FacebookTwitter

ರಷ್ಯಾದ ವೊಲ್ಗೋಗ್ರಾಡ್`ನಲ್ಲಿ ಮತ್ತೊಂದು ಸ್ಫೋಟ-10 ಸಾವು

    User Rating:  / 0
    PoorBest 

 

ಮಾಸ್ಕೋ(ಡಿ.30): ಆತ್ಮಾಹತ್ಯಾ ಬಾಂಬ್ ದಾಳಿ ನಡೆದು 24 ಗಂಟೆ ಕಳೆಯುವಷ್ಟರಲ್ಲಿ ರಷ್ಯಾದ ವೊಲ್ವೋಗ್ರಾಡ್ ನಗರದಲ್ಲಿ ಮತ್ತೊಂದು ಸ್ಫೋಟ ಸಂಭವಿಸಿದೆ. ನಹರದ ಸಂಚಾರಿ ಬಸ್`ನಲ್ಲಿ ಸಂಭವಿಸಿದ ಸ್ಫೋಟದಲ್ಲಿ 10 ಮಂದಿ ಸಾವಿಗೀಡಾಗಿದ್ದಾರೆ.

ಇದೊಂದು ಪ್ರಬಲ ಸ್ಫೋಟವಾಗಿದ್ದು, ಗಾಯಗೊಂಡಿರುವ 10 ಮಂದಿಯ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದೊಂದು ಉಗ್ರರ ಕೃತ್ಯ ಎಂಬುದನ್ನ ರಷ್ಯಾದ ರಾಷ್ಟ್ರೀಯ ತನಿಖಾ ದಳ ಸ್ಪಷ್ಟಪಡಿಸಿದೆ. ಈ ಸ್ಫೋಟವೂ ಸಹ ಆತ್ಮಹತ್ಯಾ ಬಾಂಬ್ ದಾಳಿಯೇ ಆಗಿರುವ ಸಾಧ್ಯತೆ ಇದ್ದು, ಈ ಕುರಿತು ತನಿಖೆ ನಡೆಯುತ್ತಿದೆ.

ಭಾನುವಾರವಷ್ಟೇ ವೊಲ್ವೋಗ್ರಾಡ್`ನ ರೈಲು ನಿಲ್ದಾಣದಲ್ಲಿ ಆತ್ಮಹತ್ಯಾ ಬಾಂಬ್ ದಾಳಿ ನಡೆದಿತ್ತು. ಇದರಲ್ಲಿ 17 ಮಂದಿ ಸಾವಿಗೀಡಾಗಿದ್ದರು.

 

 

 

Add comment




 

More items in this section