲಿಯಾದ ಬಾಲಕ..!

    User Rating:  / 0
    PoorBest 

ಮೆಲ್ಬೋರ್ನ್(ಡಿ.12): ಉಸೇನ್ ಬೋಲ್ಟ್. ಜಮೈಕಾದ ಶರವೇಗದ ಓಟಗಾರ. 2008 ಮತ್ತು 2012ರ ಒಲಿಂಪಿಕ್ಸ್`ನಲ್ಲಿ 100 ಮತ್ತು 200 ಮೀಟರ್`ನ ಎರಡೂ ಓಟಗಳಲ್ಲೂ ಚಿನ್ನದ ಪದಕ ಗೆದ್ದಿದ್ದಾರೆ. ಆದರೆ, ಉಸೇನ್ ಬೋಲ್ಟ್ ರನ್ನೇ ಹಿಂದಿಕ್ಕುವ ಓಟಗಾರ ಆಸ್ಟ್ರೇಲಿಯಾದಲ್ಲಿ ಇದ್ದಾನೆ. ಅವನೇ 14 ವರ್ಷದ ನ್ಯೂ ಸೌತ್ ವೇಲ್ಸ್`ನ ಸ್ಕೂಲ್ ಬಾಯ್ ಜೇಮ್ಸ್ ಗಲ್ಲೌಫರ್.

ಜಮೈಕಾ ಓಟಗಾರ 14 ವರ್ಷದವನಿದ್ದಾಗ 200 ಮೀಟರ್ ಓಟದಲ್ಲಿ ಮಾಡಿದ್ದ ಸಾಧನೆಯನ್ನ ಜೇಮ್ಸ್ ಹಿಂದಿಕ್ಕಿದ್ದಾನೆ. ಬೋಲ್ಟ್ 200 ಮೀಟರ್ ಓಟವನ್ನು 21.73 ಸೆಕೆಂಡ್ ಗಳಲ್ಲಿ ಮುಗಿಸಿದ್ದರೆ, ಈ ಬಾಲಕ ಇನ್ನೂ 0.08 ಸೆಕೆಂಡ್ ಮುಂಚಿತವಾಗಿಯೇ 200 ಮೀಟರ್ ಓಟ ಮುಗಿಸಿದ್ದಾನೆ.

2014ರ ಒಲಿಂಪಿಕ್ಸ್`ಗೆ ಜೇಮ್ಸ್ ರನ್ನ ಆಯ್ಕೆಮಾಡುವ ಸಾಧ್ಯತೆ ಇದೆ ಎಂದು ಆಸ್ಟ್ರೇಲಿಯಾ ಮಾಧ್ಯಮಗಳು ವರದಿ ಮಾಡಿವೆ.

 

 

 

Add comment




 

More items in this section