ಥೂ ನಿಮ್ ಮುಖಕ್ಕೆ! ಭಾರತವನ್ನ ನೋಡಿ ಕಲಿಯಿರಿ ಸ್ವಲ್ಪ; ಸರ್ಕಾರಕ್ಕೆ ಪಾಕ್ ಮಾದ್ಯಮ ತಪರಾಕಿ

ಇಸ್ಲಾಮಾಬಾದ್: ಭಾರತೀಯ ಉಪರಾಯಭಾರಿ ದೇವಯಾನಿ ಖೋಬ್ರಾಗಡೆಯವರನ್ನು ಅಮೆರಿಕ ಭದ್ರತಾ ಸಿಬ್ಬಂಧಿ ಹೀನಾಯವಾಗಿ ನಡೆಸಿಕೊಂಡು ಬಂಧಿಸಿದ ಧೋರಣೆಯ ವಿರುದ್ಧ ಖಡಕ್ ನಿಲುವು ತಳೆದಿರುವ ಭಾರತದ ಪ್ರತಿಕ್ರಿಯೆಗೆ ಬೆರಗಾಗಿರುವ ನೆರೆಯ ಪಾಕಿಸ್ತಾನದ ಮಾದ್ಯಮಗಳು, ಒಂದು ವೇಳೆ ಪಾಕಿಸ್ತಾನದ ಪ್ರತಿನಿಧಿಗಳನ್ನು ಅಮೆರಿಕ ಈ ರೀತಿ ನಡೆಸಿಕೊಂಡಿದ್ದರೆ ಇದೇ ರೀತಿ ಪ್ರತಿಕ್ರಿಯಿಸಲು ಪಾಕ್ ನಾಯಕರಿಗೇ ಮೀಟರಿತ್ತೇ ಎಂದು ಪ್ರಶ್ನಿಸಿವೆ.

ಪಾಕಿಸ್ತಾನದ ಪ್ರತಿನಿಧಿಗಳನ್ನು ಅಮರಿಕ ಹೀನಾಯವಾಗಿ ನಡೆಸಿಕೊಂಡರೂ ಎಲ್ಲದಕ್ಕೂ ತಲೆಯಾಡಿಸಿಕೊಂಡು ಬರುವಷ್ಟರಮಟ್ಟಿಗೆ ಅಸಹಾಯಕ ನಾಯಕರಿರುವ ಆ ರಾಷ್ಟ್ರದ ದೌರ್ಬಲ್ಯವನ್ನು ಟೀಕಿಸಿ ವರದಿ ಪ್ರಕಟವಾಗಿದ್ದು, ದಿ ನ್ಯೂಸ್ ಇಂಟರ್ ನ್ಯಾಷನಲ್ ಪತ್ರಿಕೆಯ ರಾಜತಾಂತ್ರಿಕ ಸಂಪಾದಕಿ ಮರಿಯಾನ ಬಾರ್ಬರ ಅವರು ಬರೆದಿರುವ ಅಂಕಣದಲ್ಲಿ ಗುರುತರವಾಗಿ ತಮ್ಮ ದೇಶದ ನಾಯಕರ ಹೇಡಿತನಕ್ಕೆ ಅಸಮಾಧಾನಗೊಂಡಿದ್ದಾರೆ.