FacebookTwitter

ಇರಾನಲ್ಲಿ ಭಾರೀ ಭೂಕಂಪ, ನೂರಾರು ಸಾವು

    User Rating:  / 0
    PoorBest 

ದುಬೈ(ಏ.16): ಇರಾನ್ ರಾಷ್ಟ್ರದಲ್ಲಿ ಮಂಗಳವಾರ ಮಧ್ಯಾಹ್ನ ಭಾರೀ ಭೂಕಂಪ ಸಂಭವಿಸಿದ್ದು, ನೂರಾರು ಜನರು ಬಲಿಯಾಗಿದ್ದಾರೆ. ಕಂಪನದ ತೀವ್ರತೆ ರಿಕ್ಟರ್ ಮಾಪಕದಲ್ಲಿ 7.8ರಷ್ಟಿತ್ತೆಂದು ಹೇಳಲಾಗಿದೆ....

ಪಾಕಿಸ್ತಾನದ ಗಡಿಭಾಗಕ್ಕೆ ಹೊಂದಿಕೊಂಡಿರುವ ಜಹೇದಾನ್ ನಗರದಲ್ಲಿ ಈ ಭೂಕಂಪ ಆಗಿದೆ. ಜುಹೇದಾನ್ ಮತ್ತು ಪಾಕಿಸ್ತಾನದ ತುರ್ಬಾತ್ ನಗರದ ಮಧ್ಯಭಾಗದಲ್ಲಿ 15 ಕಿಮೀ ಆಳದಲ್ಲಿ ಈ ಕಂಪನದ ಕೇಂದ್ರವಾಗಿತ್ತೆಂದು ಅಮೆರಿಕ ಭೂಸರ್ವೇಕ್ಷಣಾ ಇಲಾಖೆ ತಿಳಿಸಿದೆ... ಭಾರತ ಮತ್ತು ಪಾಕಿಸ್ತಾನವೂ ಸೇರಿದಂತೆ ಸುತ್ತಲಿನ ರಾಷ್ಟ್ರಗಳಲ್ಲೂ ಈ ಕಂಪನದ ಅನುಭವವಾಗಿದೆ. ಇರಾನ್ ಅಧಿಕಾರಿಗಳ ಪ್ರಕಾರ ಕಳೆದ 40 ವರ್ಷಗಳಲ್ಲಿ ಸಂಭವಿಸಿದ ಅತೀ ದೊಡ್ಡ ಭೂಕಂಪ ಇದಾಗಿದೆಯಂತೆ....

ಸಾವಿನ ಸಂಖ್ಯೆ ನಿಖರವಾಗಿ ತಿಳಿದು ಬಂದಿಲ್ಲ. ಅಲ್ಲಿಯ ಮಾಧ್ಯಮಗಳ ಪ್ರಕಾರ ನೂರಕ್ಕೂ ಹೆಚ್ಚು ಜನರು ಸಾವನ್ನಪ್ಪಿರುವ ಶಂಕೆ ಇದೆ. ನಗರದ ಅನೇಕ ಕಡೆ ಕಟ್ಟಡಗಳು ಕುಸಿದಿದ್ದು, ರಕ್ಷಣಾ ಕಾರ್ಯಗಳು ಭರದಿಂದ ಸಾಗಿವೆ. ಸಾವಿನ ಸಂಖ್ಯೆ ಇನ್ನಷ್ಟು ಏರುವ ಅಪಾಯವಿದ್ದೇ ಇದೆ....

ಹಿಂದಿನ ಗಾಯಗಳು
ಇರಾನ್ ದೇಶದಲ್ಲಿ ಭೂಕಂಪದ ದೊಡ್ಡ ಇತಿಹಾಸವೇ ಇದೆ... ಒಂದು ವಾರದ ಹಿಂದಷ್ಟೇ 6.3 ತೀವ್ರತೆಯ ಭೂಕಂಪವಾಗಿ 37 ಜನರನ್ನು ಬಲಿತೆಗೆದುಕೊಂಡಿತ್ತು. ಸಾವಿರಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿತ್ತು....

ಹತ್ತು ವರ್ಷಗಳ ಹಿಂದೆ ಭಾರೀ ಭೂಕಂಪಕ್ಕೆ 25 ಸಾವಿರ ಜನರು ಬಲಿಯಾಗಿದ್ದರು. ಇರಾನಿನ ಬಾಮ್ ಎಂಬ ನಗರ ಬಹುತೇಕ ನಿರ್ನಾಮವಾಗಿ ಹೋಗಿತ್ತು.

 

 

 

Add comment
 

More items in this section