FacebookTwitter

ದೇವಯಾನಿ ದೇಹವನ್ನ ತಡಕಾಡಿದ್ದು ಸರಿ; ಅಮೆರಿಕ ಸಮರ್ಥನೆ

    User Rating:  / 0
    PoorBest 
ದೇವಯಾನಿ ಖೋಬ್ರಾಗಡೆ/Zee

ವಾಷಿಂಗ್ಟನ್: ಅಮೆರಿಕದಲ್ಲಿ ನೆಲೆಸಿರುವ ಭಾರತೀಯ ಉಪ ರಾಯಭಾರಿ ದೇವಯಾನಿ ಖೋಬ್ರಾಗಡೆ ಅವರನ್ನು ವೀಸಾ ನೀತಿ ಉಲ್ಲಂಘನೆಯಡಿ ಹಾಗೂ ಕಾರ್ಮಿಕ ಕಾನೂನು ಉಲ್ಲಂಘನೆಯಡಿ ಸಾರ್ವಜನಿಕವಾಗಿ ಬಂಧಿಸಿ ಕೈಗೆ ಬೇಡಿ ಹಾಕಿಸಿ ಅವಮಾನಿಸಿದ ಬೆನ್ನಲ್ಲೇ, ಅವರ ಮೈಪೂರ್ತಿ ತಡಕಾಡಿ (ಮಹಿಳಾ ಅಧಿಕಾರಿಯಿಂದ) ಪರಿಶೀಲನೆ ನಡೆಸಿ ಕೊನೆಗೆ ಮಾದಕ ವ್ಯಸನಿಗಳನ್ನು ಕೂಡಿ ಹಾಕುವ ಕೊಠಡಿಯಲ್ಲಿ ಅಲ್ಪಕಾಲ ಕೂಡಿ ಹಾಕಿದ ಕ್ರಮವನ್ನ ಸಮರ್ಥಿಸಿಕೊಂಡಿರುವ ಅಮೆರಿಕಾದ ಮಾರ್ಷಲ್ಸ್ ಸೇವಾ ಪ್ರಾಧಿಕಾರ(ಯುಎಸ್ಎಂಎಸ್), ಅದು ನಮ್ಮ ಉನ್ನತಮಟ್ಟದ ಪರಿಶೀಲನೆಯಾಗಿದ್ದು ಅದನ್ನು ಕೀಳುಮಟ್ಟದ್ದು ಎಂದು ಅರ್ಥೈಸುವುದು ಸಲ್ಲದು ಎಂದು ಸ್ಪಷ್ಟಪಡಿಸಿದೆಯಲ್ಲದೆ, ಬೇರೊಂದು ಮಹಿಳೆಯನ್ನು ತಡಕಾಡಿದ ಮಾದರಿಯಲ್ಲೇ ದೇವಯಾನಿಯವರ ದೇಹವನ್ನೂ ತಡಕಾಡಿ ಪರಿಶೀಲಿಸಿ ಸಂಯುಕ್ತ ಮ್ಯಾಜಿಸ್ಟ್ರೇಟರ್ ಮುಂದೆ ಹಾಜರುಪಡಿಸಲಾಗಿತ್ತು ಎಂದಿದೆ.

ವಿಯೆನ್ನಾ ರಾಜತಾಂತ್ರಿಕ ಒಪ್ಪಂದಗಳಿಗೆ ವಿರುದ್ಧವಾಗಿ ಉಪರಾಯಭಾರಿಯನ್ನು ಬಂಧಿಸಿ ನಡೆಸಿಕೊಂಡಿರುವ ಅಮೆರಿಕದ ಎಡಬಿಡಂಗಿ ಧೋರಣೆಗೆ ಭಾರತದಾದ್ಯಂತ ತೀವ್ರ ಖಂಡನೆ ವ್ಯಕ್ತವಾಗುತ್ತಾ ಉಭಯ ರಾಷ್ಟ್ರಗಳ ಸಂಬಂಧಕ್ಕೆ ಧಕ್ಕೆ ತರುವ ಮಟ್ಟಿಗೆ ವಿಷಯ ಗಂಭೀರವಾಗುತ್ತಿರುವ ಬೆನ್ನಲ್ಲೇ ಏನೂ ಅರಿಯದವರಂತೆ ಪ್ರತಿಕ್ರಿಯಿಸಿರುವ ಅಮೆರಿಕಾದ ಮಾರ್ಷಲ್ಸ್ ಸೇವಾ ಪ್ರಾಧಿಕಾರ(ಯುಎಸ್ಎಂಎಸ್)ದ ವಕ್ತಾರೆ ನಿಕ್ಕಿ ಕ್ರೆಡಿಕ್ ಬರೆಟ್, ಬಂಧನದ ವಿಷಯ ನಮಗೆ ಸಂಬಂಧಪಟ್ಟಿದ್ದಲ್ಲ ಅದೆಲ್ಲವೂ ರಾಜತಾಂತ್ರಿಕ ಭದ್ರತಾ ಮಂಡಳಿಗೆ ಬಿಟ್ಟದ್ದಾಗಿದ್ದು ತಪಾಸಣೆ ನಡೆಸುವ ವಿಷಯ ಮಾತ್ರ ನಮಗೆ ಸಂಬಂಧಪಟ್ಟಿದೆಂದು ಎದುರುತ್ತರ ನೀಡಿದ್ದಾರೆ.

ಅಲ್ಲದೆ ಮಾದಕ ವ್ಯಸನಿಗಳನ್ನು ಕೂಡಿಹಾಕುವ ಶೆಲ್’ನಲ್ಲಿ ಯಾಕೆ ಕೂಡಿಹಾಕಿದ್ದೀರಿ ಎಂದು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಅವರು, ವಿಚಾರಣೆಗೊಳಪಟ್ಟವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುವ ಮೊದಲು, ಆರೋಪಿಯನ್ನಿಡುವ ಸೀಮಿತ ಸ್ಥಳದಲ್ಲೇ ದೇವಯಾನಿಯವರನ್ನೂ ಇತರ ಮಹಿಳಾ ಆರೋಪಿಗಳೊಂದಿಗೇ ತುಸು ಕಾಲ ಕಾದಿರಲು ಬಿಡಲಾಗಿತ್ತು ಎಂದು ಸಿಂಪಲ್ಲಾಗಿ ಸ್ಪಷ್ಟಪಡಿಸಿದ್ದಾರೆ.

ಅದ್ಸರಿ ನಡುರಸ್ತೆಯಲ್ಲಿ ಯಾಕೆ ನಿಲ್ಲಿಸಿ ಅರೆಸ್ಟ್ ಮಾಡಿ ಬೇಡಿ ತೊಡಿಸಿದಿರಿ ಎಂಬ ಪ್ರಶ್ನೆಗೆ, ಅದು ನಮ್ಮ ಇಲಾಖೆಗೆ ಸಂಬಂಧಿಸಿದ್ದಲ್ಲ ಎಂದಿರುವ ನಿಕ್ಕಿ ಕ್ರೆಡಿಕ್ ಬರೆಟ್, ಅಮೆರಿಕಾದ ಮಾರ್ಷಲ್ಸ್ ಸೇವಾ ಪ್ರಾಧಿಕಾರದ ವಕ್ತಾರೆಯಾಗಿ ನಾನು ಆ ಕುರಿತು ಮಾತನಾಡುವುದು ಕಾನೂನು ಬಾಹಿರವಾಗಿದ್ದು, ನಮ್ಮದು ಕೇವಲ ತಪಾಸಣೆಗೆ ಸಂಬಂಧಿಸಿದ್ದಾಗಿದ್ದು, ದೇವಯಾನಿಯವರ ಬಂಧನಕ್ಕೆ ಅನುಸರಿಸಿದ ಮಾರ್ಗದ ಗುಣಮಟ್ಟದ ವಿಚಾರವಾಗಿ ಯಾವುದೇ ನಿಲುವು ವ್ಯಕ್ತಪಡಿಸಲು ಸುತರಾಂ ನಿರಾಕರಿಸಿದ್ದಾರೆ.

ರಾಜತಾಂತ್ರಿಕ ಭದ್ರತಾ ಮಂಡಳಿಯಿಂದ ಡಿಸೆಂಬರ್ 12 ರಂದು ಬಂಧನಕ್ಕೀಡಾದ ಭಾರತೀಯ ಉಪರಾಯಭಾರಿ ದೇವಯಾನಿ ಖೋಬ್ರಾಗಡೆ ಅವರ ವಿರುದ್ಧ ವೀಸಾ ಅಪ್ಲಿಕೇಷನ್’ನಲ್ಲಿ ತಪ್ಪು ಮಾಹಿತಿ ನೀಡಿರುವ ಆರೋಪವಿದ್ದು ಈ ನೆಲೆಗಟ್ಟಿನಲ್ಲಿ ಬಂಧಿಸಲಾಗಿತ್ತು.

ಸದರಿ, ಯಾವೊಬ್ಬ ದೇಶದ ಪ್ರತಿನಿಧಿಯನ್ನು ನಡೆಸಿಕೊಳ್ಳಲು ಅದರದೇ ಆದ ಉಭಯರಾಷ್ಟ್ರಗಳ ಒಪ್ಪಂದಾಧಾರಿತ ನೀತಿ ನಿಯಮಗಳಿದ್ದು, ಈ ಸಂಬಂಧ ತಮ್ಮನ್ನು ಬಂಧಿಸುತ್ತಿರುವ ಕ್ರಮ ಅಸಿಂಧು ಎಂದು ಭದ್ರತಾ ಅಧಿಕಾರಿಗಳಿಗೆ ದೇವಯಾನಿಯವರು ಪದೇ ಪದೇ ವಿವರಿಸಿ ಮನವಿ ಮಾಡಿದರೂ ಇವರ ಮಾತನ್ನು ಒಪ್ಪಿಕೊಳ್ಳಲು ನಿರಾಕರಿಸಿದ್ದ ಸಿಬ್ಬಂಧಿಗಳು ಉಡಾಫೆ ಧೋರಣೆ ತಾಳಿದ್ದರು.

ತದನಂತರ ಅವರನ್ನು ಅಮೆರಿಕದ ಫೆಡರಲ್ ಮ್ಯಾಜಿಸ್ಟ್ರೇಟರ ಮುಂದೆ ಹಾಜರುಪಡಿಸಲಾಗಿ 250,000 ಅಮೆರಿಕನ್ ಡಾಲರ್ ಬಾಂಡ್ ನೀಡಿ ಯಾವುದೇ ಅಕ್ರಮಗಳಲ್ಲಿ ಭಾಗಿಯಾಗಿರುವುದಿಲ್ಲವೆಂದು ಮನವಿ ಮಾಡಿ ಬಿಡುಗಡೆಯಾಗಿದ್ದರು.

ಭಾರತ ಮೂಲದ ಮಹಿಳೆಯೊಬ್ಬರನ್ನು ಮನೆಕೆಲಸಕ್ಕೆ ಮತ್ತು ಮಕ್ಕಳನ್ನು ನೋಡಿಕೊಳ್ಳಲು ಅಮೆರಿಕಕ್ಕೆ ಕರೆಸಿಕೊಂಡಿದ್ದ ದೇವಯಾನಿ ಖೋಬ್ರಾಗಡೆ, ಸದರಿ ವೀಸಾದಲ್ಲಿ ನಮೂದಿಸಿದಷ್ಟು ವೇತನ ವಾಸ್ತವವಾಗಿ ಆಕೆಗೆ ನೀಡಿರುವುದಿಲ್ಲ ಎಂದು ಲಭ್ಯವಿರುವ ದಾಖಲೆ ಸಾಬೀತುಪಡಿಸುತ್ತಿದೆಯಲ್ಲದೆ ನಿಗಧಿತ ಸಮಯಕ್ಕಿಂತ ಹೆಚ್ಚು ಅವದಿ ದುಡಿಸಿಕೊಂಡಿರುತ್ತಾರೆಂಬ ಆರೋಪವೂ ಕೇಳಿಬಂದಿದೆ.

ಅಮೆರಿಕದ ಕಾರ್ಮಿಕ ಕಾನೂನಡಿ ಈ ಲೋಪವನ್ನು ಪರಿಗಣಿಸಿ ತೆಗೆದುಕೊಳ್ಳಲಾಗುತ್ತಿರುವ ಕಾನೂನು ರೀತಿಯ ಕ್ರಮ ಅತಾರ್ಕಿಕವಾಗಿದ್ದು, ಸದರಿ ಅಮೆರಿಕದ ಕಾರ್ಮಿಕ ಕಾನೂನಿನಡಿ ಕಾರ್ಮಿಕರೊಬ್ಬರಿಗೆ ನೀಡಬೇಕಾದ ಸಂಬಳ ಸೇವೆಯ ಒಟ್ಟಾರೆ ಮೌಲ್ಯವನ್ನು ಕ್ರೋಡೀಕರಿಸಿದರೆ ಅದು ಉಪ ರಾಯಬಾರಿ ದೇವಯಾನಿ ಖೋಬ್ರಾಗಡೆಯವರ ವೇತನವನ್ನೂ ಮೀರುವುದರಿಂದಾಗಿ, ಈ ವಿಷಯವನ್ನು ಅಮೆರಿಕದ ಕಾನೂನಿನಡಿ ಪರಿಗಣಿಸುವುದು ಬೇಡ ಎಂಬ ವಾದ ಕೇಳಿಬಂದಿದೆ.

ಆದರೆ, ಮನೆಕೆಲಸದಾಕೆಗೆ ನೀಡಿರುವ ವೇತನ ಹಾಗೂ ಸೇವೆಯನ್ನು ಭಾರತೀಯ ಕನಿಷ್ಟ ಜೀವನ ನಿರ್ವಹಣೆಗೆ ಬೇಕಾದ ವೇತನ ಸೇವೆಗೆ ತುಲನೆ ಮಾಡಿದರೆ ದುಪ್ಪಟ್ಟು ಎನ್ನುವಂತಿದ್ದು, ಈ ಎಲ್ಲಾ ವಿಷಯಗಳನ್ನು ಸೂಕ್ಷ್ಮವಾಗಿ ಪರಿಗಣಿಸಿ ಪ್ರಕರಣವನ್ನು ಸಮಾಧಾನದಿಂದ ಮುನ್ನಡೆಸುವಂತೆ ಕೋರಲಾಗಿತ್ತು.

ಮೇಲಾಗಿ, ಅಮೆರಿಕ ಕಾರ್ಮಿಕ ಕಾನೂನಿನಡಿ ಆ ದೇಶದ ನಾಗರಿಕರನ್ನು ಹೊರತುಪಡಿಸಿ ವಿದೇಶಿ ಮನೆಕೆಲಸದವರಿಗೆ ಕೊಡಬೇಕಾದ ಸಂಬಳ ಹಾಗೂ ಸೇವೆಗಳ ಕುರಿತು ಪ್ರತ್ಯೇಕ ಕಾನೂನು ಅದ್ಯಾಯ ಇಲ್ಲದಿರುವುದರಿಂದಾಗಿ, ಇದೀಗ ಮನೆಕೆಲಸದವರಿಗೆ ಕನಿಷ್ಠ ವೇತನವನ್ನೂ ನೀಡದೆ ವಂಚಿಸಿರುವ ಆರೋಪಕ್ಕೆ ಗುರಿಯಾಗಿರುವ ದೇವಯಾನಿಯವರ ಲೋಪವನ್ನು ಕೈಬಿಡಬೇಕೆಂಬ ವಾದವೂ ಕೇಳಿಬಂದಿತ್ತು.

ಕಾಕತಾಳೀಯವೆಂಬಂತೆ ಭಾರತೀಯ ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ ಸುಜಾತ ಸಿಂಗ್ ಅವರು ಅಮೆರಿಕ ಭೇಟಿ ಮುಗಿಸಿ ಭಾರತಕ್ಕೆ ಮರಳಿದ ಮರುದಿನವೇ ಈ ಬಂಧನ ನಡೆದಿರುವುದು ರಾಜತಾಂತ್ರಿಕ ವ್ಯವಸ್ಥೆಯಲ್ಲಿ ಬಿಕ್ಕಟ್ಟು ತರುವ ಉದ್ದೇಶದಿಂದಲೇ ಈ ರೀತಿಯಲ್ಲಿ ನೀಚಮಟ್ಟದಲ್ಲಿ ಬಂಧನ ಪ್ರಕ್ರಿಯೆ ನಡೆದಿರುವುದಾಗಿ ಅಭಿಪ್ರಾಯ ವ್ಯಕ್ತವಾಗಿದೆ.

 

ಬುಧವಾರ ತಡವಾಗಿ ಬಂದ ವರದಿಯಂತೆ, ದೇವಯಾನಿಯವರ ಕಚೇರಿಯನ್ನು ನ್ಯೂಯಾರ್ಕಿನಲ್ಲಿರುವ ವಿಶ್ವಸಂಸ್ಥೆಯ ಆವರಣಕ್ಕೆ ಸ್ಥಳಾಂತರಿಸಲಾಗಿದ್ದು, ವಿಯೆನ್ನಾ ಒಪ್ಪಂದದಂತೆ ಅಲ್ಲೀಗ ಅವರಿಗೆ ಸಂಪೂರ್ಣ ಸೇವೆ ಕಲ್ಪಿಸಲಾಗುತ್ತಿದೆ. ಈ ಹಿಂದೆ ಅವರಿಗೆ ರಾಜತಾಂತ್ರಿಕ ಒಪ್ಪಂದದಂತೆ ಸೌಕರ್ಯ ಒದಗಿಸಿರಲಿಲ್ಲ.

ಮಾಹಿತಿ ಕೃಪೆ: ಔಟ್'ಲುಕ್ ಇಂಡಿಯಾ, ಅಲ್'ಜಝೀರಾ, ಝೀ

.....ಇಳಯರಾಜ.ಕೆ.ಸುಬ್ಬಯ್ಯ


ನಡು ರಸ್ತೆಯಲ್ಲಿ ಬೇಡಿ ಹಾಕಿ ಅಮೆರಿಕದಲ್ಲಿ ಭಾರತದ ಉಪ ರಾಯಭಾರಿ ಬಂಧನ..!

ರಾಯಭಾರಿ ಬಂಧನ ವಿಷಯ ಉಭಯ ಸಂಬಂಧಕ್ಕೆ ಧಕ್ಕೆ ತರದು; ಅಮೆರಿಕ ವಿಶ್ವಾಸ

ವಿವಸ್ತ್ರಗೊಳಿಸಿ ವಿಚಾರಣೆ, ಮಾದಕ ದ್ರವ್ಯ ವ್ಯಸನಿಗಳ ಸೆಲ್‌ನಲ್ಲಿ ಕೂಡಿ ಹಾಕಿದ್ದ ಅಮೆರಿಕ

ಅಮೆರಿಕ ದುರ್ವರ್ತನೆಗೆ ಖಡಕ್ ತಿರುಗೇಟು

ಅಮೆರಿಕದಲ್ಲಿ ಅವಮಾನಿತಳಾದ ದೇವಯಾನಿ ಖೋಬ್ರಾಗಡೆ ಯಾರು?

ಅಮೆರಿಕ ರಾಯಭಾರ ಕಚೇರಿಯ ಸಲಿಂಗಿಗಳ ವಿರುದ್ಧ ಕ್ರಮ ಕೈಗೊಳ್ಳುವುದೇ ಸರ್ಕಾರ..?

 

 

 

 

 

 

Add comment
 

More items in this section