FacebookTwitter

ಗರ್ಲ್'ಫ್ರೆಂಡ್'ಗೆ ಸರ್'ಪ್ರೈಸ್ ಕೊಡಲುಹೋಗಿ ವಾಷಿಂಗ್ ಮೆಷೀನ್'ನಲ್ಲಿ ಬೆತ್ತಲೆ ಸಿಕ್ಕಿಕೊಂಡ ಯುವಕ

    User Rating:  / 0
    PoorBest 

ಮೆಲ್ಬೋರ್ನ್(ಜ.06): ಇಲ್ಲೊಂದು ವಿಚಿತ್ರ ಘಟನೆ ನಡೆದಿದೆ. ತನ್ನ ಗರ್ಲ್'ಫ್ರೆಂಡ್'ಗೆ ಸರ್'ಪ್ರೈಸ್ ಕೊಡುವ ಉದ್ದೇಶದಿಂದ ವಾಷಿಂಗ್ ಮೆಷೀನ್'ನಲ್ಲಿ ಅಡಗಿಕೊಂಡಿದ್ದ ಯುವಕನೊಬ್ಬ ಹೊರಬರಲಾರದೆ ಒಂದಷ್ಟು ಗಂಟೆ ಕಾಲ ಪರದಾಡಿ ಘಟನೆ ವರದಿಯಾಗಿದೆ. ಗಂಟೆಗಟ್ಟಲೆ ಎಣ್ಣೆ ಉಜ್ಜಿ ಹರಸಾಹಸ ಮಾಡಿ ಪೊಲೀಸರು ಆತನನ್ನ ಹೊರಗೆಳೆದಿದ್ದಾರೆ. ಶನಿವಾರ ಮಧ್ಯಾಹ್ನ ಈ ಪ್ರಸಂಗ ನಡೆದಿದೆ.

ತನ್ನ ಗೆಳತಿಗೆ ಅಚ್ಚರಿಯ ಶಾಕ್ ನೀಡಬೇಕೆಂಬ ಉದ್ದೇಶದಿಂದ ಯುವಕನೊಬ್ಬ ಸಂಪೂರ್ಣ ಬೆತ್ತಲೆಯಾಗಿ ಸೀದಾ ವಾಷಿಂಗ್ ಮೆಷೀನ್'ನಲ್ಲಿ ಅಡಗಿ ಕುಳಿತಿದ್ದಾನೆ. ದುರದೃಷ್ಟವಶಾತ್ ಆತ ಒಳಗೆ ಸಿಕ್ಕಿಕೊಂಡು ಹೊರಬರಲಾಗದೇ ಒದ್ದಾಡುವಂತಾಯಿತು.

ಈತನನ್ನ ಹೊರತರಲು ನಿಜಕ್ಕೂ ಭಾರೀ ಕಷ್ಟವನ್ನೇ ಪಡಬೇಕಾಯಿತು. ಪೊಲೀಸ್, ಅಗ್ನಿಶಾಮಕ ಸಿಬ್ಬಂದಿ, ಅರೆವೈದ್ಯಕೀಯ ಸಿಬ್ಬಂದಿ ಮತ್ತು ಸ್ಥಳೀಯ ಶೋಧನಾ ತಂಡಗಳು ಬಹಳ ಎಚ್ಚರಿಕೆಯಿಂದ ಈತನನ್ನ ರಕ್ಷಣಾ ಕಾರ್ಯದಲ್ಲಿ ನಿರತವಾಗಿದ್ದವು. ಆಲಿವ್ ಎಣ್ಣೆಯನ್ನ ಆತನಿಗೆ ಸವರಿ ನಿಧಾನವಾಗಿ ಮೆಷೀನ್'ನಿಂದ ಹೊರಗೆಳೆಯಲಾಯಿತು.

ಗರ್ಲ್'ಫ್ರೆಂಡ್'ಗೆ ಅಚ್ಚರಿ ನೀಡಬೇಕೆಂದುಕೊಂಡಿದ್ದ ಈ ಯುವಕ ತನಗಾದ ಅವಮಾನದಿಂದ ಸ್ವತಃ ತಾನೇ ಆಘಾತಕ್ಕೀಡಾಗಿದ್ದಾನೆ. ವಾಷಿಂಗ್ ಮೆಷೀನ್'ನಿಂದ ಹೊರಬಂದ ಆತ ಮುಜುಗರದಿಂದ ತಲೆತಗ್ಗಿಸಿದನಂತೆ...

 

 

 

Add comment
 

More items in this section