FacebookTwitter

ಸುಪ್ರೀಂ ತೀರ್ಪು ಭಾರತದ ಮೌಲ್ಯ ಕುಗ್ಗಿಸಿದೆ: ವಿಶ್ವಸಂಸ್ಥೆ

    User Rating:  / 0
    PoorBest 
ಸಾಂದರ್ಭಿಕ ಚಿತ್ರ (ಸುದ್ದಿಗೂ ಚಿತ್ರಕ್ಕೂ ನೇರ ಸಂಬಂಧವಿರುವುದಿಲ್ಲ)

ಜಿನೇವಾ: ಮಾನವ ಹಕ್ಕುಗಳ ರಕ್ಷಣೆಯಲ್ಲಿ ಮಹತ್ವದ ಹೆಜ್ಜೆಯನ್ನಿಡುತ್ತಾ ಬರುತ್ತಿರುವ ಭಾರತೀಯ ಸುಪ್ರೀಂ ಕೋರ್ಟ್, ಇತ್ತೀಚೆಗೆ ಸಲಿಂಗಕಾಮದ ವಿರುದ್ಧ ನೀಡಿರುವ ತೀರ್ಪು ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯ ಮೌಲ್ಯವನ್ನು ಕುಗ್ಗಿಸಿದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿರುವ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮುಖ್ಯಸ್ಥೆ ನಾವಿ ಪಿಳ್ಳೈ, ಸದರಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಅಂತಾರಾಷ್ಟ್ರೀಯ ಕಾನೂನಿಗೆ ವಿರುದ್ಧವಾಗಿದೆ ಎಂದಿದ್ದಾರೆ.

ಮಾನವ ಹಕ್ಕುಗಳ ರಕ್ಷಣೆಯಲ್ಲಿ ಐತಿಹಾಸಿಕ ತೀರ್ಪುಗಳನ್ನು ನೀಡುತ್ತಾ ಬಂದಿರುವ ಸುಪ್ರೀಂ ಕೋರ್ಟ್, ಇದೀಗ ನೀಡಿರುವ ತೀರ್ಪು ಈ ಹಿಂದಿನ ನ್ಯಾಯಿಕ ಸಾಂಪ್ರದಾಯಕ್ಕೆ ವಿರುದ್ಧವಾದಂತಿರುವುದಾಗಿ ಅಭಿಪ್ರಾಯ ಪಟ್ಟಿದ್ದಾರಲ್ಲದೆ, ಈ ತೀರ್ಪಿನ ಸಂಬಂಧ ಉನ್ನತಮಟ್ಟದ ನ್ಯಾಯಿಕ ಸಮಿತಿಯಿಂದ ಪುನರ್’ಪರಿಶೀಲನೆ ನಡೆದರೆ ಇದೀಗ ಎದ್ದಿರುವ ಅಪಸ್ವರಗಳಿಗೆ ಸಮಾಧಾನಕರ ತೀರ್ಪನ್ನು ಈ ಹಿಂದೆಯೇ ನೀಡಲಾಗಿತ್ತೇ ಇಲ್ಲವೇ ಎಂದು ಪರಾಮರ್ಶಿಸಲು ಒಂದು ಉತ್ತಮ ಅವಕಾಶ ಕಲ್ಪಿಸಿದಂತಾಗುತ್ತಿತ್ತು ಎಂದಿದ್ದಾರೆ.

1860 ರ ಜಮಾನದಲ್ಲಿ ಬ್ರಿಟೀಷ್ ಆಡಳಿತದಲ್ಲಿ ಅಸ್ಥಿತ್ವಕ್ಕೆ ಬಂದ ಐಪಿಸಿ ಕಾನೂನಿನಡಿ ಒಳಪಡುವ ಸೆಕ್ಷನ್ 377 ಯಥಾ ರೂಪವೇ ಬದಲಾದ ಇಂದಿನ ಸಮಾಜದಲ್ಲೂ ಅನ್ವಯವಾಗುತ್ತಿರುವುದರಿಂದಾಗಿ, ಆ ಕಾನೂನು ಪ್ರಕಾರವೇ ಮಹತ್ವದ ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್, ನೈಸರ್ಗಿಕ ತತ್ವಕ್ಕೆ ವಿರುದ್ಧವಾದ ಲೈಂಗಿಕ ಚಟುವಟಿಕೆಯ ಮುಕ್ತ ಸ್ವಾತಂತ್ರ್ಯದ ಕುರಿತು ಸಮಗ್ರ ಚರ್ಚೆ ನಡೆದು ಈ ಸಂಬಂಧ ಸೆಕ್ಷನ್ 377 ನ್ನು ಪರಿಷ್ಕರಿಸುವ ಹೊಣೆ ಸಂಸತ್ತಿನದ್ದು ಎಂದು ತಿಳಿಹೇಳಿತ್ತು.

ಆದಾಗಿಯೂ, ವಿವಾದದ ಮೇಲೆ ವಿವಾದವೆದ್ದು ಸುಪ್ರೀಂ ಕೋರ್ಟ್ ತೀರ್ಪು ಮಾನವ ಹಕ್ಕುಗಳನ್ನು ಉಲ್ಲಂಘನೆ ಮಾಡಿದೆ ಎಂಬ ಅರ್ಥದಲ್ಲಿ ಆಂತರಿಕ ವಲಯದಲ್ಲಿ (ಭಾರತ) ಟೀಕೆಗಳು ಕೇಳಿಬರುತ್ತಿರುವುದು ವಿಪರ್ಯಾಸವೆಂಬ ಅಭಿಪ್ರಾಯ ಕೇಳಿಬಂದಿದೆ.


ಇವನ್ನೂ ಓದಿ......

ಸುಪ್ರೀಂ ತೀರ್ಪಿನ ವಿರುದ್ಧ ಸೋನಿಯಾ ಗಾಂಧಿ ಅಸಮಾಧಾನ

ಸಲಿಂಗಕಾಮ: ಸುಪ್ರೀಂ ತೀರ್ಪು ನಮ್ಮನ್ನು 1860ನೇ ಕಾಲಕ್ಕೆ ಕೊಂಡೊಯ್ದಿದೆ ಎಂದ ಚಿದಂಬರಂ

ಯೋಗದಿಂದ ಸಲಿಂಗಕಾಮ ದೂರ: ಬಾಬಾ ರಾಮದೇವ್

ಸಲಿಂಗ ಕಾಮ ಶಿಕ್ಷಾರ್ಹ ಅಪರಾಧ - ಸುಪ್ರೀಂಕೋರ್ಟ್ ಮಹತ್ವದ ತೀರ್ಪು

 

 

 

Add comment




 

More items in this section