FacebookTwitter

ಕೋರ್ಟಿಗೆ ಬರ್ತಿದ್ದ ಮುಷರಫ್’ಗೆ ‘ಎದೆನೋವು’!

    User Rating:  / 0
    PoorBest 
ಪರ್ವೇಜ್ ಮುಷರಫ್/ಸಾಂದರ್ಭಿಕ ಚಿತ್ರ_ungu

ಇಸ್ಲಾಮಾಬಾದ್: ತನ್ನ ಅಧಿಕಾರಗಾದಿಯಲ್ಲಿ ಅಸಂವಿಧಾನಿಕವಾಗಿ ಆದೇಶ ನೀಡಿರುವ ಗಂಭೀರ ಆರೋಪದ ಪ್ರಕರಣ ಎದುರಿಸುತ್ತಿರುವ ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಅವರು ಗುರುವಾರ ನ್ಯಾಯಾಂಗ ವಿಚಾರಣೆಗೆ ಹಾಜರಾಗಲು ಬರುತ್ತಿದ್ದ ವೇಳೆ ಮಾರ್ಗದ ಮಧ್ಯೆ ದಿಢೀರನೆ ಎದೆ ನೋವು ಕಾಣಿಸಿಕೊಂಡ ಪರಿಣಾಮ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ.

ಎದೆನೋವು ರೋಗಿ ಮುಷರಫ್ ಇದೀಗ ತೀವ್ರ ನಿಗಾ ಘಟಕದಲ್ಲಿ ವೈದ್ಯಕೀಯ ತಪಾಸಣೆಯಲ್ಲಿದ್ದಾರೆ. ಈ ಹಿಂದೆ ಎರಡು ಬಾರಿಯೂ ನ್ಯಾಯಾಲಯಕ್ಕೆ ಹಾಜರಾಗದೆ ತಪ್ಪಿಸಿಕೊಂಡಿರುವ ಆರೋಪಿ ಮುಷರಫ್ ಅವರಿಗೆ ಜಾಮೀನು ರಹಿತ ವಾರೆಂಟ್ ಜಾರಿಗೆಗೊಳಿಸಿ ಎಂದು ವಿಶೇಷ ನ್ಯಾಯಾಲಯದ ಪ್ರಾಸಿಕ್ಯೂಟರ್ ಅಕ್ರಮ್ ಶೇಖ್ ಅವರು ಒತ್ತಾಯಿಸುತ್ತಾ ಬರುತ್ತಿದ್ದ ಬೆನ್ನಲ್ಲೇ ಮುಷರಫ್ ಅವರಿಗೆ ಎದೆನೋವು ಕಾಣಿಸಿಕೊಂಡಿದೆ.

ತನ್ನ ಕಕ್ಷಿದಾರ ಪರ್ವೇಜ್ ಮುಷರಫ್ ಅವರು ನ್ಯಾಯಾಲಯಕ್ಕೆ ಹಾಜರಾಗುತ್ತಿದ್ದ ವೇಳೆ ಎದೆ ನೋವು ಕಾಣಿಸಿಕೊಂಡಿರುವ ದುಸ್ಥಿತಿಯಿಂದಾಗಿ ಅವರು ವಿಚಾರಣೆಗೆ ಹಾಜರಾಗಲು ಅಸಾಧ್ಯವಾಗಿದ್ದು, ಗೌರವಾನ್ವಿತ ನ್ಯಾಯಲಯ ತನ್ನ ಕಕ್ಷಿದಾರ ಮುಷರಫ್ ಅವರು ನ್ಯಾಯಾಂಗ ಆದೇಶವನ್ನು ಪಾಲಿಸುತ್ತಿಲ್ಲವೆಂದು ಅನ್ಯತಾ ಭಾವಿಸಬಾರದೆಂದು ಮನವಿ ಮಾಡಿಕೊಂಡಿರುವ ಆರೋಪಿ ಪರ ವಕೀಲ ಖಾಲಿದ್ ರಂಝಾ, ಎದೆನೋವು ಕಾಣಿಸಿಕೊಂಡು ಆಸ್ಪತ್ರೆ ಸೇರಿರುವ ಮುಷರಫ್ ಅವರಿಗೆ ಭದ್ರತೆ ಒದಗಿಸುವುದೇ ಇದೀಗ ಎದ್ದಿರುವ ಗಂಭೀರ ಸಮಸ್ಯೆಯಾಗಿದ್ದು, ಅವರೊಂದಿಗೆ ಅಂಗರಕ್ಷಕ ಪಡೆ ಇರುವುದರಿಂದಾಗಿ ತತ್ಕಾಲಿಕವಾಗಿ ಯಾವುದೇ ತೊಡಕುಗಳಿಲ್ಲ ಎಂದು ಪ್ರತಿಪಾಧಿಸಿದ್ದಾರೆ.

ಮುಷರಫ್ ಅವರು ನ್ಯಾಯಾಲಯಕ್ಕೆ ಹಾಜರಾಗುವ ದಿನವಾದ ಗುರುವಾರ ಭದ್ರತಾ ದೃಷ್ಟಿಯಿಂದ ಮಾರ್ಗದಲ್ಲೆಡೆ ಸಾವಿರ ಮಂದಿ ವಿಶೇಷ ಪೊಲೀಸ್ ಸಿಬ್ಬಂಧಿಗಳನ್ನು ನಿಯೋಜಿಸಲಾಗಿತ್ತು. ಇತ್ತ ಎದೆನೋವು ಕಾಣಿಸಿಕೊಂಡ ಆರೋಪಿ ಮುಷರಫ್ ತನ್ನ ಅಂಗರಕ್ಷರ ಭದ್ರತೆಯೊಂದಿಗೆ ಬೇರೆ ಮಾರ್ಗವಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ನಡುವೆ ಪ್ರಮುಖ ಆರೋಪಿ ಪರ್ವೇಜ್ ಮುಷರಫ್ ಅವರ ಗೈರು ಹಾಜರಿಯಲ್ಲಿ ವಿಶೇಷ ನ್ಯಾಯಾಲಯದಲ್ಲಿ ಪ್ರಕರಣದ ಪರ ವಿರೋಧಿ ಬಣದ ಹಿರಿಯ ವಕೀಲರ ನಡುವೆ ನಡೆದ ಅನಗತ್ಯ ವಾದ ಪ್ರತಿವಾದ ಕೂಡ ಸುಗಮ ನ್ಯಾಯಾಂಗ ಪ್ರಕ್ರಿಯೆಗೆ ಅಡಚಣೆಯನ್ನುಂಟುಮಾಡಿದ ಪರಿಣಾಮ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಲಾಯಿತು.

ಪಾಕಿಸ್ತಾನದ ಸೇನಾ ಮುಖ್ಯಸ್ಥರಾಗಿದ್ದ ಅಧ್ಯಕ್ಷ ಮುಷರಫ್, 2007 ನವೆಂಬರ್ 3 ರಂದು ಸಂವಿಧಾನದ ನೀತಿ ನಿರ್ದೇಶನಗಳ ಎಲ್ಲೆ ಮೀರಿ ತನ್ನ ಅಧಿಕಾರದ ಪ್ರಭಾವದಿಂದ ಆದೇಶ ಹೊರಡಿಸಿರುವ ಆರೋಪ ಎದುರಿಸುತ್ತಿದ್ದು, ಈ ಆರೋಪವೊಂದುವೇಳೆ ಸತ್ಯೆವೆಂದು ಸಾಭೀತಾದರೆ ಜೀವಾವಧಿ ಶಿಕ್ಷೆ ಅಥವಾ ಮರಣ ದಂಡನೆ ಎದುರಿಸಬೇಕಾಗುತ್ತದೆ.

 

 

 

Add comment
Comments   

 
0 #1 Efren 2014-06-05 16:04
Howdy! Someone in my Myspace group shared this site with us so I came to look
it over. I'm definitely enjoying the information. I'm book-marking and will
be tweeting this to my followers! Great blog and wonderful design.

Feel free to visit my webpage ... Goedkope nike air max: http://tinyurl.com/nmrox8k
Quote
 

 

More items in this section