FacebookTwitter

ಗುಡ್ಡಗಾಡು ಓಟದಲ್ಲಿ ಗರ್ಭಿಣಿ ಪ್ರಥಮ

    User Rating:  / 0
    PoorBest 
ಸಾಂದರ್ಭಿಕ ಚಿತ್ರ

ಕಠ್ಮಂಡು: ನೆರೆಯ ನೇಪಾಳದಲ್ಲಿ ಹಿಮಪರ್ವತಗಳ ನಡುವೆ ನಡೆದ ಗುಡ್ಡಗಾಡು ಓಟದ ಸ್ಪರ್ಧೆಯಲ್ಲಿ ಮೂರು ತಿಂಗಳ ಗರ್ಭವತಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. 44 ವರ್ಷದ ಸಾಹಸಿ ಮಹಿಳೆ ಅಂಗ್ ದಮಿ ಶೆರ್ಪಾ ಅವರೇ ಬಹುಮಾನ ವಿಜೇತರು.

42.2 ಕಿ.ಮೀ ಅಂತರದ ಓಟದ ಸ್ಪರ್ಧೆಯನ್ನು 6 ಗಂಟೆ 2 ನಿಮಿಷ 10 ಸೆಕೆಂಡುಗಳಲ್ಲಿ ಕ್ರಮಿಸಿ ಮೊದಲ ಸ್ಥಾನ ಪಡೆದಿದ್ದಾರೆ. ಗಂಡ ಮತ್ತು ಮಗ ಸ್ಪರ್ಧೆಯಲ್ಲಿ ಭಾಗವಹಿಸಲು ವಿರೋಧಿಸಿದ್ದರೂ ಗಂಡನ ಮಾತು ಕೇಳದ ಹೆಂಡ್ತಿ, ತುಂಬಿದ ಹೊಟ್ಟೆಯೊಂದಿಗೆ ಓಟದಲ್ಲಿ ಭಾಗವಹಿಸಿದ್ದರು.

ಅದೃಷ್ಟ ವಶಾತ್ ಯಾವುದೇ ಅನಾಹುತ ನಡೆದಿಲ್ಲ ಎಂದು ಕ್ರೀಡಾ ಪ್ರೇಮಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಗರ್ಭವತಿಯಾಗಿದ್ದುಕೊಂಡು ಯಾಕಮ್ಮಾ ಈ ರೀತಿ ಹುಚ್ಚು ಸಾಹಸ ? ಅದರಲ್ಲೂ ಅಲ್ಪ ಸ್ವಲ್ಪ ಹಿಮ ತುಂಬಿದ್ದ ಅಪಾಯಕಾರಿ ಗುಡ್ಡಗಾಡಿನಲ್ಲಿ ಓಡುವ ಕಾಯಕ ಬೇಕಿತ್ತಾ ಎಂದು ಪ್ರಶ್ನಿಸಿದಕ್ಕೆ, ತಾನು ವೈದ್ಯರ ಸಲಹೆ ಪಡೆದೇ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾಗಿ ತಿಳಿಸಿದ್ದಾರೆ.

ಓಡಲು ವಿಪರೀತ ಆಯಾಸವಾಗದಿದ್ದರೆ..., ಅಂದರೆ ಯಾವುದೇ ತೊಂದರೆಯಾಗುತ್ತಿದೆಯೆಂದು ನಿಮಗನಿಸಿಲ್ಲದಿದ್ದರೆ ಸ್ಪರ್ಧೆಯಲ್ಲಿ ಭಾಗವಹಿಸಲು ಅಡ್ಡಿಯಿಲ್ಲ ಎಂದು ವೈದ್ಯರು ಸಲಹೆ ನೀಡಿದ್ದರಂತೆ.

ಆನಂತರ ನಾಲ್ಕು ಕಿ.ಮೀ ಅಂತರದ ಗುಡ್ಡಗಾಡು ಪ್ರದೇಶದಲ್ಲಿ ಓಡಾಡಿ ಅಭ್ಯಾಸ ಮಾಡಿಕೊಂಡು ಇದೀಗ ಪ್ರಥಮ ಸ್ಥಾನ ಪಡೆದಿದ್ದೇನೆ. ಅಭ್ಯಾಸ ಮಾಡಿಕೊಂಡಿದ್ದರಿಂದ ಯಾವುದೇ ತೊಂದರೆಯಾಗಿಲ್ಲ ಎಂದು ಸ್ಪೂರ್ತಿದಾಯಕ ಹರ್ಷ ವ್ಯಕ್ತಪಡಿಸಿದ್ದಾರೆ.

 

 

 

 

Add comment




 

More items in this section