FacebookTwitter

70 ಜನರಿಗೆ ಕಚ್ಚಿ ಗಾಯಗೊಳಿಸಿದ ಮೀನುಗಳು..!

    User Rating:  / 0
    PoorBest 

ರೊಸಾರಿಯೋ(ಡಿ.27):ಮೀನುಗಳೆಂದರೆ ಸಾಮಾನ್ಯವಾದ ನಂಬಿಕೆ ಅವು ಯಾರನ್ನೂ ಕಚ್ಚುವುದಿಲ್ಲ. ಮನುಷ್ಯ ನೀರಲ್ಲಿ ಇಳಿದರೆ ಮೆತ್ತಗೆ ಮುಟ್ಟಿ ಹೋಗುತ್ತವೆ ಎಂಬುದು. ಆದರೆ, ಈ ನಂಬಿಕೆಗೆ ಅಪವಾದವೆಂಬಂತೆ ಮೀನುಗಳು ಮನುಷ್ಯರನ್ನು ಕಚ್ಚಿ ಗಾಯಗೊಳಿಸಿರುವ ಅಪರೂಪದ ಘಟನೆ ಅರ್ಜೆಂಟೀನಾ ದೇಶದಿಂದ ವರದಿಯಾಗಿದೆ.

ಅರ್ಜೆಂಟೀನಾ ಪ್ರಸಿದ್ಧ ರೊಸಾರಿಯೋ ನಗರದ ಪರಾನಾ  ನದಿಯಲ್ಲಿ ಕ್ರಿಸ್ ಮಸ್ ದಿನದಂದು ಈಜಲು ತೆರಳಿದ್ದ ಬರೋಬ್ಬರಿ 70 ಮಂದಿಯನ್ನ ಕಚ್ಚಿ ಮೀನುಗಳು ಗಾಯಗೊಳಿಸಿವೆ. 7 ವರ್ಷದ ಬಾಲಕಿಯ ಬೆರಳಿನ ಅರ್ಧ ಭಾಗವನ್ನೇ ಕಚ್ಚಿ ತಿಂದಿವೆ. ಮೀನಿನಿಂದ ಕಚ್ಚಿಸಿಕೊಂಡವರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗಾಗಿ,  ಪರಾನಾ ನದಿ ತೀರದಲ್ಲಿ ತುರ್ತು ಚಿಕಿತ್ಸಾ ಸೌಲಭ್ಯವನ್ನು ಒದಗಿಸಲಾಗಿದೆ.

ಮಾಹಿತಿ ಕೃಪೆ(ಐಬಿಎನ್)

 

 

 

Add comment




 

More items in this section