FacebookTwitter

ವಿದ್ಯುತ್ ಕಂಬಕ್ಕೆ ಲಘು ವಿಮಾನ ಡಿಕ್ಕಿ-ನಾಲ್ವರ ದುರ್ಮರಣ

    User Rating:  / 0
    PoorBest 

ಟ್ರೈಯರ್/ಜರ್ಮನಿ(ಜ.14): ಮಂಜು ಮುಸುಕಿದ ವಾತಾವರಣದಲ್ಲಿ ಲಘು ವಿಮಾನವೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಮೃತಪಟ್ಟಿರುವ ಘಟನೆ ಜರ್ಮನಿಯ ಟ್ರೈಯರ್ ನಗರದ ಬಳಿ ನಡೆದಿದೆ. ಮೃತಪಟ್ಟ ನಾಲ್ವರೂ ಜರ್ಮನ್ ನಾಗರೀಕರು.

ಇಂಗ್ಲೆಂಡ್`ನಿಂದ ಹೊರಟಿದ್ದ ಸೆಸ್ನಾ ಜೆಟ್ ವಿಮಾನದಲ್ಲಿ ಇಬ್ಬರು ಪೈಲಟ್ ಮತ್ತು ಇಬ್ಬರು ಪ್ರಯಾಣಿಕರಿದ್ದರು. ಫೊಹ್ರೆನ್ ವಾಯುನೆಲೆಗೆ ಹೊರಟಿದ್ದ ವಿಮಾನ ದಾರಿ ಮಧ್ಯೆ ದಟ್ಟ ಮಂಜಿನಿಂದಾಗಿ ದಾರಿ ಕಾಣದೆ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಹೊತ್ತಿ ಉರಿದಿದೆ.
 

 

 

 

Add comment
 

More items in this section