FacebookTwitter

ಮಂಗಳಗ್ರಹಕ್ಕಿಂತಲೂ ಶೀತವಾದ ಅಮೆರಿಕ-ಮೈನಸ್ 52 ಡಿಗ್ರಿಗೆ ಕುಸಿದ ಉಷ್ಣಾಂಶ

    User Rating:  / 0
    PoorBest 

ಚಿಕಾಗೋ(ಜ.08): ವಿಶ್ವದ ದೊಡ್ಡಣ್ಣ ಅಮೆರಿಕ ಮತ್ತು ಕೆನಡಾ ಭೀಕರ ಶೀತಗಾಳಿಗೆ ಸಿಲುಕಿವೆ. ಹಿಂದೆಂದೂ ಕಂಡು ಕೇಳರಿಯದ ಪ್ರಮಾಣದಲ್ಲಿ ಉಷ್ಣಾಂಶ ಕುಸಿತ ಕಂಡಿದೆ. ಮಂಗಳವಾರ ಎಂಬರ್ರಾಸ್, ಮಿನ್ನೆಸೊಟಾ ವಲಯಗಳಲ್ಲಿ ಮೈನಸ್ 35 ಡಿಗ್ರಿ ದಾಖಲಾಗಿದ್ದ ಉಷ್ಣಾಂಶ ಇವತ್ತು ಮತ್ತಷ್ಟು ಕುಸಿದಿದೆ. ಮೊಂಟಾನಾ ವಲಯದಲ್ಲಿ ಸುಮಾರು ಮೈನಸ್ 52 ಡಿಗ್ರಿ ಉಷ್ಣಾಂಶ ದಾಖಲಾಗಿದೆ. ಇಂಡಿಯಾನಾ, ಲೋವಾ, ಮೇರಿಲ್ಯಾಂಡ್, ನೆಬ್ರಸ್ಕಾ, ಮಿಚಿಗನ್, ಸೌತ್ ದಕೋಟಾ, ವರ್ಜಿನಿಯಾ, ಸೌತ್ ವರ್ಜಿನಿಯಾ, ಮಿನ್ನೆಸೋಟಾ ಪ್ರದೇಶಗಳಲ್ಲಿ ಇದೇ ಉಷ್ಣಾಂಶ ಇದೆ.

ಬಿಸಿ ನೀರನ್ನ ಮೇಲಕ್ಕೆಸೆದರೆ ಮಂಜುಗಡ್ಡೆಯಾಗುತ್ತೆ: ಅಮೆರಿಕದ ಹಲವೆಡೆ ವಾತಾವರಣ ಹೇಗಿದೆ ಎಂದರೆ ಒಂದು ಗ್ಲಾಸ್ ಬಿಸಿ ನೀರನ್ನ ಮೇಲಕ್ಕೆಸೆದರೆ ಅದು ಕೆಳಗೆ ಬರುವಷ್ಟರಲ್ಲಿ ಮಂಜುಗಡ್ಡೆಯಾಗಿರುತ್ತೆ. 187 ಮಿಲಿಯನ್ ಜನ ಮೈಕೊರೆಯುವ ಚಳಿಯಲ್ಲಿ ಸಿಲುಕಿದ್ದಾರೆ.ಎತ್ತ ನೋಡಿದರತ್ತ ಬರೀ ಮಂಜುಗಡ್ಡೆಗಳೇ ಗೋಚರಿಸುತ್ತಿವೆ. ನಗರಗಳೆಲ್ಲ ಮಂಜಿನಿಂದ ಆವೃತ್ತವಾಗಿದ್ದು, ಅಂಟಾರ್ಟಿಕ ಖಂಡದಂತೆ ಭಾಸವಾಗುತ್ತಿವೆ. ಮನೆಗಳು, ವಾಹನಗಳು, ರಸ್ತೆಗಳೆಲ್ಲ ಬೃಹತ್ ಗಾತ್ರದ ಮಂಜುಗಡ್ಡೆಯಿಂದ ಆವೃತ್ತವಾಗಿದೆ. ರಸ್ತೆ ಸಂಚಾರವೂ ಬಂದ್ ಆಗಿದೆ. ಸುಮಾರು 2-3 ಅಡಿಗಳಷ್ಟು ಎತ್ತರಕ್ಕೆ ಮಂಜುಗಡ್ಡೆಯ ರಾಶಿ ಬಿದ್ದಿದೆ.

ಜೈಲಿಗೆ ವಾಪಸ್ ಬರುತ್ತಿರುವ ಎಸ್ಕೇಪ್ ಆಗಿದ್ದ ಕೈದಿಗಳು: ಕೆಂಟುಕಿ ನಗರದಲ್ಲಿ ಜೈಲಿನಿಂದ ತಪ್ಪಿಸಿಕೊಂಡಿದ್ದ ಹಲವು ಕೈದಿಗಳು, ಹೊರಗಡೆ ಭೀಕರ ಶೀತಗಾಳಿಯಿಂದ ತತ್ತರಿಸಿಹೋಗಿದ್ದು, ಮೈಕೊರೆವ ಚಳಿ ತಾಳಲಾರದೆ ತಾವಾಗಿಯೇ ಜೈಲಿಗೆ ವಾಪಸ್ ಬರುತ್ತಿದ್ದಾರೆ ಎಂದು ವರದಿಯಾಗಿದೆ.

ಎಂತಹ ಚಳಿಗಾಲದಲ್ಲೂ ಬೆಳಕಿನ ವಾತಾವರಣವಿರುತ್ತಿದ್ದ ಫ್ಲಾರಿಡಾ ಮತ್ತು ಕ್ಯಾಲಿಫೋರ್ನಿಯಾ ನಗರಗಳಲ್ಲಿ ಸೂರ್ಯನ ಸುಳಿವೇ ಇಲ್ಲದಾಗಿದೆ. ಇದುವರೆಗೂ ಭಯಾನಕ ಶೀತಗಾಳಿಗೆ ಸಿಲುಕಿ ಅಮೆರಿಕದಲ್ಲಿ 9 ಮಂದಿ ಅಸುನೀಗಿದ್ದಾರೆ.

ವಾಷಿಂಗ್ಟನ್, ನ್ಯೂಯಾರ್ಕ್ ನಗರಗಳಲ್ಲೂ ಪರಿಸ್ಥಿತಿ ತೀರಾ ವಿಭಿನ್ನವಾಗಿ ಏನೂ ಇಲ್ಲ. ಸಾಮಾನ್ಯ ವಾತಾವರಣದ ಉಷ್ಣಾಂಶ ಮೈನಸ್ 14ರಿಂದ 20 ಡಿಗ್ರಿ ಇದೆ. ಶೀತಗಾಳಿ ಆರಂಭವಾದಾಗ ಮೈನಸ್ 35 ಡಿಗ್ರಿವರೆಗೆ ತಲುಪುತ್ತಿದೆ.

ಶಾಲಾ-ಕಾಲೇಜು. ಸರ್ಕಾರಿ ಕಚೇರಿಗಳು, ವ್ಯಾಪಾರ ವಹಿವಾಟು ಎಲ್ಲವೂ ಬಂದ್ ಆಗಿದೆ. ನೀರಿನ ಪೈಪ್`ಗಳು ಸಹ ಮಂಜುಗಡ್ಡೆಯಾಗಿದೆ. ವಿಮಾನ ಮತ್ತು ರೈಲು ಸಂಚಾರ ಸಹ ಸ್ಥಬ್ಧವಾಗಿದೆ.

ಮಂಗಳಗ್ರಹಕ್ಕಿಂತಲೂ ಶೀತದ ವಾತಾವರಣ: ಅಮೆರಿಕ ಮಂಗಳಗ್ರಹಕ್ಕೆ ಕಳುಹಿಸಿರುವ ರೋವರ್ ಪ್ರತಿದಿನ ುಷ್ಣಾಮಶ ದಾಖಲೆ ರವಾನಿಸುತ್ತಿದ್ದು, ಸದ್ಯ ಮಂಗಳ ಗ್ರಹದ ಉಷ್ಣಾಂಶ ಮೈನಸ್ 25ರಿಂದ 31 ಡಿಗ್ರಿ ಸೆಲ್ಸಿಯಸ್ ಇದ್ದು, ಅಮೆರಿಕದಲ್ಲಿ ಇದಕ್ಕಿಂತಲೂ ಶೀತ ವಾತಾವರಣವಿದೆ.

ಡೆಟ್ರಾಯಿಟ್ ಮತ್ತು ಚಿಕಾಗೋ ನಗರಗಳ ನಡುವಿನ ರೈಲು ಮಾರ್ಗದಲ್ಲಿ ಮಂಜುಗಡ್ಡೆ ಆವೃತ್ತವಾಗಿದ್ದರಿಂದ 500ಕ್ಕೂ ಹೆಚ್ಚು ಮಂದಿ ಮಧ್ಯದಾರಿಯಲ್ಲೇ ರೈಲಿನಲ್ಲಿ ಮೂರ್ನಾಲ್ಕು ದಿನ ಕಳೆದಿದ್ದಾರೆ. ವಿಮಾನ ನಿಲ್ದಾಣಗಳಲ್ಲೂ ಪ್ರಯಾಣಿಕರು ಸಿಲುಕಿದ್ದು, ಪೊಲೀಸರು ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಅಲಿನಾಯ್ಸ್ ಗವರ್ನರ್ ಈ ಪ್ರದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದು, ರಾಷ್ಟ್ರೀಯ ವಿಪತ್ತು ರಕ್ಷಣಾ ದಳ ಕಾರ್ಯಾಚರಣೆಗೆ ಇಳಿದಿದೆ.

 

 

 

 

Add comment




 

More items in this section