FacebookTwitter

ರಾಯಭಾರಿ ಬಂಧನ ವಿಷಯ ಉಭಯ ಸಂಬಂಧಕ್ಕೆ ಧಕ್ಕೆ ತರದು; ಅಮೆರಿಕ ವಿಶ್ವಾಸ

    User Rating:  / 0
    PoorBest 
ದೇವಯಾನಿ ಖೋಬ್ರಾಗೇಡ್

ವಾಷಿಂಗ್ಟನ್: ಅಮೆರಿಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಉಪರಾಯಭಾರಿ ದೇವಯಾನಿ ಖೋಬ್ರಾಗೇಡ್ ಅವರ ಕಾನೂನು ಬದ್ಧ ಬಂಧನ ಮತ್ತು ಬಿಡುಗಡೆ ಪ್ರಕ್ರಿಯೆಯಿಂದ ಭಾರತ ಮತ್ತು ಅಮೆರಿಕ ನಡುವಿನ ಬಹುಕಾಲದ ರಾಜತಾಂತ್ರಿಕ ಸಂಬಂಧಕ್ಕೆ ಯಾವುದೇ ರೀತಿಯ ಧಕ್ಕೆ ಬಾರದು ಎಂದು ಅಮೆರಿಕ ಶನಿವಾರ ವಿಶ್ವಾಸ ವ್ಯಕ್ತಪಡಿಸಿದೆ. ಹಾಗೂ ಪ್ರಕರಣ ಕಾನೂನು ಪ್ರಕ್ರಿಯೆಗೆ ಒಳಪಟ್ಟಿರುವುದರಿಂದಾಗಿ ಈ ಸಂಬಂಧ ಹೆಚ್ಚಿಗೆ ಚಕಾರವೆತ್ತಲು ನಿರಾಕರಿಸಿದೆ.

ಭಾರತ ಮೂಲದ ಮಹಿಳೆಯೊಬ್ಬರನ್ನು ಮನೆಗೆಲಸಕ್ಕೆ ಇಟ್ಟುಕೊಂಡಿದ್ದ ಉಪರಾಯಭಾರಿ ದೇವಯಾನಿ ಖೋಬ್ರಾಗೇಡ್, ಆಕೆಗೆ ಈ ಹಿಂದೆ ನೀಡಿದ್ದ ಭರವಸೆಯಂತೆ ವೇತನ ನೀಡದಿರುವ ಆರೋಪಕ್ಕೆ ಸಂಬಂಧಿಸಿದಂತೆ ಸುಳ್ಳು ದಾಖಲೆ ನೀಡಿರುವ ಪ್ರಕರಣದಲ್ಲಿ ಗುರುತಿಸಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ಅವರನ್ನು ಅಮೆರಿಕದ ಕಾರ್ಮಿಕ ಕಾನೂನಿನಡಿ ಹಾಗೂ ಸುಳ್ಳು ದಾಖಲೆ ನೀಡಿರುವ ಅಪರಾಧ ಪರಿದಿಯಲ್ಲಿ ಬಂಧನಕ್ಕೊಳಪಡಿಸಲಾಗಿತ್ತು. ಆನಂತರ, 250,000 ಅಮೆರಿಕನ್ ಡಾಲರ್ (62.185001 ರೂಪಾಯಿ) ಮೌಲ್ಯದ ಬಾಂಡ್ ಮೇರೆಗೆ ಷರತ್ತುಬದ್ಧವಾಗಿ ಬಿಡುಗಡೆಯಾಗಿದ್ದರು. ಈ ಪ್ರಕರಣದ ಕಾನೂನು ಪ್ರಕ್ರಿಯೆ ಪ್ರಗತಿಯಲ್ಲಿದೆ.

ಆ ದೇಶದ ಕಾರ್ಮಿಕ ಕಾನೂನನ್ನು ಉಲ್ಲಂಘಿಸಿರುವ ಆರೋಪಿಯೆನ್ನಲಾದ ದೇವಯಾನಿಯವರನ್ನು ನಡುರಸ್ತೆಯಲ್ಲಿ ಬಂಧನಕ್ಕೊಳಪಡಿಸಿರುವ ಪ್ರಕ್ರಿಯೆ ಪರೋಕ್ಷವಾಗಿ ಭಾರತವನ್ನು ಅವಮಾನಕ್ಕೀಡುಮಾಡುವಂತದ್ದಾಗಿರುವುದಾಗಿ ಅಸಮಾಧಾನ ವ್ಯಕ್ತಪಡಿಸಿದ್ದ ವಿದೇಶಾಂಗ ಕಾರ್ಯದರ್ಶಿ ಸುಜಾತ ಸಿಂಗ್, ತನ್ನ ಆಕ್ರೋಶವನ್ನು ಕಟು ಶಬ್ದಗಳಿಂದ ದಾಖಲಿಸಿ ಭಾರತದಲ್ಲಿರುವ ಅಮೆರಿಕದ ರಾಯಭಾರಿ ನಾನ್ಸಿ ಪೋವೆಲ್ ಅವರಿಗೆ ರವಾನಿಸಿದ್ದರು.

ಹಾಗೂ ಈ ವಿಚಾರವನ್ನು ಕೂಡಲೇ ಅಮೆರಿಕಕ್ಕೆ ರವಾನಿಸಿ ಈ ರೀತಿಯ ಕ್ರಮ ಸಲ್ಲದು. ಭಾರತೀಯ ಪ್ರತಿನಿಧಿಯನ್ನು ನಡು ರಸ್ತೆಯಲ್ಲಿ ಬಂಧನಕ್ಕೊಳಪಡಿಸಿರುವ ಅಮೆರಿಕದ ಧೋರಣೆಯನ್ನು ಖಂಡಿತವಾಗಿಯೂ ಒಪ್ಪಿಕೊಳ್ಳಲಾಗದು ಎಂಬ ಸಂದೇಶ ರವಾನಿಸಿ ಈ ಕುರಿತು ಸೂಕ್ತ ಕ್ರಮಕ್ಕೆ ಮುಂದಾಗುವಂತೆ ಅವರು ಒತ್ತಾಯಿಸಿದ್ದರು.

ಅಮೆರಿಕದಲ್ಲಿ ಕಾನೂನು ಪಾಲನೆ ಕಟ್ಟುನಿಟ್ಟಾಗಿರುತ್ತದೆ ಅದರಲ್ಲೂ ಕಾರ್ಮಿಕ ಕಾನೂನು ತುಂಬಾ ಕಟ್ಟುನಿಟ್ಟಾಗಿರುತ್ತದೆಂಬ ವಿಷಯ ಬಹುತೇಕ ಸಮಜಾಯಿಷಿ ನೀಡುವಂತದ್ದಾಗಿದ್ದರೂ, ಇತ್ತೀಚೆಗಷ್ಟೇ ವಾಷಿಂಗ್ಟನ್’ಗೆ ಭೇಟಿ ನೀಡಿದ್ದ ಭಾರತೀಯ ವಿದೇಶಾಂಗ ಕಾರ್ಯದರ್ಶಿ ಸುಜಾತ ಸಿಂಗ್ ಅವರು ಯಶಸ್ವಿ ಮಾತುಕತೆಯ ನಡೆಸಿ ವಾಪಾಸು ಬಂದ ಮರುದಿನವೇ ನಾಟಕೀಯವಾಗಿ ನಡೆದಿರುವ ಈ ಬಂಧನ ಪ್ರಕ್ರಿಯೆ ಭಾರತವನ್ನು ಕೆರಳಿಸಿದೆಯಲ್ಲದೆ ಉಭಯ ರಾಷ್ಟ್ರಗಳ ಸಂಬಂಧವನ್ನು ಕುಗ್ಗಿಸುವ ಉದ್ದೇಶದಿಂದಲೇ ಈ ಬಂಧನ ಪ್ರಕ್ರಿಯೆ ನಡೆದಿದೆಯೇ ಎಂಬ ಸಂಶಯದ ಕಣ್ಣು ಬೀರುವಂತೆ ಮಾಡಿದೆ.

ಮೇಲಾಗಿ, ಅಮೆರಿಕದ ಖಡಕ್ ಕಾರ್ಮಿಕ ಕಾನೂನಿನ ಪರಿದಿಯಲ್ಲಿ ವಿದೇಶಿ ಮೂಲದ ಮನೆಗೆಲಸ ನೌಕಕರ ಹಕ್ಕು, ಸ್ವಾತಂತ್ರ್ಯಕ್ಕಾಗಿ ಪ್ರತ್ಯೇಕ ಅದ್ಯಾಯ ಅನುಷ್ಟಾನಕ್ಕೆ ಬರದ ಹಿನ್ನೆಲೆಯಲ್ಲಿ ಇದೀಗ ದೇವಯಾನಿ ವಿರುದ್ಧ ಕೇಳಿಬಂದಿರುವ ಆರೋಪವನ್ನು ನೇರವಾಗಿ ಅಲ್ಲಿನ ನಾಗರಿಕ ಹಕ್ಕುಗಳ ಕಾರ್ಮಿಕ ಕಾನೂನಿನಡಿ ಒಳಪಡಿಸಿ ಕ್ರಮ ಕೈಗೊಳ್ಳಲು ಬರುವುದಿಲ್ಲ ಎನ್ನಲಾಗುತ್ತಿದ್ದು, ಆ ದೃಷ್ಟಿಕೋನದಲ್ಲಿ ಕಾನೂನು ಪ್ರಕ್ರಿಯೆ ಮುಂದುವರೆದಲ್ಲಿ ಬಹುಶಃ ದೇವಯಾನಿ ಖೋಬ್ರಾಗೇಡ್ ಅವರು ಬಚಾವ್ ಆಗುವ ಸಾಧ್ಯತೆಯಿದೆ ಎಂಬ ಮಾತೂ ಕೇಳಿಬಂದಿದೆ.


ಸಂಬಂಧಪಟ್ಟ ಲಿಂಕ್

ನಡು ರಸ್ತೆಯಲ್ಲಿ ಬೇಡಿ ಹಾಕಿ ಅಮೆರಿಕದಲ್ಲಿ ಭಾರತದ ಉಪ ರಾಯಭಾರಿ ಬಂಧನ..!


 

 

 

 

Add comment
 

More items in this section