FacebookTwitter

ನಮ್ಮ ತಂಟೆಗೆ ಬಂದರೆ ಅಣ್ವಸ್ತ್ರ ಪ್ರಯೋಗ - ಅಮೆರಿಕಕ್ಕೆ ಕೊರಿಯಾ ಎಚ್ಚರಿಕೆ

    User Rating:  / 0
    PoorBest 

ಸಿಯೋನ್(ಜ.01): ಸರ್ವಾಧಿಕಾರಿ ರಾಷ್ಟ್ರ ಉತ್ತರ ಕೊರಿಯಾ ವಿಶ್ವದ ದೊಡ್ಡಣ್ಣ ಅಮೆರಿಕದ ವಿರುದ್ಧ ಮತ್ತೆ ಬುಸುಗುಟ್ಟಿದೆ. ಉತ್ತರ ಕೊರಿಯಾದ ಆಂತರಿಕ ವಿಷಯಗಳಲ್ಲಿ ಪದೇ ಪದೇ ಮೂಗು ತೂರಿಸುತ್ತಿರುವ ಅಮೆರಿಕಕ್ಕೆ ಖಡಕ್ ಎಚ್ಚರಿಕೆ ನೀಡಿದೆ. 'ಉತ್ತರ ಕೊರಿಯಾ ಅಪಾರ ಪ್ರಮಾಣದ ಅಣ್ವಸ್ತ್ರ ಹೊಂದಿದ್ದು, ಈ ನೆಲದಲ್ಲಿ ಯುದ್ಧದ ವಾತಾವರಣ ಸೃಷ್ಟಿಯಾದರೆ ಬೃಹತ್ ಪರಮಾಣು ದುರಂತ ಕಾದಿದೆ, ಈ ಸಂಘರ್ಷದಲ್ಲಿ ಅಮೆರಿಕಾಕ್ಕೂ ಗಂಡಾಂತರ ಕಾದಿದೆ' ಎಂದು ಸರ್ವಾಧಿಕಾರಿ ಕಿಮ್ ಜಾಂಗ್ ಹೇಳಿದ್ದಾರೆ. .

ಈ ನೆಲದಲ್ಲಿ ಮತ್ತೆ ಯುದ್ಧ ಆರಂಭವಾದರೆ, ಇದರಿಂದ ಬೃಹತ್ ಪ್ರಮಾಣದ ಪರಮಾಣು ದುರಂತ ಉಂಟಾಗಲಿದ್ದು, ಅಮೆರಿಕ ಸಹ ಪರಮಾಣು ದುರಂತ ಅನುಭವಿಸಲಿದೆ ಎಂದು ಹೊಸ ವರ್ಷದ ಸಮಯದಲ್ಲಿ ಟಿ.ವಿ ಸಂದರ್ಶನದಲ್ಲಿ ಕಿಮ್ ಜಾಂಗ್ ಎಚ್ಚರಿಸಿದ್ದಾರೆ.

ಮಿಲಿಟರಿ ಸಂಘರ್ಷದಿಂದಾಗಿ ನಮ್ಮ ದೇಶದಲ್ಲಿ ಭಯಾನಕ ವಾತಾವರಣವಿದ್ದು, ಯಾವುದೇ ಸಂದರ್ಭದಲ್ಲಿ ಯುದ್ಧದ ವಾತಾವರಣ ನಿರ್ಮಾಣ ಆಗಬಹುದು. ಅಂತಹ ವಾತಾವರಣ ಏನಾದರು ನಿರ್ಮಾಣವಾದರೆ, ನಾನು ಶಾಂತಿಗಾಗಿ ಮನವಿ ಮಾಡುವುದಿಲ್ಲ. ನಮ್ಮ ರಕ್ಷಣೆಗೆ ಇರುವ ಅಪಾರದ ಪ್ರಮಾಣದ ಅಣ್ವಸ್ತ್ರಗಳನ್ನು ಶತ್ರುಗಳ ವಿನಾಶಕ್ಕೆ ಬಳಸುತ್ತೇನೆ ಎಂದು ಅಮೆರಿಕೆ ಮತ್ತು ದಕ್ಷಿಣ ಕೊರಿಯಾಗೆ  ಕಿಮ್ ಜಾಂಗ್ ಖಡಕ್ ಎಚ್ಚರಿಕೆ ನೀಡಿದ್ದಾರೆ. .

ಮಿಲಿಟರಿಯನ್ನ ಬಳಸಿಕೊಂಡು ಉತ್ತರ ಕೊರಿಯಾದ ಗದ್ದುಗೆ ಏರಲು ಹವಣಿಸಿದ ಆರೋಪ ಹೊರಿಸಿ ತನ್ನ ರಾಜಕೀಯ ಗುರು ಮತ್ತು ಚಿಕ್ಕಪ್ಪ ಜಾಂಗ್ ಸಾಂಗ್ ಥೇಕ್ ಅವರಿಗೆ ಇತ್ತೀಚೆಗೆ ಕಿಮ್ ಜಾಂಗ್ ಮರಣ ದಂಡನೆ ವಿಧಿಸಿದ್ದ.. ಜಾಂಗ್ ಸಾಂಗ್ ಥೇಕ್ ಮರಣದಂಡನೆ ಬಳಿಕ ಮಿಲಿಟರಿ ಸಂಘರ್ಷ ಮತ್ತಷ್ಟು ಹೆಚ್ಚಾಗಿದ್ದು, ಯಾವುದೇ ಸಂದರ್ಭದಲ್ಲಿ ಕ್ಷಿಪ್ರ ಕ್ರಾಂತಿ ಏರ್ಪಡುವ ವಾತಾವರಣವಿದೆ.

ಇದರ ಹಿಂದೆ ಅಮೆರಿಕ ಮತ್ತು ದಕ್ಷಿಣ ಕೊರಿಯಾದ ಸಂಚಿದೆ ಎಂಬುದು ಉತ್ತರಕೊರಿಯಾ ಸರ್ವಾಧಿಕಾರಿಯ ಆರೋಪವಾಗಿದೆ.

ಉತ್ತರ ಕೊರಿಯಾದ ಸರ್ವಾಧಿಕಾರಿ ಹೇಳಿದಂತೆ ಅಣ್ವಸ್ತ್ರ ಪ್ರಯೋಗವಾದರೆ ಅರ್ಧ ವಿಶ್ವ ನಾಮಾವೇಶವಾಗಲಿದೆ.

 

 

 

Add comment
 

More items in this section